ವಿಡಿಯೋಕಾನ್ ಸಿಇಒ ವೇಣುಗೋಪಾಲ್ ಅರೆಸ್ಟ್

ನವದೆಹಲಿ,ಡಿ.26-ಸಾವಿರಾರು ಕೋಟಿ ರೂ.ಗಳ ಸಾಲ ವಂಚನೆ ಪ್ರಕರಣದಲ್ಲಿ ಕೊಚ್ಚಾರ್ ದಂಪತಿ ಬಂಧನದ ಬೆನ್ನಲ್ಲೇ ವಿಡಿಯೋಕಾನ್ ಸಿಇಒ ವೇಣುಗೋಪಾಲ್ ಧೋತ್‍ರನ್ನು ಸಿಬಿಐ ಬಂಧಿಸಿದೆ. ಐಸಿಐಸಿಐ ಬ್ಯಾಂಕ್‍ನ ಮಾಜಿ ಸಿಇಒ ಚಂದ ಕೊಚ್ಚಾರ್ ಮತ್ತು ಆಕೆಯ ಪತಿ ದೀಪಕ್ ಕೊಚ್ಚಾರ್‍ರನ್ನು ನಿನ್ನೆ ಬಂಧಿಸಲಾಗಿತ್ತು. ತನಿಖೆ ಮುಂದುವರೆದ ಬೆನ್ನಲ್ಲೇ ಪ್ರತಿಷ್ಟಿತ ವಿಡಿಯೋಕಾನ್ ಸಂಸ್ಥೆಯ ಮುಖ್ಯ ನಿರ್ವಹಣಾಕಾರಿಯನ್ನು ಬಂಧಿಸಲಾಗಿದೆ. 2018ರ ಅಕ್ಟೋಬರ್‍ನಲ್ಲಿ ಚಂದನ್ ಕೊಚ್ಚಾರ್ ಬ್ಯಾಂಕ್‍ನ ಸಿಇಒ ಸ್ಥಾನವನ್ನು ತೊರೆದಿದ್ದರು. 2012ರಲ್ಲಿ ವಿಡಿಯೋಕಾನ್ ಸಂಸ್ಥೆ ಅಕ್ರಮ ಮಾರ್ಗಗಳ ಮೂಲಕ 3250 ಕೋಟಿ ರೂ. […]

3ನೇ ಬಾರಿಗೆ ಸಭಾಪತಿಯಾಗಿ ಹೊಸ ದಾಖಲೆ ಬರೆದ ಹೊರಟ್ಟಿ

ಬೆಳಗಾವಿ, ಡಿ.21- ವಿಧಾನ ಪರಿಷತ್ತಿನ ಬಿಜೆಪಿಯ ಹಿರಿಯ ಸದಸ್ಯ ಬಸವರಾಜ ಶಿವಲಿಂಗಪ್ಪ ಹೊರಟ್ಟಿ ಅವರು ನಿರೀಕ್ಷೆಯಂತೆ ಮೇಲ್ಮನೆಯ ನೂತನ ಸಭಾಪತಿಯಾಗಿ ಸರ್ವಾನುಮತದಿಂದ ಆಯ್ಕೆಯಾದರು. ಕಳೆದ ನಾಲ್ಕು ದಶಕಗಳಿಂದ ನಿರಂತರವಾಗಿ ವಿಧಾನಪರಿಷತ್ತಿನ ಸದಸ್ಯರಾಗಿರುವ ಬಸವರಾಜ ಹೊರಟ್ಟಿ ಅವರು, 2018ರ ಜೂನ್‍ನಿಂದ ಡಿಸೆಂಬರ್‍ವರೆಗೆ ಮೊದಲ ಬಾರಿಗೆ ಸಭಾಪತಿಯಾಗಿದ್ದರು. ಬಳಿಕ 2021 ಫೆಬ್ರವರಿಯಿಂದ 2022ರ ಮೇ ವರೆಗೆ ಎರಡನೇ ಬಾರಿಗೆ ಸಭಾಪತಿಯಾಗಿ, ಪ್ರಸ್ತುತ ಮೂರನೇ ಬಾರಿಗೆ ರಾಜ್ಯ ವಿಧಾನ ಪರಿಷತ್ತಿನ ಸಭಾಪತಿಯಾಗುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ. ಇಂದು ಬೆಳಿಗ್ಗೆ ವಿಧಾನಪರಿಷತ್ತಿನ […]

ನಿಗಮ ಮಂಡಳಿಗಳಿಗೆ ನೇಮಕ ಭಾಗ್ಯ, ಪಕ್ಷ ನಿಷ್ಠರಿಗೆ ಮಣೆ

ಬೆಂಗಳೂರು,ಅ.18- ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ವಾರಾಂತ್ಯ ದೊಳಗೆ ನಿಗಮ ಮಂಡಳಿ ಅಧ್ಯಕ್ಷರ ನೇಮಕಾತಿಗೆ ಕೊನೆಗೂ ಅಂಕಿತ ಬೀಳಲಿದೆ. ಒಂದಿಲ್ಲೊಂದು ಕಾರಣಗಳಿಂದ ಪದೇ ಪದೇ ಮುಂದೂಡಿಕೆಯಾಗಿ ಆಕಾಂಕ್ಷಿಗಳು ಹಾಗೂ ಪಕ್ಷದ ಕಾರ್ಯಕರ್ತರಿಗೆ ನಿರಾಸೆ ಉಂಟಾಗಿತ್ತು. ಇದೀಗ 45 ನಿಗಮ ಮಂಡಳಿಗಳಿಗೆ ಅಧ್ಯಕ್ಷರನ್ನು ನೇಮಕ ಮಾಡಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆದೇಶ ಹೊರಡಿಸಲಿದ್ದಾರೆ. ಸಂಘ ಪರಿವಾರ ಮತ್ತು ಪಕ್ಷದ ವರಿಷ್ಠರು ಬಿಜೆಪಿ ಕಾರ್ಯಕರ್ತರಿಗೆ ನಿಗಮ ಮಂಡಳಿಯಲ್ಲಿ ಸ್ಥಾನ ನೀಡಬೇಕೆಂದು ಸೂಚನೆ ನೀಡಿರುವುದರಿಂದ ಬಹುತೇಕ ಪಕ್ಷ ನಿಷ್ಠರಿಗೆ ಸ್ಥಾನಮಾನ ಸಿಗುವ […]

ಸಭಾಪತಿ ಸ್ಥಾನಕ್ಕೆ RSS ಅಡ್ಡಿ, ಹೊರಟ್ಟಿ ಅತಂತ್ರ

ಬೆಂಗಳೂರು,ಸೆ.21- ಪಶ್ಚಿಮ ಶಿಕ್ಷಕರ ಕ್ಷೇತ್ರದ ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಅವರನ್ನು ಪರಿಷತ್‍ನ ಸಭಾಪತಿ ಸ್ಥಾನಕ್ಕೆ ನೇಮಿಸಲು ಮೂಲ ಬಿಜೆಪಿ ಮತ್ತು ಆರ್‍ಎಸ್‍ಎಸ್ ನಾಯಕರು ವಿರೋಧಿಸುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿಯ ಹಿರಿಯ ಶಾಸಕ ಜಗದೀಶ್ ಶೆಟ್ಟರ್ ಅವರು ಬಸವರಾಜ ಹೊರಟ್ಟಿ ಅವರಿಗೆ ನೀಡಿದ ಭರವಸೆಯನ್ನು ಉಳಿಸಿಕೊಳ್ಳುವ ಅನಿವಾರ್ಯತೆ ಎದುರಾಗಿದೆ. ಬಸವರಾಜ ಹೊರಟ್ಟಿ ಅವರನ್ನು ಮತ್ತೆ ವಿಧಾನಪರಿಷತ್ತಿನ ಸಭಾಪತಿಯನ್ನಾಗಿ ಮಾಡುವುದಾಗಿ ಕೊಟ್ಟ […]

ಸಭಾಪತಿ ಚುನಾವಣೆ : ಸರ್ಕಾರದ ನಿಲುವು ಇಂದು ಸ್ಪಷ್ಟನೆ

ಬೆಂಗಳೂರು,ಸೆ.20-ವಿಧಾನಪರಿಷತ್ ಸಭಾಪತಿ ಸ್ಥಾನದ ಚುನಾವಣೆ ನಡೆಸುವ ಕುರಿತು ಸರ್ಕಾರ ನಿಲುವು ಏನೆಂಬುದು ಇಂದು ಗೊತ್ತಾಗಲಿದೆ. ಎಲ್ಲವೂ ನಿರೀಕ್ಷೆಯಂತೆ ನಡೆದರೆ ಗುರುವಾರ ಸಭಾಪತಿ ಸ್ಥಾನದ ಚುನಾವಣೆ ನಡೆದು ಬಿಜೆಪಿಯ ಹಿರಿಯ ಸದಸ್ಯ ಬಸವರಾಜ ಹೊರಟ್ಟಿಯವರು ಆಯ್ಕೆಯಾಗುವ ಸಂಭವವೇ ಹೆಚ್ಚಾಗಿತ್ತು. ಆದರೆ ಬಿಜೆಪಿಯಲ್ಲಿ ನಡೆದ ಕೆಲವು ಮಿಂಚಿನ ಬೆಳವಣಿಗೆಯಿಂದ ಹೊರಟ್ಟಿಗೆ ಸಭಾಪತಿ ಸ್ಥಾನ ಸಿಗುವುದೇ ಅನುಮಾನವಾಗಿದೆ. ಏಕೆಂದರೆ ಪಕ್ಷದಲ್ಲಿರುವ ಕೆಲವು ಹಿರಿಯರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಗುರುವಾರದೊಳಗೆ ವಿಧಾನಪರಿಷತ್ ಸಭಾಪತಿ ಸ್ಥಾನಕ್ಕೆ ಚುನಾವಣೆ […]

ಸಭಾಪತಿ ಚುನಾವಣೆ ಮುಂದೂಡಿಕೆ : ಹೊರಟ್ಟಿಗೆ ನಿರಾಸೆ

ಬೆಂಗಳೂರು,ಸೆ.19- ಸಭಾಪತಿ, ಉಪಸಭಾಪತಿ ಚುನಾವಣೆ ನಡೆಸಲು ಮುಂದಾಗಿರುವ ಬಿಜೆಪಿಗೆ ಹೊಸ ಸಂಕಷ್ಟ ಎದುರಾಗಿದೆ.ಸಭಾಪತಿ ಸ್ಥಾನದ ಭರವಸೆ ನೀಡಿ ಬಿಜೆಪಿಗೆ ಕರೆತಂದಿರುವ ಬಸವರಾಜ ಹೊರಟ್ಟಿ ಅವರಿಗೆ ಅವಕಾಶ ನೀಡುವುದಕ್ಕೆ ಬಿಜೆಪಿಯ ಕೆಲ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದು, ಸಂಘ ಪರಿವಾರದ ಕಚೇರಿಯ ಬಾಗಿಲು ತಟ್ಟಿದ್ದಾರೆ. ಹೀಗಾಗಿ ಚುನಾವಣೆ ಮುಂದೂಡುವ ಚಿಂತನೆ ನಡೆಸಲಾಗಿದೆ ಎಂದು ಹೇಳಲಾಗುತ್ತಿದೆ. ಶಿಕ್ಷಕರ ಕ್ಷೇತ್ರದಲ್ಲಿ ಸೋಲಿಲ್ಲದ ಸರದಾರನಾಗಿರುವ ಬಸವರಾಜ ಹೊರಟ್ಟಿ ಅವರನ್ನು ಸೆಳೆದು ಟಿಕೆಟ್ ನೀಡಿದ್ದ ಬಿಜೆಪಿ ಪರಿಷತ್‍ನಲ್ಲಿ ಬಹುಮತಕ್ಕೆ ಬೇಕಾದ ಸಂಖ್ಯೆ ತಲುಪುವಲ್ಲಿ ಸಫಲವಾಗಿದೆ. ಅಲ್ಲದೇ, […]

ಕೇಂದ್ರ ವಿಶ್ವವಿದ್ಯಾಲಯಗಳ ಪ್ರವೇಶಕ್ಕೆ ಸಾಮಾನ್ಯ ಪರೀಕ್ಷೆ

ನವದೆಹಲಿ, ಆ.2- ಕೇಂದ್ರ ವಿಶ್ವವಿದ್ಯಾಲಯಗಳಲ್ಲಿನ ಸ್ನಾತಕೋತ್ತರ ಮತ್ತು ಪಿಎಚ್‍ಡಿ ಕೋರ್ಸ್‍ಗಳ ಪ್ರವೇಶಕ್ಕೆ ಸೆಪ್ಟಂಬರ್ 1ರಿಂದ 11ರವರೆಗೆ ದೇಶ ಹಾಗೂ ವಿದೇಶಗಳ ನಗರಗಳಲ್ಲಿ ವಿಶ್ವವಿದ್ಯಾಲಯ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಯುಇಟಿ) ನಡೆಯಲಿದೆ. ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಅಧ್ಯಕ್ಷ ಮಹಿದಾಲ ಜಗದೀಶ್ ಕುಮಾರ್ ಅವರು ಟ್ವೀಟ್ ಮೂಲಕ ಪರೀಕ್ಷೆಯ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಸಿಯುಇಟಿ ಪರೀಕ್ಷೆಗಳಿಗೆ ಸೆಪ್ಟಂಬರ್ 1ರಿಂದ 7 ತಾರೀಖಿನವರೆಗೆ ಮತ್ತು 9ರಿಂದ 11ನೇ ತಾರೀಖಿನವರೆಗೆ ನಡೆಯಲಿವೆ. ದೇಶದ 500 ನಗರಗಳು ಹಾಗೂ ವಿದೇಶದ 13 ನಗರಗಳಲ್ಲಿ ಪರೀಕ್ಷೆಗಳು […]