ಮಹಿಳೆಗೆ ಸೋಮಣ್ಣ ಕಪಾಳಮೋಕ್ಷ, ಬಿಜೆಪಿ ನಾಯಕರು ಹೇಳೋದೇನು..?

ಚಾಮರಾಜನಗರ/ಬೆಂಗಳೂರು, ಅ.23- ಪ್ರತಿ ಬಾರಿ ಚಾಮರಾಜಕ್ಕೆ ಬಂದಾಗಲೆಲ್ಲ ಈ ರೀತಿ ಡ್ರಾಮಾ ಮಾಡಿಸೋದು ಕಾಂಗ್ರೆಸ್ ಚಾಳಿ ಎಂದು ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗುಂಡ್ಲುಪೇಟೆಯಲ್ಲಿ ಹಂಗಳ ಗ್ರಾಮದಲ್ಲಿ ಕಾಂಗ್ರೆಸ್ ಬೆಂಬಲಿತ ಮಹಿಳೆಯೊಬ್ಬರು ಸಚಿವರಿಗೆ ದಮಕಿ ಹಾಕಿದಾಗ ಸೋಮಣ್ಣ ಅವರು ವಿನಯವಾಗಿಯೇ ಆಕೆಯನ್ನು ಸಮಾಧಾನ ಪಡಿಸಿದ್ದಾರೆ. ಈ ವೇಳೆ ಇದನ್ನು ದೊಡ್ಡದು ಮಾಡಿ ಹಲ್ಲೆ ನಡೆಸಿದ್ದಾರೆ ಎಂದು ಬಿಂಬಿಸಿದ್ದಾರೆ. ಹಲವಾರು ಮಂದಿಗೆ ಇಲ್ಲಿ ಮನೆಯ ಹಕ್ಕು ಪತ್ರಗಳನ್ನು ನೀಡಲಾಗಿದೆ. ಹೈಡ್ರಾಮಾ ಮಾಡಿದ ಮಹಿಳೆಗೂ ಕೂಡ ಮನೆ ಸಿಕ್ಕಿದೆ. BIG […]

ಕಷ್ಟ ಹೇಳಿಕೊಳ್ಳಲು ಬಂದ ಮಹಿಳೆಯ ಕೆನ್ನೆಗೆ ಬಾರಿಸಿದ ಸಚಿವ ಸೋಮಣ್ಣ

ಚಾಮರಾಜನಗರ, ಅ.23- ಸಮಸ್ಯೆ ಹೇಳಲು ಬಂದ ಮಹಿಳೆಯೊಬ್ಬರಿಗೆ ವಸತಿ ಸಚಿವ ವಿ.ಸೋಮಣ್ಣ ಅವರು ಕಪಾಳ ಮೋಕ್ಷ ಮಾಡಿರುವ ಘಟನೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಸೋಮಣ್ಣ ಅವರ ಈ ಧೋರಣೆಯನ್ನು ಕಾಂಗ್ರೆಸ್ ಹಾಗೂ ಜೆಡಿಎಸ್ ಮುಂಖಡರು ಖಂಡಿಸಿದ್ದು, ಕೂಡಲೇ ಅವರು ಕಪಾಳ ಮೋಕ್ಷ ಮಾಡಿಸಿಕೊಂಡ ಮಹಿಳೆಯ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ. ಸೋಮಣ್ಣ ಅವರ ಈ ವರ್ತನೆ ಅವರಲ್ಲಿರುವ ಎರಡು ಮುಖಗಳನ್ನು ಜನರಿಗೆ ಪರಿಚಯಿಸಿದೆ. ಮೇಲ್ನೋಟಕ್ಕೆ ಅವರು ಇರೋದೆ ಬೇರೆ ಅವರ ವರ್ತನೆಯೇ ಬೇರೆ ಎಂಬುದಕ್ಕೆ ಈ ಪ್ರಕರಣ […]

ನ್ಯಾಯಾಧೀಶರ ಭೇಟಿ ವೇಳೆ ಠಾಣೆ ಬಾಗಿಲು ಮುಚ್ಚಿದ ಇನ್ಸ್ ಪೆಕ್ಟರ್ ಅಮಾನತು

ಚಾಮರಾಜನಗರ, ಜ.12- ಇಲ್ಲಿನ ಸಿಇಎನ್ ಠಾಣೆಗೆ ನ್ಯಾಯಾಧೀಶರು ಭೇಟಿ ನೀಡಿದ ವೇಳೆ ಬಾಗಿಲು ಮುಚ್ಚಿದ್ದರಿಂದ ಪೊಲೀಸ್ ಇನ್ಸ್‍ಪೆಕ್ಟರ್‍ರನ್ನು ಅಮಾನತು ಮಾಡಲಾಗಿದೆ. ಸಿಇಎನ್ (ಆರ್ಥಿಕ ಅಪರಾಧ ಮತ್ತು ಮಾದಕ ದ್ರವ್ಯ ತಡೆ) ಪೊಲೀಸ್ ಇನ್ಸ್‍ಪೆಕ್ಟರ್ ನಂಜಪ್ಪ ಅಮಾನತುಗೊಂಡವರು. ನ್ಯಾಯಾಧೀಶರಾದ ಗಣಪತಿ ಗುರುಸಿದ್ದಪ್ಪ ಬಾದಾಮಿ ಅವರು ಸಿಇಎನ್ ಪೊಲೀಸ್ ಠಾಣೆಗೆ ಕಳೆದ 3ರಂದು ದಿಢೀರ್ ಭೇಟಿ ನೀಡಿದ್ದರು. ಈ ವೇಳೆ ಠಾಣೆಯಲ್ಲಿ ಯಾರೂ ಇಲ್ಲದೆ ಬಾಗಿಲು ಹಾಕಲಾಗಿತ್ತು. ಈ ರೀತಿ ಠಾಣೆಗೆ ಬಾಗಿಲು ಹಾಕಿದರೆ ಸಾರ್ವಜನಿಕರಿಗೆ ತೊಂದರೆಯಾಗುವುದಲ್ಲದೆ ದೂರು ಕೊಡಲು […]