ಅಮರನಾಥ್ ಗುಹೆಯತ್ತ 7 ಸಾವಿರಕ್ಕೂ ಹೆಚ್ಚು ಯಾತ್ರಿಕರು ಪ್ರಯಾಣ

ಜಮ್ಮು, ಜು.12- ಭಾರೀ ಮಳೆ ಅನಾವುತಗಳಿಂದ ಚೇತರಿಸಿಕೊಂಡ ಬಳಿಕ ಅಮರನಾಥ ಯಾತ್ರೆ ನಿನ್ನೆಯಿಂದ ಶುರುವಾಗಿದ್ದು, ಇಂದು ಬೆಳಗ್ಗೆ 13ನೇ ತಂಡದಲ್ಲಿ 7 ಸಾವಿರ ಭಕ್ತರು ಪವಿತರ ಗುಹೆಯ ದರ್ಶನದತ್ತ ಪ್ರಯಾಣಿಸಿದ್ದಾರೆ. ಭಾರೀ ಬಿಗಿ ಭದ್ರತೆ ಮತ್ತು ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಯಾತ್ರೆ ಶುರುವಾಗಿದ್ದು, ಪಹ್ಲಗಾಮ್ ಮತ್ತು ಬ್ಲಾತಲ್‍ನ ಟ್ವೀನ್ ಬೇಸ್ ಕ್ಯಾಂಪ್‍ನಿಂದ ಒಟ್ಟು 265 ವಾಹನಗಳಲ್ಲಿ 7,107 ಮಂದಿ ಯಾತ್ರೆ ನಡೆಸಿದ್ದಾರೆ. ಎರಡು ಪ್ರತ್ಯೇಕ ಮುಂಗಾವಲು ಪಡೆಗಳು ಯಾತ್ರಿಕರಿಗೆ ಬೆಂಬಲವಾಗಿವೆ. ಬ್ಲಾತ್ಲಾ ಬೇಸ್ ಕ್ಯಾಂಪ್‍ನಿಂದ 1949 ಯಾತ್ರಿಕರು 98 […]

ಮೇಘಸ್ಫೋಟದಿಂದ ಸ್ಥಗಿತಗೊಂಡಿದ್ದ ಅಮರನಾಥ ಯಾತ್ರೆ ಪುನಾರಾಂಭ

ಜಮ್ಮು,ಜು.11- ಮೇಘಸ್ಫೋಟದಿಂದ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದ ಅಮರನಾಥ ಯಾತ್ರೆ ಪುನಾರಾಂಭಗೊಂಡಿದೆ. ಬೆಳಗ್ಗೆ ನುನ್ವಾನ ಪಹಾಲ್‍ಗಾಮ್ ಕಡೆಯಿಂದ ಅಮರನಾಥ ಯಾತ್ರೆಯನ್ನು ಆರಂಭಿಸಲಾಗಿದೆ ಎಂದು ಅಮರನಾಥ ಕ್ಷೇತ್ರ ಆಡಳಿತ ಮಂಡಳಿ ತಿಳಿಸಿದೆ. ಬಲ್ವಾಲ ಬೇಸ್ ಕ್ಯಾಂಪ್‍ನಲ್ಲಿ ಕಾಯುತ್ತಿದ್ದ ಯಾತ್ರಾರ್ಥಿಗಳು ಇಂದು ಯಾತ್ರೆ ಪ್ರಾರಂಭಿಸಿದ್ದಾರೆ. ಪ್ರತಿಕೂಲ ಪರಿಸ್ಥಿತಿಯಿಂದ ಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಇಂದಿನಿಂದ ಯಾತ್ರೆ ಪುನಾರಂಭವಾಗಿದ್ದು, ಜಮ್ಮುವಿನ ಮೂಲ ಶಿಬಿರದಿಂದ 4,020 ಯಾತ್ರಿಕರ ತಂಡ ಯಾತ್ರೆ ಪ್ರಾರಂಭಿಸಿದೆ. ಜು.8ರಂದು ಅಮರನಾಥ ಗುಹೆಯ ಸಮೀಪ ಮೇಘ ಸ್ಪೋಟದಿಂದ ದಿಢೀರ್ ಪ್ರವಾಹ ಉಂಟಾಗಿ ಶಿಬಿರಗಳಲ್ಲಿ ತಂಗಿದ್ದ […]