ಮೈಸೂರು ಜಿಲ್ಲೆ ಪ್ರವೇಶಿಸಿದ ಭಾರತ ಐಕ್ಯತಾ ಯಾತ್ರೆ

ಮೈಸೂರು, ಅ.1- ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್‍ಗಾಂಧಿ ಅವರ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಭಾರತ ಐಕ್ಯತಾ ಯಾತ್ರೆ ಇಂದು ಚಾಮರಾಜನಗರ ಗಡಿ ದಾಟಿ ಮೈಸೂರು ಜಿಲ್ಲೆ ಪ್ರವೇಶಿಸಿದೆ. ರಾಜ್ಯದಲ್ಲಿ ಎರಡನೆ ದಿನದ ಯಾತ್ರೆ ಇಂದು ಬೆಳಗ್ಗೆ ಮಳೆಯ ಕಾರಣಕ್ಕೆ ಕೆಲ ಕಾಲ ವಿಳಂಬವಾಗಿ ಆರಂಭವಾಗಿ ಆರಂಭವಾಯಿತು. ಮುಂಜಾನೆ 6.30ಕ್ಕೆ ಯಾತ್ರೆ ಆರಂಭಕ್ಕೆ ಸಮಯ ನಿಗದಿ ಪಡಿಸಲಾಗಿತ್ತು. ಆದರೆ ಮಳೆಯ ಕಾರಣಕ್ಕೆ ಎಂಟು ಗಂಟೆ ಸುಮಾರಿಗೆ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆಯ ತೊಂಡವಾಡಿ ಗೇಟ್‍ನಿಂದ ಆರಂಭವಾಯಿತು. ಮೈಸೂರು ಜಿಲ್ಲೆ ಪ್ರವೇಶಿಸಿದ ಪಾದಯಾತ್ರೆ […]

ಭಾರತ ಥೋಡೋ ಮಾಡಿದ್ದೇ ಕಾಂಗ್ರೆಸ್‍ನವರು : ಸಿಎಂ ಬೊಮ್ಮಾಯಿ

ಹಾವೇರಿ,ಸೆ.29- ಭಾರತ್ ಥೋಡೊ ಮಾಡಿದ್ದೇ ಕಾಂಗ್ರೆಸ್ ಪಕ್ಷದವರು. ಈಗ ಭಾರತ್ ಜೋಡೊ ಮಾಡುವ ಅಗತ್ಯವಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿರುಗೇಟು ಕೊಟ್ಟಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಭಾರತ್ ಜೋಡೊ ಮಾಡುತ್ತಿರುವವರು ಯಾರು, ಭಾರತ್ ಥೋಡೊ ಮಾಡಿದವರು ಯಾರು ಎಂಬುದು ಎಲ್ಲರಿಗೂ ಗೊತ್ತು.ಇಂಥವರು ಈಗ ದೇಶ ಜೋಡಿಸುತ್ತೇವೆ ಎಂದು ಹೊರಟಿರುವುದು ಹಾಸ್ಯಾಸ್ಪದ ಎಂದು ಕುಹುಕುವಾಡಿದರು. ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆಯಲ್ಲಿ ಕಾಂಗ್ರೆಸ್ ಪಕ್ಷದ ಬ್ಯಾನರ್‍ಗಳನ್ನು ಹರಿದಿರುವ ಬಗ್ಗೆ ಪ್ರತಿಕ್ರಿಯಿಸಿದ ಬೊಮ್ಮಾಯಿ, ಎಲ್ಲ ರಾಜಕೀಯ ಪಕ್ಷಗಳು ಅನುಮತಿ ಪಡೆದು […]

ಭಾರತ್ ಐಕ್ಯತಾ ಯಾತ್ರೆಗೆ ಕೇರಳದಲ್ಲಿ ಯಶಸ್ಸು

ನವದೆಹಲಿ, ಸೆ.29- ಭಾರತ್ ಐಕ್ಯತಾ ಯಾತ್ರೆ ಕೇರಳದಲ್ಲಿ ಅಭೂತ ಪೂರ್ವ ಯಶಸ್ಸು ಗಳಿಸಿದ್ದಕ್ಕೆ ಕೃತಜ್ಞತೆ ಸಲ್ಲಿಸಿರುವ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್‍ಗಾಂಧಿ ಕೇರಳ ನನ್ನ ಮನೆ, ನನಗೆ ಮನೆಯಿಂದ ತುಂಬು ಪ್ರೀತಿ ಸಿಕ್ಕಿದೆ ಎಂದು ಟ್ವೀಟ್ ಮಾಡಿದ್ದಾರೆ. ನಾನು ಎಷ್ಟು ಪ್ರೀತಿ ಕೊಟ್ಟೆ ಎಂಬುದು ಮುಖ್ಯವಲ್ಲ. ಆದರೆ ಏನೇ ಕೊಟ್ಟರು ಅದಕ್ಕಿಂತಲೂ ಹೆಚ್ಚಿನದನ್ನು ಕೇರಳದ ಜನ ನನಗೆ ಮರಳಿ ನೀಡಿದ್ದಾರೆ. ನಾನು ಸದಾ ಕಾಲ ಕೇರಳಕ್ಕೆ ಋಣಿಯಾಗಿದ್ದೇನೆ ಎಂದು ಧನ್ಯವಾದ ಹೇಳಿದ್ದಾರೆ. ಕೇರಳದ 18 ದಿನಗಳ ಪಾದಯಾತ್ರೆಯಲ್ಲಿ […]

BIG NEWS : ನಟ ದರ್ಶನ್ ವಿರುದ್ಧ ದೂರು ದಾಖಲು

ಬೆಂಗಳೂರು,ಆ.9- ಹಣಕಾಸಿನ ತೊಂದರೆಯಿಂದಾಗಿ ಚಿತ್ರೀಕರಣ ತಡವಾಗಿದ್ದಕ್ಕೆ ನಿರ್ಮಾಪಕನಿಗೆ ಖ್ಯಾತ ನಟರೊಬ್ಬರು ಬೆದರಿಕೆ ಹಾಕಿದ್ದು, ಈ ಬಗ್ಗೆ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಎನ್‍ಸಿಆರ್ ದಾಖಲಾಗಿದೆ. ನಿರ್ಮಾಪಕ ಭರತ್ ವಿಷ್ಣುಕಾಂತ್ ಎಂಬುವರು ಭಗವಾನ್ ಶ್ರೀ ಕೃಷ್ಣ ಪರಮಾತ್ಮ ಎಂಬ ಚಿತ್ರ ನಿರ್ಮಿಸುತ್ತಿದ್ದು, ಈ ಚಿತ್ರದಲ್ಲಿ ಧ್ರುವನ್ ಎಂಬುವರು ನಾಯಕ ನಟನಾಗಿ ನಟಿಸುತ್ತಿದ್ದಾರೆ. ಹಣಕಾಸಿನ ತೊಂದರೆಯಿಂದಾಗಿ ಭರತ್ ಅವರು ಈ ಚಿತ್ರದ ಚಿತ್ರೀಕರಣವನ್ನು ತಡವಾಗಿ ಮಾಡುತ್ತಿರುವುದರಿಂದ ಬೇಸರಗೊಂಡ ಧ್ರುವನ್ ಈ ಬಗ್ಗೆ ನಟ ದರ್ಶನ್ ಅವರ ಬಳಿ ಹೋಗಿ ಹೇಳಿಕೊಂಡು ಅವರಿಂದ […]