ಜೈಲು ಸಿಬ್ಬಂದಿಯನ್ನು ಕೊಂದು ಪರಾರಿಯಾದ ಇಬ್ಬರು ಉಗ್ರರು

ಇಟಾನಗರ, ಮಾ .27 : ಅರುಣಾಚಲ ಪ್ರದೇಶದ ತಿರಾಪ್ ಜಿಲ್ಲೆಯ ಖೋನ್ಸಾ ಜೈಲಿನಿಂದ ಎನ್‍ಎಸ್ಸಿಎನ್ (ಕೆ)ನ ನಿಕಿ ಸುಮಿ ಬಣದ ಇಬ್ಬರು ಉಗ್ರರು ಕರ್ತವ್ಯದಲ್ಲಿದ್ದ ಭದ್ರತಾ ಸಿಬ್ಬಂದಿಯನ್ನು ಕೊಂದು ಪರಾರಿಯಾಗಿದ್ದಾರೆ. ಜೈಲಿನ ಯುಟಿಪಿ ಸೆಲ್‍ನಲ್ಲಿದ್ದ ಇಬ್ಬರು ಉಗ್ರಗಾಮಿಗಳಾದ ರೋಕ್ಸೆನ್ ಹೊಮ್ಚಾ ಲೊವಾಂಗ್ ಮತ್ತು ಟಿಪ್ಟು ಕಿಟ್ನಾನ ಅವರು ನಿನ್ನೆ ಸಂಜೆ 5 ಗಂಟೆ ಸುಮಾರಿಗೆ ಕಾನ್ಸ್‍ಟೇಬಲ್ ವಾಂಗ್ನ್ಯಾಮ್ ಬೋಸಾಯಿ ಅವರಿಂದ ಸರ್ವೀಸ್ ರೈಫಲ್ ಕಸಿದುಕೊಂಡು ಗುಂಡು ಹಾರಿಸಿ ಜೈಲಿನಿಂದ ಪರಾರಿಯಾಗಿದ್ದಾರೆ ಎಂದು ಅರುಣಾಚಲ ಪ್ರದೇಶ ಪೊಲೀಸ್‍ಪಡೆಯ ರೋಹಿತ್ […]
ಜಿ20 ಶೃಂಗ ಸಭೆಗೆ ಚೀನಾ ಗೈರು

ಗುವಾಹಟಿ,ಮಾ.27- ನಿನ್ನೆ ನಡೆದ ಜಿ20 ಗೌಪ್ಯ ಸಭೆಗೆ ಚೀನಾ ಗೈರು ಹಾಜರಾಗಿದೆ ಎಂದು ತಿಳಿದುಬಂದಿದೆ.ಅರುಣಾಚಲ ಪ್ರದೇಶದ ಇಟಾನಗರದಲ್ಲಿ ನಡೆದ ಗೌಪ್ಯ ಸಭೆಯಿಂದ ಚೀನಾ ಉದ್ದೇಶಪೂರ್ವಕವಾಗಿ ಹೊರಗುಳಿದಿದೆ ಎಂದು ಉನ್ನತ ಮೂಲಗಳ ಖಚಿತಪಡಿಸಿವೆ. ಅರುಣಾಚಲ ಪ್ರದೇಶ ಟಿಬೆಟ್‍ನ ಭಾಗವೆಂದು ಚೀನಾ ವಾದಿಸುತ್ತಿದ್ದರೆ, ಭಾರತ ಅರುಣಾಚಲ ತನ್ನ ಅವಿಭಾಜ್ಯ ಅಂಗ ಎಂದು ಘೋಷಿಸಿಕೊಂಡಿರುವ ಹಿನ್ನೆಲೆಯಲ್ಲಿ ಚೀನಾ ಇಂತಹ ತೀರ್ಮಾನ ಕೈಗೊಂಡಿದೆ ಎಂದು ವರದಿಯಾಗಿದೆ. ಸೆಪ್ಟೆಂಬರ್‍ನಲ್ಲಿ ದೆಹಲಿಯಲ್ಲಿ ನಡೆಯಲಿರುವ ಜಿ20 ಶೃಂಗಸಭೆಗೆ ಮುಂಚಿತವಾಗಿ 50 ಪ್ರಮುಖ ನಗರಗಳಲ್ಲಿ ಯೋಜಿಸಲಾದ ಹಲವಾರು ಕಾರ್ಯಕ್ರಮಗಳಲ್ಲಿ […]
ಅರುಣಾಚಲ ಪ್ರದೇಶ ಬಂದ್, ಜನಜೀವನ ಅಸ್ತವ್ಯಸ್ತ

ಇಟಾನಗರ, ಡಿ 27 (ಪಿಟಿಐ) ಅರುಣಾಚಲ ಪ್ರದೇಶ ಲೋಕಸೇವಾ ಆಯೋಗ ನಡೆಸಿದ ಸಹಾಯಕ ಇಂಜಿನಿಯರ್ (ಸಿವಿಲ್) ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಇಂದು ಕರೆ ನೀಡಲಾಗಿದ್ದ ಅರುಣಾಚಲ ಪ್ರದೇಶ ಬಂದ್ ನಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ರಾಜ್ಯ ಸರ್ಕಾರದ ವೈಫಲ್ಯವನ್ನು ವಿರೋಧಿಸಿ ಆಲ್ ನಿಶಿ ಸ್ಟೂಡೆಂಟ್ಸ ಯೂನಿಯನ್ ವಿದ್ಯಾರ್ಥಿ ಒಕ್ಕೂಟವು ಇಂದು ಮುಂಜಾನೆಯಿಂದ ಸಂಜೆವರೆಗೆ ಬಂದ್‍ಗೆ ಕರೆ ನೀಡಿದ್ದರಿಂದ ಎಲ್ಲಾ ಅಂಗಡಿಗಳು ಮತ್ತು ವ್ಯಾಪಾರ ಸಂಸ್ಥೆಗಳು, ಬ್ಯಾಂಕ್‍ಗಳು ಮತ್ತು ಶಿಕ್ಷಣ ಸಂಸ್ಥೆಗಳು ಮುಚ್ಚಲ್ಪಟ್ಟಿದ್ದವು ಮತ್ತು ಖಾಸಗಿ ಮತ್ತು […]
ತವಾಂಗ್ ಘರ್ಷಣೆ : ರಾಜ್‍ನಾಥ್‍ಸಿಂಗ್ ತುರ್ತು ಸಭೆ

ನವದೆಹಲಿ,ಡಿ.13- ಅರುಣಾಚಲ ಪ್ರದೇಶದ ಯಾಂಗಷ್ಟೆ ಪ್ರದೇಶದ ತವಾಂಗ್ ಸೆಕ್ಟರ್‍ನಲ್ಲಿ ಚೀನಾ ಯೋಧರು ಭಾರತದ ಗಡಿಯೊಳಗೆ ನುಸುಳಿ ಚೆಕ್‍ಪೋಸ್ಟ್‍ಅನ್ನು ಧ್ವಂಸಗೊಳಿಸಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಂದು ಬೆಳಗ್ಗೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಿರಿಯ ಅಧಿರಿಗಳ ಜೊತೆ ತುರ್ತು ಸಭೆ ನಡೆಸಿದರು. ಡಿ.9ರಂದು ನಡೆದ ಘಟನೆ ನಾಲ್ಕು ದಿನದ ಬಳಿಕ ತಡವಾಗಿ ಬೆಳಕಿ ಬಂದಿದ್ದು, ಇಂದು ಬೆಳಗ್ಗೆ ರಾಜನಾಥ್ ಸಿಂಗ್ ಅವರು ಸೇನೆಯ ಮುಖ್ಯಸ್ಥರಾದ ಅನಿಲ್ ಚವ್ಹಾಣ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜೀತ್ ದೆವೊಲ್ ಸೇರಿದಂತೆ ಮತ್ತಿತರ […]