8 ವರ್ಷದ ವಿದ್ಯಾರ್ಥಿ ಮೇಲೆ ಲೈಂಗಿಕ ದೌರ್ಜನ್ಯ, ಸಿಕ್ಕಿಬಿದ್ದ ಶಿಕ್ಷಕ

ನವದೆಹಲಿ,ಫೆ.9- ಮೂರನೆ ತರಗತಿ ಓದುತ್ತಿದ್ದ ಎಂಟು ವರ್ಷದ ವಿದ್ಯಾರ್ಥಿನಿಗೆ ಶಾಲಾ ಆವರಣದಲ್ಲೇ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಸರ್ಕಾರಿ ಶಾಲೆಯ ಶಿಕ್ಷಕರೊಬ್ಬರನ್ನು ಪೂರ್ವ ದೆಹಲಿ ಪೊಲೀಸರು ಬಂಧಿಸಿದ್ದಾರೆ. ಪೂರ್ವ ದೆಹಲಿಯ ನ್ಯೂ ಅಶೋಕ್‍ನಗರದ ಸರ್ಕಾರಿ ಶಾಲೆಯಲ್ಲಿ ಕ್ರೀಡಾ ಶಿಕ್ಷಕನಾಗಿರುವ 40 ವರ್ಷದ ವ್ಯಕ್ತಿಯನ್ನು ಬಂಧಿಸಿ ತೀವ್ರ ವಿಚಾರಣೆಗೊಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕೆಲ ದಿನಗಳ ಹಿಂದೆ ಎಂಟು ವರ್ಷದ ವಿದ್ಯಾರ್ಥಿನಿಗೆ ಚಾಕಲೇಟ್ ಆಮಿಷ ಒಡ್ಡಿದ ಶಿಕ್ಷಕ ಬಾಲಕಿಯನ್ನು ಏಕಾಂತ ಸ್ಥಳಕ್ಕೆ ಕರೆದೊಯ್ದು ಲೈಂಗಿಕ ದೌರ್ಜನ್ಯವೆಸಗಿದ್ದ ಎನ್ನಲಾಗಿದೆ. […]

ಸೆಕ್ಯೂರಿಟಿ ಗಾರ್ಡ್ ಮೇಲೆ ಹಲ್ಲೆ ಮಾಡಿದ ಡೆಲಿವರಿ ಬಾಯ್ ಸೇರಿ ಐವರು ಸೆರೆ

ಬೆಂಗಳೂರು, ಜ.22- ಬ್ಯಾಗ್ ಪರಿಶೀಲಿಸಲು ಮುಂದಾದ ಅಪಾರ್ಟ್‍ಮೆಂಟ್ ಸೆಕ್ಯೂರಿಟಿ ಗಾರ್ಡ್‍ನ ಮೇಲೆ ಹಲ್ಲೆ ನಡೆಸಿರುವ ಘಟನೆ ಸಂಪಿಗೆಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕಳೆದ ರಾತ್ರಿ ಅಪಾರ್ಟ್‍ಮೆಂಟ್‍ನ ನಿವಾಸಿಯೊಬ್ಬರು ಜಾಲತಾಣದ ಮೂಲಕ ಊಟ ಆರ್ಡರ್ ಮಾಡಿದ್ದರು. ಅದರಂತೆ ಡಿಲವರಿ ಬಾಯ್ ಅಪಾರ್ಟ್‍ಮೆಂಟ್ ಬಳಿ ಬಂದಿದ್ದಾನೆ. ಈ ವೇಳೆ ಭದ್ರತೆಯಲ್ಲಿದ್ದ ಸೆಕ್ಯುರಿಟಿ ಗಾರ್ಡ್ ಆತನನ್ನು ತಡೆದು ಬ್ಯಾಗ್ ಪರಿಶೀಲಿಸಬೇಕೆಂದು ಹೇಳಿದ್ದಾನೆ. ಇದರಿಂದ ಗಲಾಟೆ ನಡೆದಿದೆ. ಸ್ವಲ್ಪ ಸಮಯದ ನಂತರ ಸುಮಾರು ನಾಲ್ಕೈದು ಮಂದಿ ಪುನಃ ಅಪಾರ್ಟ್‍ಮೆಂಟ್ ಬಳಿ ಬಂದು […]

ಬೈಕ್ ಸವಾರನಿಗೆ ದೊಣ್ಣೆಯಿಂದ ಥಳಿಸಿದ ಡಿಸಿ ಅಮಾನತು

ಗುವಾಹಟಿ, ಸೆ.29- ತಪ್ಪು ಮಾರ್ಗದಲ್ಲಿ ಬರುತ್ತಿದ್ದ ಬೈಕ್ ಸವಾರನನ್ನು ದೊಣ್ಣೆಯಿಂದ ಥಳಿಸಿದ ಕಾರಣಕ್ಕೆ ಅಸ್ಸಾಂನ ಹೊಜೈ ಜಿಲ್ಲೆಯ ಜಿಲ್ಲಾಧಿಕಾರಿ (ಡಿಸಿ) ಮತ್ತು ಹೆಚ್ಚುವರಿ ಜಿಲ್ಲಾಧಿಕಾರಿ (ಎಡಿಸಿ) ಅವರನ್ನು ಅಮಾನತುಗೊಳಿಸಲಾಗಿದೆ. ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ಆದೇಶದ ಮೇರೆಗೆ ಹೋಜೈ ಡಿಸಿ ಅನುಪಮ್ ಚೌಧರಿ ಮತ್ತು ಎಡಿಸಿ ರಕ್ತಿಮ್ ಬರುವಾ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನು ಮುಖ್ಯಮಂತ್ರಿಗಳು ಖುದ್ದಾಗಿ ವೀಕ್ಷಿಸಿದ ಬಳಿಕ ಬುಧವಾರ ರಾತ್ರಿ ಹಿರಿಯ ಅಧಿಕಾರಿಗಳನ್ನು ಅಮಾನತುಗೊಳಿಸುವ ನಿರ್ಧಾರ ಕೈಗೊಂಡಿದ್ದಾರೆ. […]

ಸ್ವಯಂಘೋಷಿತ ಬಿಜೆಪಿ ಕಾರ್ಯಕರ್ತ ಶ್ರೀಕಾಂತ್ ತ್ಯಾಗಿ ಅರೆಸ್ಟ್

ನೋಯ್ಡಾ, ಆ.9- ಉತ್ತರ ಪ್ರದೇಶದಲ್ಲಿ ಭಾರೀ ಸದ್ದು ಮಾಡಿದ್ದ ಮಹಿಳೆ ಮೇಲೆ ಹಲ್ಲೆ ನಡೆಸಿ ಕಣ್ಮರೆಯಾಗಿದ್ದ ಸ್ವಯಂಘೋಷಿತ ಬಿಜೆಪಿ ಕಾರ್ಯಕರ್ತ ಶ್ರೀಕಾಂತ್ ತ್ಯಾಗಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಿಜೆಪಿ ಕಿಸಾನ್ ಮೋರ್ಚಾದ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಎನ್ನಲಾಗಿದ್ದ ಶ್ರೀಕಾಂತ್ ತ್ಯಾಗಿ ಘಟನೆ ನಡೆದು ಮೂರು ದಿನಗಳ ನಂತರ ತಲೆಮರೆಸಿಕೊಂಡಿದ್ದ. ಈತನ ಜತೆಗೆ ಇತರೆ ಮೂವರು ಆರೋಪಿಗಳನ್ನು ಉತ್ತರ ಪ್ರದೇಶದ ಮೀರತ್‍ನಲ್ಲಿ ಪೊಲೀಸರು ಇಂದು ಬೆಳಗ್ಗೆ ಬಂಧಿಸಿದ್ದಾರೆ. ನಿನ್ನೆಯಷ್ಟೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಸೂಚನೆ ಮೇರೆಗೆ ನೋಯ್ಡಾದಲ್ಲಿರುವ ಶ್ರೀಕಾಂತ್ […]