ಸರಗಳ್ಳನ ಬಂಧನ, 2 ಲಕ್ಷ ಮೌಲ್ಯದ ಮಾಂಗಲ್ಯ ಸರ ಜಪ್ತಿ

ಬೆಂಗಳೂರು, ಫೆ.7 – ದಾರಿಹೋಕರನ್ನು ಅಡ್ಡಗಟ್ಟಿ ಹಲ್ಲೆ ಮಾಡಿ ಚಾಕು ತೋರಿಸಿ ಹೆದರಿಸಿ ಸರ ಅಪರಿಸುತ್ತಿದ್ದ ದರೋಡೆಕೋರನನ್ನು ಬನಶಂಕರಿ ಠಾಣೆ ಪೊಲೀಸರು ಬಂಧಿಸಿ 2 ಲಕ್ಷ ರೂ. ಬೆಲೆಬಾಳುವ ಮಾಂಗಲ್ಯ ಸರ ವಶಪಡಿಸಿಕೊಂಡಿದ್ದಾರೆ. ಬನಶಂಕರಿ ಎರಡನೇ ಹಂತ ಸರಬಂಡೆ ಪಾಳ್ಯ ನಿವಾಸಿ ಪದ್ಮನಾಭ ಅಲಿಯಾಸ್ ಗೂಳಿ ಗುಂಡ ಅಲಿಯಾಸ್ ಗೂಳಿ ರವಿ(28) ಬಂಧಿತ ಆರೋಪಿ. ಆರೋಪಿಯಿಂದ 2 ಲಕ್ಷ ರೂ. ಮೌಲ್ಯದ 40 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರವನ್ನು ವಶಪಡಿಸಿಕೊಳ್ಳಲಾಗಿದೆ. ಈ ಪ್ರಕರಣದಲ್ಲಿ ಮತ್ತೊಬ್ಬ ಆರೋಪಿ […]

ಸರ ಎಗರಿಸಿ ಠಾಣೆ ಪಕ್ಕದಲ್ಲೇ ನೆಲೆಸಿದ್ದ ಸರಗಳ್ಳ ಖಾಕಿ ಬಲೆಗೆ

ಬೆಂಗಳೂರು, ಜ. 21- ವಿಳಾಸ ಕೇಳುವ ನೆಪದಲ್ಲಿ ಮಹಿಳೆಯ ಗಮನ ಸೆಳೆದು ಮಾಂಗಲ್ಯ ಸರ ಎಗರಿಸಿ ಪೊಲೀಸ್ ಠಾಣೆ ಪಕ್ಕದ ಮನೆಯಲ್ಲೇ ನೆಲೆಸಿದ್ದ ಖತರ್ನಾಕ್ ಕಳ್ಳನೊಬ್ಬನನ್ನು ಚೆನ್ನಮ್ಮನ ಕೆರೆ ಅಚ್ಚುಕಟ್ಟು ಠಾಣೆ ಪೊಲೀಸರು ಬಂಧಿಸಿ 2.20 ಲಕ್ಷ ಮೌಲ್ಯದ ಸರ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಬನಶಂಕರಿ ಮೂರನೇ ಹಂತ, ಕತ್ರಿಗುಪ್ಪೆ, ಸಿದ್ದಾರ್ಥಲೇಔಟ್‍ನ ಒಂದನೇ ಮುಖ್ಯರಸ್ತೆ ನಿವಾಸಿ ಮಂಜುನಾಥ ಅಲಿಯಾಸ್ ಜಿಮ್ ಮಂಜ(28) ಬಂಧಿತ ಸರಗಳ್ಳ. ಡಿ. 4ರಂದು ಸಂಜೆ 6.30ರ ಸುಮಾರಿನಲ್ಲಿ ರುಕ್ಮಿಣಿ ಎಂಬುವರು ಮನೆ ಸಮೀಪದ ಪಾರ್ಕ್‍ನಲ್ಲಿ […]

ಮಾಂಗಲ್ಯ ಸರ ದೋಚಿದ್ದ ಇಬ್ಬರ ಬಂಧನ

ಬೆಂಗಳೂರು,ಜ.20- ಮಹಿಳೆಗೆ ಬೆದರಿಕೆ ಹಾಕಿ ಮಾಂಗಲ್ಯ ಸರ ಕಿತ್ತುಕೊಂಡು ಹೋಗಿದ್ದ ಹಾಗೂ ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡಿದ್ದ ಇಬ್ಬರು ದರೋಡೆಕೋರರನ್ನು ಹನುಮಂತ ನಗರ ಠಾಣೆ ಪೊಲೀಸರು 500ಕ್ಕೂ ಹೆಚ್ಚು ಸಿಸಿಟಿವಿಗಳನ್ನು ಪರಿಶೀಲಿಸಿ ಬಂಧಿಸಿ 27 ಗ್ರಾಂ ಚಿನ್ನದ ಸರ ಹಾಗೂ 12 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಪಂತರಪಾಳ್ಯ, ಅಂಬೇಡ್ಕರ್‍ನಗರದ ನಿವಾಸಿ ಸುನೀಲ್‍ಕುಮಾರ್(37), ವಿನಾಯಕ ಲೇಔಟ್‍ನ ಶ್ರೀನಿವಾಸ (25) ಬಂಧಿತ ಆರೋಪಿಗಳು. ಹನುಮಂತನಗರದ 2ನೇ ಬ್ಲಾಕ್, 1ನೇ ಹಂತದ 5ನೇ ಕ್ರಾಸ್ ನಿವಾಸಿ ಜಯಶ್ರೀ(56) ಎಂಬುವರು ಅಶೋಕನಗರದಲ್ಲಿರುವ ಜಿ.ಟಿ.ಎಲ್‍ಪಿಎಸ್ […]

ಬೆಂಗಳೂರಿನಲ್ಲಿ ಹೆಚ್ಚಿದ ಸರಗಳ್ಳತನ, ಒಂದೇ ದಿನ ನಾಲ್ಕು ಮಹಿಳೆಯರ ಸರ ಅಪಹರಣ

ಬೆಂಗಳೂರು, ಜ.6- ನಗರದ ಉತ್ತರ ವಿಭಾಗದಲ್ಲಿ ಇಂದು ಮುಂಜಾನೆ ನಾಲ್ವರು ಮಹಿಳೆಯರ ಸರಗಳ ಅಪಹರಣಗಳಾಗಿವೆ. ಇಂದು ಬೆಳಗಿನ ಜಾವ 5.30ರಿಂದ ಸರಗಳ್ಳರು ಬೈಕ್‍ನಲ್ಲಿ ಸುತ್ತಾಡುತ್ತಾ 9 ಗಂಟೆಯ ನಡುವೆ ನಾಲ್ವರು ಮಹಿಳೆಯರ ಸರಗಳನ್ನು ಎಗರಿಸಿ ಪರಾರಿಯಾಗಿದ್ದಾರೆ. ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಬ್ಬರು ಮಹಿಳೆಯರ ಸರ ಅಪಹರಣವಾಗಿದ್ದರೆ ಯಶವಂತಪುರ ಹಾಗೂ ಪೀಣ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲೂ ಇಬ್ಬರು ಮಹಿಳೆಯರ ಸರ ಅಪಹರಣ ನಡೆದಿದೆ. ಬಾಗಲಗುಂಟೆ: ಇಂದು ಬೆಳಗಿನ ಜಾವ 5.30ರ ಸುಮಾರಿನಲ್ಲಿ ಸರ್ವಮಂಗಳ ಎಂಬುವರು ಎಂಇಐ ಲೇಔಟ್‍ನಲ್ಲಿ […]