ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ ಹಾಕಿದ್ದ ವಿದ್ಯಾರ್ಥಿ ಬಂಧನ

ಬೆಂಗಳೂರು, ಡಿ.22- ವಿಮಾನ ನಿಲ್ದಾಣದಲ್ಲಿ ಬಾಂಬ್ ಇಡಲಾಗಿದೆ ಎಂದು ಟ್ವಿಟರ್ ಮೂಲಕ ಬೆದರಿಕೆ ಹಾಕಿದ್ದ ಬಿಟೆಕ್ ವಿದ್ಯಾರ್ಥಿಯನ್ನು ಕೆಂಪೇಗೌಡ ಅಂತರ್‍ರಾಷ್ಟ್ರೀಯ ವಿಮಾನ ನಿಲ್ದಾಣ ಠಾಣಾ ಪೊಲೀಸರು ಬಂಧಿಸಿದ್ದಾರೆ.ಕೂಡ್ಲು ಗೇಟ್ ನಿವಾಸಿ ವೈಭವ್ ಗಣೇಶ್(20) ಬಂಧಿತ ಆರೋಪಿ. ಈತನಿಂದ ಕೃತ್ಯಕ್ಕೆ ಬಳಸಿದ್ದ ರೆಡ್‍ಮಿ-9 ಮೊಬೈಲ್ ವಶಪಡಿಸಿಕೊಳ್ಳಲಾಗಿದೆ. ಆರೋಪಿ ವೈಭವ್ ಗಣೇಶ್ ಪಂಜಾಬ್‍ನಲ್ಲಿ ಬಿಟೆಕ್ ವ್ಯಾಸಂಗ ಮಾಡುತ್ತಿದ್ದು, ಇವರ ಪೋಷಕರು ಕೂಡ್ಲುಗೇಟ್ ಬಳಿ ವಾಸವಾಗಿದ್ದಾರೆ. ಡಿ. 10ರಂದು ರಾತ್ರಿ 10.15ರಲ್ಲಿ ಜನೆರಿಕ್ ಟ್ವೀಟ್‍ನಲ್ಲಿ ವ್ಯಕ್ತಿಯೊಬ್ಬ ನಾನು ಬೆಂಗಳೂರು ಏರ್‍ಪೋರ್ಟ್‍ನಲ್ಲಿ ಬಾಂಬ್ […]