ಬೆಂಗಳೂರು: ವಿಶ್ವದ ಅತಿ ದೊಡ್ಡ ಟ್ರಾಕ್ಟರ್ ಮತ್ತು ಕೃಷಿ ಉಪಕರಣ ತಯಾರಕಾ ಸಂಸ್ಥೆಯಾದ ಟ್ರ್ಯಾಕ್ಟರ್ಸ್ ಮತ್ತು ಫಾರ್ಮ್ ಎಕ್ವಿಪ್ಮೆಂಟ್ ಲಿಮಿಟೆಡ್ (TAFE) ಅಮೆರಿಕ ಮೂಲದ AGCO ಕಾರ್ಪೊರೇಷನ್ ಜೊತೆ ಮ್ಯಾಸ್ಸಿ ಫರ್ಗುಸನ್ ಬ್ರ್ಯಾಂಡ್, ವಾಣಿಜ್ಯ ಸಮಸ್ಯೆ ಮತ್ತು ಷೇರುಗಳಿಗೆ ಸಂಬಂಧಿಸಿದ ಎಲ್ಲಾ ವಿಷಯಗಳ ಕುರಿತು ನ್ಯಾಯಾಲಯದ ಹೊರಗೆ ಸಮಗ್ರ ಇತ್ಯರ್ಥಕ್ಕೆ ಬಂದಿರುವುದಾಗಿ ಘೋಷಿಸಿದ್ದು, ಈ ಮೂಲಕ ಅವರ ಕಾರ್ಪೊರೇಟ್ ದ್ವೇಷ ಕೊನೆಗೊಂಡಂತಾಗಿದೆ.
ಈ ಒಪ್ಪಂದದ ಪ್ರಕಾರ, ಮ್ಯಾಸ್ಸಿ ಫರ್ಗುಸನ್ ಬ್ರ್ಯಾಂಡ್‌ನ ಮಾಲೀಕತ್ವವು ಭಾರತ, ನೇಪಾಳ ಮತ್ತು ಭೂತಾನ್‌ನ ಏಕೈಕ ಮತ್ತು ವಿಶೇಷ ಮಾಲೀಕರಾಗಿ TAFE ಮಾತ್ರ ಇರಲಿದೆ ಎಂದು TAFE ಸಂಸ್ಥೆಯ ಅಧ್ಯಕ್ಷೆ ಮತ್ತು ವ್ಯವಸ್ಥಾಪಕ ನಿರ್ದೇಶಕಿ ಮಲ್ಲಿಕಾ ಶ್ರೀನಿವಾಸನ್ ತಿಳಿಸಿದ್ದಾರೆ.
“ಮ್ಯಾಸ್ಸಿ ಫರ್ಗುಸನ್” ಹಾಗೂ ಸಂಬಂಧಿತ ಟ್ರೇಡ್‌ಮಾರ್ಕ್‌ಗಳಲ್ಲಿ ಎಲ್ಲಾ ರೀತಿಯ ಹಕ್ಕನ್ನು ಹೊಂದುವುದಾಗಿ TAFE ಹೇಳಿದೆ. ಇದಲ್ಲದೆ, TAFE ದೇಶೀಯ ಟ್ರ್ಯಾಕ್ಟರ್ ತಯಾರಕರ ಇಕ್ವಿಟಿಯ ಶೇಕಡಾ 20.7 ರಷ್ಟು AGCO ಯ ಷೇರುಗಳನ್ನು USD 260 ಮಿಲಿಯನ್‌ಗೆ ಮರಳಿ ಖರೀದಿಸಿದೆ – ಇದು TAFE ಅನ್ನು ಚೆನ್ನೈನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ವೈವಿಧ್ಯಮಯ ಕೈಗಾರಿಕಾ ಸಮೂಹವಾದ ಅಮಾಲ್ಗಮೇಷನ್ಸ್ ಗ್ರೂಪ್‌ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯನ್ನಾಗಿ ಮಾಡಲಿದೆ.
ಅದೇ ಸಮಯದಲ್ಲಿ, AGCO ನಲ್ಲಿನ ತನ್ನ ಪಾಲುದಾರಿಕೆಯನ್ನು 16.3% ಮಟ್ಟದಲ್ಲಿ ಮುಂದುವರಿಸುತ್ತಿರುವ TAFE, ಕೆಲವು ವಿನಾಯಿತಿಗಳನ್ನು ಬಿಟ್ಟರೆ, AGCO ನಿರ್ದೇಶಕರ ಮಂಡಳಿಯ ಶಿಫಾರಸುಗಳ ಪರವಾಗಿ ಷೇರುಗಳ ಮೂಲಕ ಮತ ಚಲಾಯಿಸಿ ಬೆಂಬಲ ನೀಡುವುದಾಗಿ ತಿಳಿಸಿದೆ. ಜೊತೆಗೆ AGCO ಯೊಂದಿಗೆ ನಿಯಮಿತ ಸಂವಹನ ನಡೆಸುವ ಮೂಲಕ ಸಂಸ್ಥೆಯಲ್ಲಿ ದೀರ್ಘಕಾಲಿಕ ಹೂಡಿಕೆಯ ನಿಲುವಿನಲ್ಲಿ ಮುಂದುವರೆಯಲಿದೆ.