ಭವಾನಿ ರೇವಣ್ಣಗೆ ಟಿಕೆಟ್ ಆಫರ್ ನೀಡಿದ ಬಿಜೆಪಿ

ಚಿಕ್ಕಮಂಗಳೂರು,ಜ.27- ಒಂದು ವೇಳೆ ಪಕ್ಷದ ನೀತಿ ಸಿದ್ದಾಂತವನ್ನು ಒಪ್ಪಿ ಬಂದರೆ ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ ಅವರಿಗೆ ಬಿಜೆಪಿ ಟಿಕೆಟ್ ನೀಡಲಿದೆ ಎಂದು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭವಾನಿ ರೇವಣ್ಣ ಅವರು ಬಿಜೆಪಿಯ ಸಿದ್ದಾಂತವನ್ನು ಒಪ್ಪಿ ಬಂದರೆ ಖಂಡಿತವಾಗಿಯೂ ಅವರಿಗೆ ಟಿಕೆಟ್ ನೀಡಲಾಗುತ್ತದೆ. ಹೊಳೆನರಸೀಪುರದಲ್ಲಿ ಅವರಿಗಿಂತ ಒಳ್ಳೆಯ ಅಭ್ಯರ್ಥಿ ಇನ್ಯಾರು ಬೇಕು ಎಂದು ಪ್ರಶ್ನಿಸಿದರು. ಯಾರೇ ಬಂದರೂ ಖಂಡಿವಾಗಿಯೂ ಅವರ ಹಿನ್ನಲೆ ನೋಡಿಕೊಂಡು ಪಕ್ಷದ ವರಿಷ್ಠರು […]

ಹಾಸನ ಜೆಡಿಎಸ್ ಟಿಕೆಟ್‌ಗೆ ಜಿದ್ಧಾಜಿದ್ದಿ

ಹಾಸನ, ಜ.25- ಹಾಸನ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿ ನಾನೇ ಎಂದು ಜಿ.ಪಂ.ಮಾಜಿ ಸದಸ್ಯೆ ಭವಾನಿ ರೇವಣ್ಣ ಸಮಾರಂಭ ಒಂದರಲ್ಲಿ ಹೇಳಿಕೊಂಡಿದ್ದಾರೆ. ತಾಲ್ಲೂಕಿನ ಕಕ್ಕೇನಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಅಣ್ಣಪ್ಪ ಸ್ವಾಮಿ ದೇವಾಲಯ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ ಅವರು ಜೆಡಿಎಸ್‍ನಿಂದ ನನ್ನನ್ನು ಅಭ್ಯರ್ಥಿ ಮಾಡಬೇಕು ಎಂದು ಎಲ್ಲರೂ ಮಾತನಾಡಿಕೊಂಡು ನಿರ್ಣಯ ತೆಗೆದುಕೊಂಡಿದ್ದಾರೆ. ಸ್ವಲ್ಪ ದಿನಗಳಲ್ಲೇ ನನ್ನ ಹೆಸರು ಘೋಷಣೆಯಾಗುವ ಸಾಧ್ಯತೆ ಇದೆ ಎಂದಿದ್ದಾರೆ. ಜನರ ಪರಿಚಯ ಇದ್ದರೆ, ಊರಿನ ಪರಿಚಯ ಆಗುತ್ತದೆ. ಮುಂದಿನ ದಿನಗಳಲ್ಲಿ ಕೆಲಸ ಮಾಡಲು […]