6 ಮಂದಿ ಡಕಾಯಿತರ ಬಂಧನ : 16 ಲಕ್ಷ ಬೆಲೆಬಾಳುವ BMW ಬೈಕ್, 3 ಕಾರು ವಶ

ಬೆಂಗಳೂರು, ಡಿ. 22- ಬೈಕ್ ಖರೀದಿ ನೆಪದಲ್ಲಿ ಮಾಲೀಕರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ವಾಹನದೊಂದಿಗೆ ಪರಾರಿಯಾಗಿದ್ದ ಆರು ಮಂದಿ ಡಕಾಯಿತರನ್ನು ವಿಜಯನಗರ ಠಾಣೆ ಪೊಲೀಸರು ಬಂಧಿಸಿ 16 ಲಕ್ಷ ಬೆಲೆಬಾಳುವ ಬಿಎಂಡಬ್ಲ್ಯೂ ಬೈಕ್ ಹಾಗೂ ಕೃತ್ಯಕ್ಕೆ ಬಳಸಿದ್ದ 31 ಲಕ್ಷ ಮೌಲ್ಯದ ಮೂರು ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ. ವಿಶ್ವಾಸ್(23), ಜಗನ್ನಾಥ್(21), ಗಜೇಂದ್ರ(34), ಲಿಖಿತ್ ಕುಮಾರ್(29), ಶಶಾಂಕ್(23) ಮತ್ತು ಪವನ್(21) ಬಂಧಿತ ಡಕಾಯಿತರು. ಕಳೆದ ನ.10ರಂದು ಸಂಜೆ 6.30ರ ಸುಮಾರಿಗೆ ವಿಶ್ವಾಸ್ ಮತ್ತು ಆತನ ಸಂಗಡಿಗರು ಬೈಕ್ ಖರೀದಿ […]