ಮನೆ ಬಾಗಿಲಿಗೆ ಚಿಕಿತ್ಸೆ, ಪರೀಕ್ಷಾ ಸೌಲಭ್ಯ ತಲುಪಿಸಲು ಸರ್ಕಾರದ ಪ್ರಯತ್ನ: ಮೋದಿ

ನವದೆಹಲಿ,ಮಾ.6- ಭಾರತದ ಆರೋಗ್ಯ ಕ್ಷೇತ್ರ ವಿದೇಶಿ ಅವಲಂಬನೆಯನ್ನು ಹಂತ ಹಂತವಾಗಿ ತಗ್ಗಿಸಲಾಗುತ್ತಿದೆ. ಕೋವಿಡೋತ್ತರದಲ್ಲಿ ಆತ್ಮನಿರ್ಭರ ಭಾರತ ಸ್ವಾವಲಂಬನೆಯತ್ತ ಹೆಜ್ಜೆ ಹಾಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಬಜೆಟ್ ನಂತರದ ವೆಬಿನಾರ್ ಸರಣಿಯಲ್ಲಿ ಆರೋಗ್ಯ ಮತ್ತು ವೈದ್ಯಕೀಯ ಸಂಶೋಧನಾ ಕ್ಷೇತ್ರ ಕುರಿತು ಮಾತನಾಡಿದ ಅವರು, ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ಔಷಧಿಗಳು, ಲಸಿಕೆಗಳು ಮತ್ತು ಜೀವ ರಕ್ಷಕ ವೈದ್ಯಕೀಯ ಸಾಧನಗಳ ಮೂಲಕ ವೈದ್ಯಕೀಯ ಕ್ಷೇತ್ರವನ್ನು ಶಸ್ತ್ರಸಜ್ಜಿತಗೊಳಿಸಲಾಗಿದೆ. ಈ ಮೂಲಕ ತಮ್ಮ ಸರ್ಕಾರ ವಿದೇಶಿ ಅವಲಂಬನೆಯನ್ನು ಕಡಿಮೆ ಮಾಡಲು ಸತತವಾಗಿ […]

ಕುಂಟುತ್ತಾ, ತೆವಳುತ್ತಾ ಸಾಗುತ್ತಿರುವ ಜಲಜೀವನ್, ಆಯುಷ್ಮಾನ್ ಯೋಜನೆಗಳು

ಬೆಂಗಳೂರು,ಫೆ.6- ರಾಜ್ಯದಲ್ಲಿ ಕೇಂದ್ರ ಅನುದಾನಿತ ಪ್ರಮುಖ ಯೋಜನೆಗಳು ಕುಂಟುತ್ತಾ ಸಾಗುತ್ತಿವೆ. ಇನ್ನೇನು 2022-23ರ ಬಜೆಟ್ ವರ್ಷ ಮುಕ್ತಾಯದ ಹೊಸ್ತಿಲ್ಲಲ್ಲಿ ಇದೆ. ಆದರೂ ಜಲಜೀವನ್ ಮಿಷನ್, ಆಯುಷ್ಮಾನ್ ಭಾರತ್, ಸ್ವಚ್ಛ ಭಾರತ ಯೋಜನೆಗಳು ರಾಜ್ಯದಲ್ಲಿ ತೆವಳುತ್ತಾ ಸಾಗುತ್ತಿದೆ. ಅನುದಾನ ಬಿಡುಗಡೆಯೂ ನಿರಾಶಾದಾಯಕವಾಗಿದೆ. ಜಲಜೀವನ ಮಿಷನ್, ಆಯುಷ್ಮಾನ್ ಭಾರತ, ಸ್ವಚ್ಛ ಭಾರತ ಬಿಜೆಪಿ ಸರ್ಕಾರದ ಪ್ರಸಿದ್ಧ ಯೋಜನೆಗಳು ಪ್ರಧಾನಿ ನರೇಂದ್ರಮೋದಿ ಸರ್ಕಾರದ ಬಹುಚರ್ಚಿತ, ಬಹುದೊಡ್ಡ ಯೋಜನೆಗಳಾಗಿವೆ. ಕೇಂದ್ರ ಮತ್ತು ರಾಜ್ಯಬಿಜೆಪಿ ನೇತೃತ್ವದ ಡಬಲ್ ಇಂಜಿನ್ ಸರ್ಕಾರ ಈ ಯೋಜನೆಗಳ ಬಗ್ಗೆ […]