ಎಟಿಎಂ ಯಂತ್ರವನ್ನೇ ಕದ್ದೊಯ್ದ ಚಾಲಾಕಿ ಕಳ್ಳರು

ಬೆಂಗಳೂರು, ಡಿ.13- ಚಾಲಾಕಿ ಕಳ್ಳರು ಗೂಡ್ಸ್ ವಾಹನದಲ್ಲಿ ಬಂದು 3.16 ಲಕ್ಷ ರೂ. ಹಣವಿದ್ದ ಎಟಿಎಂ ಯಂತ್ರವನ್ನೇ ಕದ್ದೊಯ್ದಿರುವ ಘಟನೆ ಬೆಳ್ಳಂದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಹರಳೂರು ರಸ್ತೆಯಲ್ಲಿ ಬ್ಯಾಂಕ್ ಆಫ್ ಬರೋಡ ಶಾಖೆಗೆ ಸೇರಿದ ಎಟಿಎಂ ಕೇಂದ್ರವಿದೆ. ಡಿ. 10ರಂದು ರಾತ್ರಿ ಕಳ್ಳರು ವಾಹನದಲ್ಲಿ ಬಂದು ಎಟಿಎಂ ಮಿಷನ್‍ಗೆ ಅಳವಡಿಸಿದ್ದ ವೈರ್‍ಗಳನ್ನು ಕತ್ತರಿಸಿ ಎಟಿಎಂ ಯಂತ್ರವನ್ನೇ ಎತ್ತಿಕೊಂಡು ಪರಾರಿಯಾಗಿದ್ದಾರೆ. ಎಟಿಎಂ ಕೇಂದ್ರದಲ್ಲಿ ಸೆಕ್ಯುರಿಟಿ ಗಾರ್ಡ್ ನಿಯೋಜಿಸಲಾಗಿತ್ತು. ಅವರು ಎಟಿಎಂ ಕೇಂದ್ರ […]