ಪುತ್ರಿಯ ದುರ್ವತನೆಗೆ ಕ್ಷಮೆ ಕೋರಿದ ಮಿಜೋರಾಂ ಸಿಎಂ

ಹೈಜ್ವಾಲ್,ಆ.22- ಮಿಜೋರಾಂ ಮುಖ್ಯಮಂತ್ರಿಯ ಪುತ್ರಿ ಮಿಲಾರಿ ಜಾಂಗ್ವೆ ಅವರು ವೈದ್ಯರೊಬ್ಬರ ಮೇಲೆ ಹಲ್ಲೆ ಮಾಡಿರುವ ಘಟನೆ ವೈರಲ್ಲಾಗುತ್ತಿದ್ದಂತೆ ಮುಖ್ಯಮಂತ್ರಿ ಜೋರಮ್ ತಂಗ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದಾರೆ. ಮಗಳ ದುರ್ವತನೆಗೆ ವಿಷಾದ ವ್ಯಕ್ತಪಡಿಸಿರುವ ಮಿಜೋರಾಂ ಮುಖ್ಯಮಂತ್ರಿ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದಾರೆ. ಇತ್ತೀಚೆಗೆ ಕ್ಲಿನಿಕ್‍ನಲ್ಲಿ ಚರ್ಮ ರೋಗ ವೈದ್ಯರ ಮೇಲೆ ಮಿಲಾರಿ ಚಾಂಗ್ವೆ ಹಲ್ಲೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ಲಾಗಿತ್ತು. ಘಟನೆ ಖಂಡಿಸಿ 800ಕ್ಕೂ ಹೆಚ್ಚು ವೈದ್ಯರು ಶನಿವಾರ ಪ್ರತಿಭಟನೆ ನಡೆಸಿದ್ದಾರೆ. ಮಿಜೋರಾಂ ವಿಭಾಗದ ವೈದ್ಯರು ಘಟನೆ ಖಂಡಿಸಿ ಕಪ್ಪು ಪಟ್ಟಿ […]