ಪ್ರಭಾವಿಗಳ ಪಾಲಾಗುತ್ತಿದೆ ಬಿಡಿಎಗೆ ಸೇರಿದ 1ಸಾವಿರ ಕೋಟಿ ಬೆಲೆಯ ಅಸ್ತಿ : ಉಮಾಪತಿ ಶ್ರೀನಿವಾಸಗೌಡ

ಬೆಂಗಳೂರು,ಮಾ.9- ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಸೇರಿದ ಸುಮಾರು ಒಂದು ಸಾವಿರ ಕೋಟಿ ರೂ. ಬೆಲೆ ಬಾಳುವ 25 ಎಕರೆಯಷ್ಟು ಜಾಗ ಪ್ರಭಾವಿಗಳ ಪಾಲಾಗುತ್ತಿದೆ ಎಂದು ಕೆಂಪೇಗೌಡ ಆಸ್ಪತ್ರೆ ಅಧ್ಯಕ್ಷ ಉಮಾಪತಿ ಶ್ರೀನಿವಾಸಗೌಡ ಆರೋಪಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಭಾವಿಗಳ ಪಾಲಾಗುತ್ತಿರುವ ಜಮೀನಿನ ಬಗ್ಗೆ ಸೂಕ್ತ ತನಿಖೆಯಾಗಬೇಕು ಎಂದು ಒತ್ತಾಯಿಸಿದರು. ಬೆಂಗಳೂರು ದಕ್ಷಿಣ ತಾಲ್ಲೂಕು, ಬೇಗೂರು ಹೋಬಳಿಯ ದೇವರಚಿಕ್ಕನಹಳ್ಳಿ ಗ್ರಾಮಕ್ಕೆ ಸೇರಿದಂತೆ ಬಿಟಿಎಂ ಲೇಔmನ್ನು ಬಿಡಿಎ ನಿರ್ಮಾಣ ಮಾಡಿದೆ. ಈ ಬಡಾವಣೆಯ ವಿವಿಧ ಸರ್ವೆ ನಂಬರ್ಗಳಿಗೆ ಸೇರಿದ ಜಮೀನನ್ನು […]
ಬಿಡಿಎ – ಬಿಬಿಎಂಪಿ ಆಸ್ತಿ ರಕ್ಷಣೆಗೆ ಕ್ರಮ : ಸಿಎಂ

ಬೆಂಗಳೂರು,ಫೆ.23- ಬಿಡಿಎ ಭೂ ಸ್ವಾೀಧಿನ ಮತ್ತು ಸ್ವತ್ತುಗಳ ರಕ್ಷಣೆಗೆ ಸಂಬಂಧಪಟ್ಟಂತೆ ಸ್ಪಷ್ಟತೆ ತರಲು ತಮ್ಮ ಸರ್ಕಾರ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ. ವಿಧಾನಪರಿಷತ್ನಲ್ಲಿ ಸದಸ್ಯ ಮರಿತಿಬ್ಬೇಗೌಡ ಅವರು ಬೆಂಗಳೂರು ದಕ್ಷಿಣ ತಾಲ್ಲೂಕು ಬೇಗೂರು ಹೋಬಳಿ ದೇವರಚಿಕ್ಕನಹಳ್ಳಿ ಗ್ರಾಮದಲ್ಲಿ ಸ್ವಾೀನಪಡಿಸಿಕೊಳ್ಳಲಾದ ಭೂಮಿಯಲ್ಲಿನ ತೊಂದರೆಗಳ ಬಗ್ಗೆ ಸರ್ಕಾರದ ಗಮನ ಸೆಳೆದಾಗ ಉತ್ತರಿಸಿದ ಮುಖ್ಯಮಂತ್ರಿಯವರು, ಭೂ ಸ್ವಾೀಧಿನಕ್ಕಾಗಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ತನ್ನದೇ ಆದ ಕಾಯ್ದೆಯನ್ನು ಹೊಂದಿದೆ. ನಿರ್ದಿಷ್ಟ ಉದ್ದೇಶವನ್ನು ಪ್ರಸ್ತಾಪಿಸಿ 4.1 ಅಧಿಸೂಚನೆಯನ್ನು […]
7 ಬಿಡಿಎ ನಿವೇಶನಗಳನ್ನು ನುಂಗಿದರೇ ನಿರ್ಮಾಪಕ ಉಮಾಪತಿ..?

ಬೆಂಗಳೂರು,ಜ.19- ನಿರ್ಮಾಪಕ ಉಮಾಪತಿ ಶ್ರೀನಿವಾಸಗೌಡ ವಿರುದ್ಧ ಕೋಟ್ಯಂತರ ರೂ.ಬೆಲೆ ಬಾಳುವ ಬಿಡಿಎ ನಿವೇಶನ ವಂಚಿಸಿರುವ ಗಂಭೀರ ಆರೋಪ ಕೇಳಿ ಬಂದಿದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಸೇರಿರುವ ಕೋಟ್ಯಂತರ ರೂ.ಬೆಲೆಬಾಳುವ 7 ನಿವೇಶನಗಳನ್ನು ಉಮಾಪತಿ ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಸ್ವತಃ ಬಿಡಿಎ ಅಧಿಕಾರಿಗಳೇ ಬಹಿರಂಗಪಡಿಸಿದ್ದಾರೆ. ಬೆಂಗಳೂರು ದಕ್ಷಿಣ ತಾಲೂಕು ಬೇಗೂರು ಹೋಬಳಿ ಎಳ್ಳುಕುಂಟೆ ಗ್ರಾಮದ ಸರ್ವೆ ನಂ 11 ರಲ್ಲಿರುವ ಹೆಚ್ಎಸ್ಆರ್ ಲೇಔಟ್ನ 3ನೇ ಸೆಕ್ಟರ್ನಲ್ಲಿರುವ 6್ಡ080 ವಿಸ್ತೀರ್ಣದ 685,686,687,688,689,690,691 ನಂಬರಿನ ಬಿಡಿಎ ನಿವೇಶನಗಳನ್ನು ಉಮಾಪತಿ ಒತ್ತುವರಿ ಮಾಡಿಕೊಂಡಿರುವ […]
ಬೆಂಗಳೂರಿಗರಿಗೆ ಚಿರತೆ ಭಯ

ಬೆಂಗಳೂರು,ಡಿ.2- ಸಿಲಿಕಾನ್ ಸಿಟಿ ಜನರಿಗೆ ಚಿರತೆ ಕಾಟ ಶುರುವಾಗಿದೆ ಕೆಂಗೇರಿ, ಕುಂಬಳಗೋಡು ಸುತ್ತಮುತ್ತ ಚಿರತೆ ಕಾಣಿಸಿಕೊಂಡಿದ್ದು ಭಯ ಹುಟ್ಟಿಸಿದೆ. ಬಿಡಿಎ ಕೆಂಗೇರಿ ಸುತ್ತಮುತ ಬಿಡಿಎ ಕಾಂಪ್ಲೆಕ್ಸ್ ಕಡೆ ಚಿರತೆ ಬಂದಿದೆ ಎಂದು ಹೇಳಲಾಗುತ್ತಿದ್ದು ಜನರಲ್ಲಿ ಜಾಗೃತಿ ಮೂಡಿಸಲಾಗಿದೆ. ಕನಕಪುರ ರಸ್ತೆ ಕೋಡಿಪಾಳದಲ್ಲಿ ಚಿರತೆ ಒಡಾಟ ಸಿಸಿ ಕ್ಯಾಮರಾದಲ್ಲಿ ಪತ್ತೆಯಾಗಿದ್ದು ಸುಮಾರು 4 ಚಿರತೆಗಳುನಗರ ಪ್ರದೇಶಕ್ಕೆ ಬಂದಿವೆ ಎಂದು ಸ್ಥಳೀಯ ನಿವಾಸಿಗಳು ಹೇಳುತ್ತಿದ್ದಾರೆ. ಕೆಂಗೇರಿ ಹೊರವಲಯದಲ್ಲಿ ಹಲವಾರು ಶಾಲೆಗಳಿದ್ದು, ಪೊಷಕರು ಮಕ್ಕಳನ್ನು ಹೊರಗೆ ಕಳುಹಿಸಲು ಭಯಪಡಿತ್ತಿದ್ದಾರೆ.ತುರಹಳ್ಳಿಯಲ್ಲಿ ಕಳೆದ ರಾತ್ರಿ […]
ಸಿದ್ದು ಪಟಾಲಂನಿಂದ 400 ಕೋಟಿ ರೂ. ಆಸ್ತಿ ಲೂಟಿ : N.R.ರಮೇಶ್

ಬೆಂಗಳೂರು,ನ.23- ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಣಾಕ್ಷತನದಿಂದ ಡಿ-ನೋಟಿಫಿಕೇಷನ್ ಹೆಸರು ಬಳಸದೆ 400ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಸ್ವತ್ತು ಪರರ ಪಾಲಾಗುವಂತೆ ಮಾಡಿದ್ದಾರೆ ಎಂದು ಆರೋಪಿಸಿ ಲೋಕಾಯುಕ್ತಕ್ಕೆ ದೂರು ಸಲ್ಲಿಸಿರುವ ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಅಧ್ಯಕ್ಷ ಎನ್.ಆರ್.ರಮೇಶ್ ಅವರು ಇಡಿ ಪ್ರಕರಣವನ್ನು ಸೂಕ್ತ ತನಿಖೆಗೆ ವಹಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಿಕೊಂಡಿದ್ದಾರೆ. ಅದೇ ರೀತಿ ಸಿದ್ದರಾಮಯ್ಯ ಅವರ ತಾಳಕ್ಕೆ ತಕ್ಕಂತೆ ಕುಣಿದಿದ್ದ ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಮಹೇಂದ್ರ ಕುಮಾರ್ ಜೈನ್ […]
ಬೆಳ್ಳಂ ಬೆಳಗ್ಗೆ ಜೆಸಿಬಿ ಘರ್ಜನೆ : 30 ಕೋಟಿ ಮೌಲ್ಯದ ಬಿಡಿಎ ಆಸ್ತಿ ವಶ

ಬೆಂಗಳೂರು,ನ.22- ಸರ್ಕಾರಿ ಭೂಮಿ ಒತ್ತುವರಿ ತೆರೆವು ಕಾರ್ಯಾಚರಣೆ ಮುಂದುವರಿಸಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಇಂದು ಬೆಳಿಗ್ಗೆ 30 ಕೋಟಿ ರೂ. ಮೌಲ್ಯದ 22 ಗುಂಟೆ ಜಾಗವನ್ನು ತನ್ನ ವಶಕ್ಕೆ ಪಡೆದಿದೆ. ಬಿಡಿಎಗೆ ಸೇರಿದ್ದ ಜೆಪಿ ನಗರ 9 ನೇ ಹಂತದ 1 ನೇ ಬ್ಲಾಕ್ ನಲ್ಲಿನ ಆಲಹಳ್ಳಿ ಸರ್ವೆ ಸಂಖ್ಯೆ 4/1 ರಲ್ಲಿ ಈ ಜಾಗವನ್ನು ಕೆಲವು ಅತಿಕ್ರಮಣದಾರರು ಕಳೆದ ಹತ್ತು ವರ್ಷಗಳಿಂದ ತಾತ್ಕಾಲಿಕ್ ಶೆಡ್ಗಳನ್ನು ನಿರ್ಮಿಸಿಕೊಂಡು ವ್ಯಾಪಾರ ವಹಿವಾಟು ನಡೆಸುತ್ತಿದ್ದರು. ಬಿಡಿಎ ಆಯುಕ್ತರ ಆದೇಶದನ್ವಯ […]
ಭೂಗಳ್ಳರಷ್ಟೇ ಅಲ್ಲ, 23 ಕೆರೆಗಳನ್ನು ನುಂಗಿ ನೀರು ಕುಡಿದಿದೆ ಬಿಡಿಎ..!
ಬೆಂಗಳೂರು,ಸೆ.16- ನಗರದಲ್ಲಿದ್ದ ಕೆರೆಗಳನ್ನು ನುಂಗಿ ನೀರು ಕುಡಿದಿರುವುದು ಕೇವಲ ಭೂಗಳ್ಳರು ಹಾಗೂ ಬಿಬಿಎಂಪಿಯವರಲ್ಲ ಇವರ ಜೊತೆಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಪಾತ್ರವೂ ಇದೆ. ಬೆಂಗಳೂರು ಅಭಿವೃದ್ಧಿಯ ಹೊಣೆ ಹೊತ್ತಿರುವ ಬಿಡಿಎ ಅಧಿಕಾರಿಗಳೇ ನಗರದ ಹಲವಾರು ಕೆರೆಗಳನ್ನು ಒತ್ತುವರಿ ಮಾಡಿ ಲೇಔಟ್ ನಿರ್ಮಾಣ ಮಾಡಿದ್ದಾರೆ. ಕಳೆದ 2013-14ನೇ ಸಾಲಿನಲ್ಲಿ 23 ಕೆರೆಗಳನ್ನು ಸಂಪೂರ್ಣವಾಗಿ ಒತ್ತುವರಿ ಮಾಡಿರುವ ಬಿಡಿಎ ಕೆರೆ ಅಂಗಳದಲ್ಲಿ ಲೇಔಟ್ ನಿರ್ಮಾಣ ಮಾಡಿ, ಕೋಟಿ ಕೋಟಿ ರೂ.ಗಳಿಗೆ ಮಾರಾಟ ಮಾಡಿದೆ. 2014ರಲ್ಲಿ ಕೆರೆ ಒತ್ತುವರಿ ಮಾಡಿ ಲೇಔಟ್ […]