ಇಂದು ಸರಸ್ವತಿ ಪೂಜೆ, ವಸಂತ ಪಂಚಮಿ, ದೇಶದ ಜನತೆಗೆ ಮೋದಿ ಶುಭಾಶಯ

ನವದೆಹಲಿ,ಫೆ.5- ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಸರಸ್ವತಿ ಪೂಜೆ ಮತ್ತು ವಸಂತ ಪಂಚಮಿಯ ಸಂದರ್ಭದಲ್ಲಿ ದೇಶದ ಜನತೆಗೆ ಶುಭ ಕೋರಿದ್ದಾರೆ. ಸರಸ್ವತಿ ಮಾತೆಯ ಕೃಪಾಶೀರ್ವಾದಗಳು ನಿಮ್ಮೆಲ್ಲರಿಗೆಇರಲಿ ಮತ್ತು ಋತುಗಳ ರಾಜ ವಸಂತನು ಪ್ರತಿಯೊಬ್ಬರ ಬದುಕಿನಲ್ಲಿಯೂ ಸಂತೋಷ ತರಲಿ ಎಂದು ಮೋದಿ ಟ್ವೀಟ್ ಮಾಡಿ ಹಾರೈಸಿದ್ದಾರೆ. ಸರಸ್ವತಿಯನ್ನು ಜ್ಞಾನದ ದೇವತೆಯನ್ನಾಗಿ ಆರಾಸಲಾಗುತ್ತದೆ. ಶಾರದೆಯನ್ನು ವಸಂತ ಪಂಚಮಿಯಂದು ಪೂಜಿಸಲಾಗುತ್ತದೆ. ಈ ದಿನವು ವಸಂತ ಋತುವಿನ ಆಗಮನಕ್ಕೆ ಸಿದ್ಧತೆಯನ್ನು ಸೂಚಿಸುತ್ತದೆ