Wednesday, January 15, 2025
Homeಬೆಂಗಳೂರುಬೆಂಗಳೂರು ವಿಮಾನ ನಿಲ್ದಾಣದಲ್ಲಿ ಮೊದಲ ಬಾರಿಗೆ ಫ್ಯಾಷನ್‌ ಶೋ

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಮೊದಲ ಬಾರಿಗೆ ಫ್ಯಾಷನ್‌ ಶೋ

ಬೆಂಗಳೂರು: ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಸೀಸನ್ಸ್‌ ಆಫ್‌ ಸ್ಮೈಲ್‌ನ ಭಾಗವಾಗಿ ಇದೇ ಮೊದಲ ಬಾರಿಗೆ “ಫ್ಯಾಷನ್‌-ಶೋ” ನಡೆಸಲಾಯಿತು. ಫ್ಯಾಷನ್‌ ಡಿಸೈನರ್‌ ಪ್ರಸಾದ್‌ ಬಿದಪ್ಪ ಅವರ ನೇತೃತ್ವದಲ್ಲಿ ಮಾಡೆಲ್‌ಗಳು ರ್ಯಾಂಪ್‌ ವಾಕ್‌ ಮಾಡುವ ಮೂಲಕ ಎಲ್ಲರನ್ನು ಮನರಂಜಿಸಿದರು. ವಿಭಿನ್ನ, ವಿಶೇಷ ಹಾಗೂ ಪ್ರಯಾಣಿಕರು ಧರಿಸಬಹುದಾದ ವಿನ್ಯಾಸಗಳನ್ನು ತೊಟ್ಟು ರ್ಯಾಂಪ್‌ ವಾಕ್‌ ಮಾಡಿದರು. ಡಿಸೆಂಬರ್‌ ಹಾಗೂ ಜನವರಿ ತಿಂಗಳಾಂತ್ಯ ನಡೆಯಲಿರುವ ಸೀಸನ್ಸ್‌ ಆಫ್‌ ಸ್ಮೈಲ್‌ನ ಭಾಗವಾಗಿ ಫ್ಯಾಷನ್‌ ಶೋ ಜರುಗಿತು.

ಏರ್‌ಪೋರ್ಟ್‌ನಲ್ಲಿ ಲಭ್ಯವಿರುವ ಸತ್ಯ ಪೌಲ್, ಗ್ಯಾಸ್, ಶಾಪರ್ಸ್ ಸ್ಟಾಪ್, ಮತ್ತು ಸೂಪರ್‌ಡ್ರಿ ಸೇರಿದಂತೆ ಪ್ರಮುಖ ಬ್ರಾಂಡ್‌ಗಳ ಅದ್ಭುತ ಸಂಗ್ರಹಣೆಗಳನ್ನೊಳಗೊಂಡ ಆಧುನಿಕ ವಿನ್ಯಾಸಗಳನ್ನು ತೊಟ್ಟಿದ್ದರು.
ಪೌರಾಣಿಕ ರಾಕ್ ಬ್ಯಾಂಡ್ 13AD ನ ಮೋಡಿಮಾಡುವ ಪ್ರದರ್ಶನ ನೀಡಿದರು. ವಿಮಾನ ನಿಲ್ದಾಣದಲ್ಲಿ ಫ್ಯಾಷನ್‌ ಶೋ ಇದೇ ಮೊದಲ ಬಾರಿಗೆ ಆಯೋಜಿಸಿದ್ದು, ಟಿ೧ ಕ್ವಾಡ್‌ನ ಗ್ಲಾಮರ್‌ ಮತ್ತು ನಾವಿತ್ಯತೆಯನ್ನು ಎತ್ತಿ ತೋರಿಸಿತು.

RELATED ARTICLES

Latest News