ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆ ಈಡೇರಿಕೆ ಭರವಸೆ

ಬೆಂಗಳೂರು, ಜ.22- ಮೂರು ದಿನಗಳಿಂದ ಧರಣಿ ನಡೆಸುತ್ತಿರುವ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಸಂಘಟನೆಯ ಬೇಡಿಕೆಗಳನ್ನು ಸಹಾನುಭೂತಿಯಿಂದ ಪರಿಶೀಲಿಸುವ ಭರವಸೆಯನ್ನು ಸರಕಾರ ನೀಡಿದೆ. ಸಿಎಂ ಬಸವರಾಜ ಬೊಮ್ಮಾಯಿ ಅವರು ಅನ್ಯಕಾರ್ಯ ನಿಮಿತ್ತ ತೆರಳಬೇಕಾದ ಹಿನ್ನೆಲೆಯಲ್ಲಿ, ಧರಣಿನಿರತ ಸಂಘಟನೆಯ ಪ್ರಮುಖರನ್ನು ಭೇಟಿ ಮಾಡುವಂತೆ ತಮಗೆ ಸೂಚಿಸಿದ ಹಿನ್ನೆಲೆಯಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಅವರು ಸರಕಾರದ ಪರವಾಗಿ ಬೇಡಿಕೆ ಗಳನ್ನು ಆಲಿಸಿದರು. ಬಾಲಕನನ್ನ ಕೊಂದು ತಿಂದು ಚಿರತೆ, ಅರಣ್ಯ ಇಲಾಖೆ ವಿರುದ್ಧಗ್ರಾಮಸ್ಥರ ಆಕ್ರೋಶ ಈ ಸಂದರ್ಭದಲ್ಲಿ […]
ಮೈಕೊರೆಯುವ ಚಳಿಯಲ್ಲೂ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ

ಬೆಂಗಳೂರು,ಜ.19- ಮೈ ಕೊರೆಯುವ ಚಳಿಯಲ್ಲೂ ಅಂಗನವಾಡಿ ಕಾರ್ಯಕರ್ತೆಯರು ತಮ್ಮ ಹೋರಾಟ ಮುಂದುವರೆಸಿದ್ದು, ಅವರ ಪ್ರತಿಭಟನೆ ಎರಡನೆ ದಿನಕ್ಕೆ ಕಾಲಿಟ್ಟಿದೆ. ನಿನ್ನೆ ಆರಂಭವಾದ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನಾ ಸ್ಥಳಕ್ಕೆ ಸರ್ಕಾರದ ಯಾವೊಬ್ಬ ಪ್ರತಿನಿಧಿಯೂ ಆಗಮಿಸದ ಹಿನ್ನಲೆಯಲ್ಲಿ ಕಾರ್ಯಕರ್ತೆಯರು ಅಹೋ ರಾತ್ರಿ ಧರಣಿ ಮುಂದುವರೆಸಿದ್ದಾರೆ. ಮೈ ಕೊರೆಯುವ ಚಳಿಯಲ್ಲೂ ಪ್ರತಿಭಟನೆಯಲ್ಲಿ ಭಾಗಿಯಾಗಿರುವ ನೂರಾರು ಕಾರ್ಯಕರ್ತೆಯರು ಫ್ರೀಡಂ ಪಾರ್ಕ್‍ನಲ್ಲಿ ರಾತ್ರಿಯಿಡಿ ನಿದ್ರೆಯಿಲ್ಲದೆ ತಂಗಿದ್ದಾರೆ. ಶಸ್ತ್ರಸಜ್ಜಿತ ಬ್ಯಾಂಕ್ ದರೋಡೆಕೋರರನ್ನು ಹಿಮ್ಮೆಟ್ಟಿಸಿದ ಮಹಿಳಾ ಪೊಲೀಸರು ಕನಿಷ್ಠ ವೇತನ, ಗ್ರ್ಯಾಚ್ಯುಟಿ ಸೇರಿದಂತೆ ಹಲವಾರು ಬೇಡಿಕೆಗಳ ಈಡೇರಿಕೆಗೆ […]
ಅಂಗನವಾಡಿ ಶಿಕ್ಷಕರಾಗಲು ಡಿಫ್ಲೋಮಾ ಕಡ್ಡಾಯ

ಬೆಂಗಳೂರು,ಜ.4- ಅಂಗನವಾಡಿ ಕಾರ್ಯಕರ್ತೆಯರಿಗೆ ಸರ್ಕಾರ ಬಿಗ್ ಶಾಕ್ ನೀಡಿದೆ. ಇನ್ನು ಮುಂದೆ ಅಂಗನವಾಡಿ ಟೀಚರ್ ಆಗಲು ಡಿಫ್ಲೋಮಾ ಮಾಡಿರಲೇಬೇಕು ಎಂಬ ಹೊಸ ನಿಯಮ ಜಾರಿಗೆ ತರುವ ಮೂಲಕ ಅಂಗನವಾಡಿ ಕಾರ್ಯಕರ್ತೆಯರಿಗೆ ಶಾಕ್ ನೀಡಲಾಗಿದೆ. ಎನ್‍ಇಪಿ ನಿಯಮದಲ್ಲಿ ಮಾರ್ಪಾಡು ಮಾಡಿರುವ ಸರ್ಕಾರ ಡಿಫ್ಲೋಮಾ ಮಾಡಿರುವ ಮಹಿಳೆಯರನ್ನು ಮಾತ್ರ ಅಂಗನವಾಡಿ ಟೀಚರ್‍ಗಳನ್ನಾಗಿ ನೇಮಿಸಿಕೊಳ್ಳುವಂತೆ ಆದೇಶ ಹೊರಡಿಸಿದೆ. ಇದರ ಜತೆಗೆ ಅಂಗನವಾಡಿ ಕಾರ್ಯಕರ್ತೆಯರ ನೇಮಕದಲ್ಲೂ 10ನೇ ತರಗತಿ ಇಲ್ಲವೆ ಪಿಯುಸಿ ಉತ್ತೀರ್ಣರಾಗಿರುವವರನ್ನುಪರಿಗಣಿಸುವಂತೆಯೂ ಸೂಚನೆ ನೀಡ ಲಾಗಿದೆ. ಶಬರಿಮಲೆ ಅಯ್ಯಪ್ಪ ಚಿತ್ರಕ್ಕೆ ಬೆಂಬಲ […]
ಮಿನಿ ಅಂಗನವಾಡಿ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಲು ಸರ್ಕಾರ ಬದ್ಧ
ಬೆಂಗಳೂರು,ಸೆ.16- ಕೇಂದ್ರ ಸರ್ಕಾರ ಸಮ್ಮತ್ತಿಸಿದರೆ ರಾಜ್ಯದಲ್ಲಿರುವ ಮಿನಿ ಅಂಗನವಾಡಿ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಲು ಸರ್ಕಾರ ಬದ್ಧವಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಆಚಾರ್ ಹಾಲಪ್ಪ ವಿಧಾನಸಭೆಗೆ ತಿಳಿಸಿದ್ದಾರೆ. ಪ್ರಶ್ನೋತ್ತರ ಅವಯಲ್ಲಿ ಶಾಸಕ ಹಾಲಪ್ಪ ಹರತಾಳ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದಲ್ಲಿ ಒಟ್ಟು 3341 ಮಿನಿ ಅಂಗನವಾಡಿ ಕೇಂದ್ರಗಳಿವೆ. ಇವುಗಳಲ್ಲಿ 1002 ಮಿನಿ ಅಂಗನವಾಡಿ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮಾರ್ಗಸೂಚಿಗಳ ಪ್ರಕಾರ ಕೇಂದ್ರ ಸರ್ಕಾರವೇ ಇವುಗಳನ್ನು ಮೇಲ್ದರ್ಜೆ ಗೇರಿಸಬೇಕು. ಅವರು ಅನುಮತಿಸಿದರೆ […]