ಬಾಂಗ್ಲಾದೇಶಿಗಳಿಗೆ ನಕಲಿ ದಾಖಲಾತಿ ಸೃಷ್ಟಿಗೆ ನೆರವು ನೀಡಿದ ಶಾಸಕರ ವಿರುದ್ಧ ಕೇಸ್

ಕಾನ್ಪುರ್,ಡಿ.20- ಜೈಲಿನಲ್ಲಿರುವ ಸಮಾಜವಾದಿ ಪಕ್ಷದ ಶಾಸಕನ ಮೇಲೆ ಮತ್ತೊಂದು ಗಂಭೀರ ಆರೋಪ ಕೇಳಿ ಬಂದಿದ್ದು, ಬಾಂಗ್ಲಾದೇಶದಿಂದ ಅಕ್ರಮವಾಗಿ ನುಸುಳಿ ಬಂದಿದ್ದ ಅಲ್ಲಿನ ಪ್ರಜೆಗಳಿಗೆ ಸ್ಥಳೀಯವಾಗಿ ದಾಖಲಾತಿಗಳನ್ನು ಸೃಷ್ಟಿಸಲು ಅನುಕೂಲವಾಗುವಂತೆ ಪತ್ರ ನೀಡಿದ ಆರೋಪ ಮಾಡಲಾಗಿದೆ. ಭೂ ವಿವಾದಕ್ಕೆ ಸಂಬಂಧಿಸಿದಂತೆ ಗಲಭೆ ಮಾಡಿ, ಬೆಂಕಿ ಹಚ್ಚಿದ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ಶಾಸಕ ಇರ್ಫಾನ್ ಸೋಲಂಕಿ ನವೆಂಬರ್ 8ರಂದು ಶರಣಾಗಿದ್ದರು. ಸಮಾಜ ವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ನಿನ್ನೆಯಷ್ಟೇ ಜೈಲಿನಲ್ಲಿ ಸೋಲಂಕಿಯನ್ನು ಭೇಟಿ ಮಾಡಿ, ಉತ್ತರ ಪ್ರದೇಶ ಸರ್ಕಾರ […]

ಬಾಂಗ್ಲಾ ವಲಸಿಗರಿಗೆ ಅಕ್ರಮ ಆಧಾರ್ ಮಾಡಿಕೊಡುತ್ತಿದ್ದ ಮೂವರ ಬಂಧನ

ಬೆಂಗಳೂರು,ನ.7-ಬಾಂಗ್ಲಾ ದೇಶದಿಂದ ಅಕ್ರಮವಾಗಿ ಬಂದಿರುವ ವಲಸಿಗರಿಗೆ ಭಾರತೀಯರಂತೆ ಪೌರತ್ವ ಹೊಂದಲು ಆಧಾರ್ ಕಾರ್ಡ್ ಮಾಡಿಕೊಡುತ್ತಿದ್ದ ಬೆಂಗಳೂರು ಒನ್ನ ಗುತ್ತಿಗೆ ನೌಕರ ಸೇರಿದಂತೆ ಮೂವರನ್ನು ಮಾದನಾಯಕನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರು ಒನ್ನಲ್ಲಿ ಗುತ್ತಿಗೆ ನೌಕರನಾಗಿ ಕೆಲಸ ಮಾಡುವ ಪಾದರಾಯನಪುರದ ನಿವಾಸಿ ನೌಷಾದ್ ಪಾಷ(23), ಸೈಬರ್ ಮಾಲೀಕ ಮಾದನಾಯಕನಹಳ್ಳಿಯ ವಿಜಯಕುಮಾರ್ ಸಿಂಗ್(34) ಮತ್ತು ಬಾಂಗ್ಲಾ ದೇಶದ ಪ್ರಜೆ ಜುವೆಲ್ ರಾಣಾ ಅಲಿಯಾಸ್ ಜುವೇಲ್(22) ಬಂಧಿತ ಆರೋಪಿಗಳು. ಬಂಧಿತರಿಂದ ವೈದ್ಯಾಧಿಕಾರಿಗಳ ಸೀಲು ಮತ್ತು ಸಹಿಗಳಿರುವ 12 ಆಧಾರ್ ಎನ್ರೋಲ್ಮೆಂಟ್ ಫಾರಂಗಳು, […]

ಬಾಂಗ್ಲಾ ಅಕ್ರಮ ನುಸಳುಕೋರರಿಗೆ 5 ವರ್ಷ ಜೈಲು ಶಿಕ್ಷೆ

ಧುಬ್ರಿ, ಆ.20- ಬಾಂಗ್ಲಾದೇಶದಿಂದ ಅಕ್ರಮವಾಗಿ ನುಸುಳಿದ ಇಬ್ಬರಿಗೆ ಅಸ್ಸಾಂನ ಜಿಲ್ಲಾ ನ್ಯಾಯಾಲಯ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಅಸ್ಸಾಂನ ಮಂಕಚರ್ ಜಿಲ್ಲೆಯ ದಕ್ಷಿಣ ಸಲ್ಮಾರದ ಜಿಲ್ಲಾ ನ್ಯಾಯಾಲಯ ಅಕ್ರಮ ನುಸುಳುಕೋರರಾದ ನಿರಂಜನ್ ಘೋಶ್ ಮತ್ತು ಅಬ್ದುಲ್ ಹೈ ಎಂಬುವರಿಗೆ ಐದು ವರ್ಷ ಶಿಕ್ಷೆ ಮತ್ತು ತಲಾ 10 ಸಾವಿರ ರೂಪಾಯಿ ದಂಡ ವಿಧಿಸಿದ್ದು, ದಂಡ ಪಾವತಿಸಲು ವಿಫಲವಾದರೆ ಮತ್ತೆ ಆರು ತಿಂಗಳ ಕಾಲ ಶಿಕ್ಷೆ ಅನುಭವಿಸಲು ಸೂಚಿಸಲಾಗಿದೆ. 2021ರ ಮಾರ್ಚ್ 6ರಂದು ಅಬ್ದುಲ್ ಹೈ ಅವರನ್ನು […]