ದ್ವೇಷದಿಂದ ತುಂಬಿದ ಹಿಂಸೆಗೆ ಅಮೆರಿಕದಲ್ಲಿ ಸ್ಥಾನವಿಲ್ಲ: ಬಿಡೆನ್

ವಾಷಿಂಗ್ಟನ್,ಸೆ.16- ದೇಶದಲ್ಲಿ ನಡೆಯುತ್ತ್ತರುವ ದ್ವೇಷದ ಹಿಂಸಾಚಾರವನ್ನು ಬೇರು ಸಹಿತ ಕಿತ್ತುಹಾಕಬೇಕು ಎಂದು ಅಧ್ಯಕ್ಷ ಜೋ ಬಿಡೆನ್ ಹೇಳಿದ್ದಾರೆ. ಹಿಂಸಾಚಾರವನ್ನು ಉತ್ತೇಜಿಸುವವರಿಗೆ ತಕ್ಕ ಶಿಕ್ಷೆ ಖಚಿತ, ಇಂತಹುದಕ್ಕೆ ಅಮೆರಿಕಾದಲ್ಲಿ ಸ್ಥಾನವಿಲ್ಲ ಎಂದು ಅವರು ಎಚ್ಚರಿಸಿದ್ದಾರೆ. ಕಳೆದ 2020ರಲ್ಲಿ ಅಮೆರಿಕದಲ್ಲಿ ನಡೆದ ಅಪರಾಧ ಚಟುವಟಿಕೆಗಳು ಮಿತಿ ಮೀರಿವೆ ಇದನ್ನು ಕೊನೆಗಾಣಿಸಲು ಸಿದ್ದ ಎಂದು ಪ್ರತಿಜ್ಞೆ ಮಾಡಿದ್ದಾರೆ. ಹಿಂದೂಗಳು, ಸಿಖ್ಖರು ಮತ್ತು ಮುಸ್ಲಿಮರ ವಿರುದ್ಧದ ಘಟನೆಗಳು ಸೇರಿದಂತೆ ದೇಶಾದ್ಯಂತ ದ್ವೇಷ ಸಂಬಂಧಿತ ಘಟನೆಗಳ ಉಲ್ಬಣಸಿರುವುದು ಶ್ವೇತ ವರ್ಣೀಯರ ಪ್ರಾಬಲ್ಯಕ್ಕಾಗಿ ಇಂತಹ ಪ್ರವೃತ್ತಿಯಿಂದ […]