ಕಾಂಗ್ರೆಸ್‍ಗೆ ಕಂಟಕವಾದ AAP ಮತ್ತು AIMIM

ಭೂಪಾಲ್,ಡಿ.11- ಗುಜರಾತ್ ಬಳಿಕ ಮುಂದಿನ ವರ್ಷ ಡಿಸೆಂಬರ್ ನಲ್ಲಿ ನಡೆಯುವ ಮಧ್ಯ ಪ್ರದೇಶ ವಿಧಾನಸಭೆ ಚುನಾವಣೆಯತ್ತ ಅಮ್‍ಆದ್ಮಿ ಮತ್ತು ಎಐಎಂಐಎಂ ಪಕ್ಷಗಳು ಮುಖ ಮಾಡಿದ್ದು, ಕಾಂಗ್ರೆಸ್‍ಗೆ ಒಳಗೊಳಗೆ ಆತಂಕ ಶುರುವಾಗಿದೆ. ಇತ್ತೀಚೆಗೆ ನಡೆದ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಅಮ್‍ಆದ್ಮಿ ಪಕ್ಷ ರಾಜ್ಯಾದ್ಯಂತ ಶೇ.13ರಷ್ಟು ಮತ ಪಡೆದಿದ್ದು, ಐದು ಕ್ಷೇತ್ರಗಳಲ್ಲಿ ಜಯ ಗಳಿಸಿದೆ. ಕಾಂಗ್ರೆಸ್ ಪಕ್ಷವನ್ನು ಬದಿಗೆ ಸರಿಸಿ ಅಧಿಕೃತ ವಿರೋಧ ಪಕ್ಷವಾಗುವ ಕನಸಿನಲ್ಲಿದ್ದ ಆಪ್ ನಿರೀಕ್ಷಿತ ಸಾಧನೆ ಮಾಡದೇ ಇದ್ದರೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು 45 ಕ್ಷೇತ್ರಗಳಲ್ಲಿ […]