Saturday, May 4, 2024
Homeಬೆಂಗಳೂರುಬೆಂಗಳೂರು ವಿಮಾನ ನಿಲ್ದಾಣದಲ್ಲಿ ಹಳದಿ ಅನಕೊಂಡಗಳನ್ನು ಕಳ್ಳಸಾಗಣೆ ಮಾಡುತ್ತಿದ್ದ ಪ್ರಯಾಣಿಕ ಅರೆಸ್ಟ್

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಹಳದಿ ಅನಕೊಂಡಗಳನ್ನು ಕಳ್ಳಸಾಗಣೆ ಮಾಡುತ್ತಿದ್ದ ಪ್ರಯಾಣಿಕ ಅರೆಸ್ಟ್

ಬೆಂಗಳೂರು,ಏ.23- ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 10 ಹಳದಿ ಅನಕೊಂಡಗಳನ್ನು ಕಳ್ಳಸಾಗಣೆ ಮಾಡಲು ಯತ್ನಿಸಿದ ಆರೋಪದ ಹಿನ್ನಲೆಯಲ್ಲಿ ಪ್ರಯಾಣಿಕನೊಬ್ಬನನ್ನು ಬಂಧಿಸಲಾಗಿದೆ.

ವಿಮಾನ ನಿಲ್ದಾಣದ ಕಸ್ಟಮ್ಸ್ ಇಲಾಖೆಗೆ ಸುಳಿವು ಸಿಕ್ಕಿದ್ದು, ವ್ಯಕ್ತಿಯ ಲಗೇಜ್‍ಗಳನ್ನು ಪರಿಶೀಲಿಸಿದಾಗ, ಹೆಬ್ಬಾವು, ಊಸರವಳ್ಳಿ, ಇಗ್ವಾನಾ, ಆಮೆಗಳು ಮತ್ತು ಅಲಿಗೇಟರ್ಗಳು ಟ್ರಾಲಿ ಬ್ಯಾಗ್‍ಗಳಲ್ಲಿ ಬಚ್ಚಿಟ್ಟಿರುವುದು ಕಂಡುಬಂದಿದೆ. ಕೂಡಲೇ ಪ್ರಯಾಣಿಕನನ್ನು ಬಂಧಿಸಲಾಯಿತು.

ಬೆಂಗಳೂರು ಕಸ್ಟಮ್ಸ್ ಇಲಾಖೆ ಅಧಿಕಾರಿಗಳು ಬ್ಯಾಂಕಾಕ್‍ನಿಂದ ಆಗಮಿಸಿದ ಪ್ರಯಾಣಿಕರನ್ನು ತಡೆದು ಬಂಧಿಸಿದ್ದಾರೆ ಎಂದು ಹೇಳಿದರು. ಪ್ರಯಾಣಿಕನನ್ನು ಬಂಧಿಸಲಾಗಿದೆ ಮತ್ತು ತನಿಖೆ ನಡೆಯುತ್ತಿದೆ. ವನ್ಯಜೀವಿ ಕಳ್ಳಸಾಗಣೆಯನ್ನು ಸಹಿಸುವುದಿಲ್ಲ ಎಂದು ಇಲಾಖೆ ತನ್ನ ಅಧಿಕೃತ ಎಕ್ಸ್ ಪೋಸ್ಟ್ ನಲ್ಲಿ ತಿಳಿಸಿದೆ.

ಕಳೆದ ವರ್ಷ, ಬೆಂಗಳೂರು ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಬ್ಯಾಂಕಾಕ್‍ನಿಂದ ಪ್ರಯಾಣಿಕರೊಬ್ಬರು ಕಳ್ಳಸಾಗಣೆ ಮಾಡಿದ ಮರಿ ಕಾಂಗರೂ ಸೇರಿದಂತೆ 234 ಕಾಡು ಪ್ರಾಣಿಗಳನ್ನು ರಕ್ಷಿಸಿದ್ದರು. ಪ್ಲಾಸ್ಟಿಕ್ ಬಾಕ್ಸ್‍ನಲ್ಲಿದ್ದ ಯುವ ಕಾಂಗರೂ ಉಸಿರುಗಟ್ಟಿ ಸಾವನ್ನಪ್ಪಿತ್ತು.

RELATED ARTICLES

Latest News