ಗಡಿಯಲ್ಲಿ ಹೆಚ್ಚಾಯ್ತು ಡ್ರಗ್ಸ್, ಶಸ್ತ್ರಾಸ್ತ್ರ ಸಾಗಿಸುವ ಪಾಕ್ ಡ್ರೋನ್ ಹಾವಳಿ

ಚಂಡೀಗಢ, ಡಿ .22-ಗಡಿ ಪ್ರದೇಶದಲ್ಲಿ ದಟ್ಟವಾದ ಮಂಜಿನ ಲಾಭ ಪಡೆದು ಡ್ರೋನ್‍ಗಳ ಮೂಲಕ ಪಾಕಿಸ್ತಾನ ಕಡೆಯಿಂದ ಮಾದಕ ದ್ರವ್ಯ ಮತ್ತು ಶಸ್ತ್ರಾಸ್ತ್ರಗಳನ್ನು ಕಳ್ಳಸಾಗಣೆ ಹೆಚ್ಚಾಗುತ್ತಿದ್ದು ಗಡಿ ಭದ್ರತಾ ಪಡೆ ಕಟ್ಟೆಚ್ಚರ ವಹಿಸಿದೆ. ಕಳೆದ ಕೆಲವು ದಿನಗಳಲ್ಲಿ ದಟ್ಟವಾದ ಮಂಜಿನ ಹಿನ್ನೆಲೆಯಲ್ಲಿ ಗಡಿಯಾಚೆಯಿಂದ ಶಸ್ತ್ರಾಸ್ತ್ರಗಳು ಮತ್ತು ಹೆರಾಯಿನ್ ಮಾದಕವನ್ನು ಭಾರತದ ಭೂಪ್ರದೇಶಕ್ಕೆ ಡ್ರೋನ್ ಮೂಲಕ ಕಳುಹಿಸುತ್ತಿರುವುದು ಗಣನೀಯವಾಗಿ ಹೆಚ್ಚಿವೆ ಎಂದು ಬಿಎಸ್‍ಎಫ್ ಅಧಿಕಾರಿಗಳು ತಿಳಿಸಿದ್ದಾರೆ. ಸುಮರು 25 ಕೆಜಿ ಹೆರಾಯಿನ್ ಮದಕವಸ್ತುವನ್ನು ಫಾಜಿಲ್ಕಾದಲ್ಲಿನ ಕೃಷಿ ಭೂಮಿಯಲ್ಲಿ ಪತ್ತೆಹಚ್ಚಿ ವಶಪಡಿಸಿಕೊಳ್ಳಲಾಗಿದೆ. […]
ಮೂವರು ಭಯೋತ್ಪಾದಕ ಸಹಚರರ ಬಂಧನ
ಅಮೃತ್‍ಸರ, ಅ.21- ದೆಹಲಿ ಪೊಲೀಸ್ ಮತ್ತು ಗ್ಯಾಂಗ್‍ಸ್ಟರ್ ವಿರೋಧಿ ಕಾರ್ಯಪಡೆ ಹಾಗೂ ಅಮೃತ್‍ಸರ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಕೆನಡಾ ಮೂಲದ ಭಯೋತ್ಪಾದಕ ಲಿಕ್ವಿರ್‍ಸಿಂಗ್ ಲಂಡಾರನ ಮೂವರು ಸಹಚರರನ್ನು ಬಂಧಿಸಲಾಗಿದೆ. ಕೆನಡಾದ ಲಂಡಾ ದೀಪಾವಳಿ ಆಸು ಪಾಸಿನಲ್ಲಿ ಪಂಜಾಬ್‍ನಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಸಿದ್ಧತೆ ನಡೆಸಿದ್ದ ಎಂಬ ಸುದ್ದಿ ಪೊಲೀಸ್ ಪಡೆಗಳಿಗೆ ಸಿಕ್ಕಿತ್ತು. ಇದರ ಸುಳಿವು ಅರಿತ ದೆಹಲಿ ಪೊಲೀಸರು ಅಮೃತ್‍ಸರಕ್ಕೆ ತೆರಳಿ ದಾಳಿ ನಡೆಸಿ ಮೂವರನ್ನು ಬಂಧಿಸಿದ್ದಾರೆ. ಬಂಧಿತರಿಂದ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತರನ್ನು ತೀವ್ರ […]