ಮೇಘಸ್ಫೋಟದಿಂದ ಸ್ಥಗಿತಗೊಂಡಿದ್ದ ಅಮರನಾಥ ಯಾತ್ರೆ ಪುನಾರಾಂಭ

ಜಮ್ಮು,ಜು.11- ಮೇಘಸ್ಫೋಟದಿಂದ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದ ಅಮರನಾಥ ಯಾತ್ರೆ ಪುನಾರಾಂಭಗೊಂಡಿದೆ. ಬೆಳಗ್ಗೆ ನುನ್ವಾನ ಪಹಾಲ್‍ಗಾಮ್ ಕಡೆಯಿಂದ ಅಮರನಾಥ ಯಾತ್ರೆಯನ್ನು ಆರಂಭಿಸಲಾಗಿದೆ ಎಂದು ಅಮರನಾಥ ಕ್ಷೇತ್ರ ಆಡಳಿತ ಮಂಡಳಿ ತಿಳಿಸಿದೆ. ಬಲ್ವಾಲ ಬೇಸ್ ಕ್ಯಾಂಪ್‍ನಲ್ಲಿ ಕಾಯುತ್ತಿದ್ದ ಯಾತ್ರಾರ್ಥಿಗಳು ಇಂದು ಯಾತ್ರೆ ಪ್ರಾರಂಭಿಸಿದ್ದಾರೆ. ಪ್ರತಿಕೂಲ ಪರಿಸ್ಥಿತಿಯಿಂದ ಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಇಂದಿನಿಂದ ಯಾತ್ರೆ ಪುನಾರಂಭವಾಗಿದ್ದು, ಜಮ್ಮುವಿನ ಮೂಲ ಶಿಬಿರದಿಂದ 4,020 ಯಾತ್ರಿಕರ ತಂಡ ಯಾತ್ರೆ ಪ್ರಾರಂಭಿಸಿದೆ. ಜು.8ರಂದು ಅಮರನಾಥ ಗುಹೆಯ ಸಮೀಪ ಮೇಘ ಸ್ಪೋಟದಿಂದ ದಿಢೀರ್ ಪ್ರವಾಹ ಉಂಟಾಗಿ ಶಿಬಿರಗಳಲ್ಲಿ ತಂಗಿದ್ದ […]