ತಂದೆಯಾದ ಬಿಹಾರ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್

ಪಾಟ್ನಾ,ಮಾ.27-ಬಿಹಾರ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರು ತಂದೆಯಾಗಿದ್ದಾರೆ. ತಮ್ಮ ಚೊಚ್ಚಲ ಮಗುವನ್ನು ಎತ್ತಿಕೊಂಡು ಮುದ್ದಿಸುತ್ತಿರುವ ತಮ್ಮ ಭಾವಚಿತ್ರವನ್ನು ಅವರು ಟ್ವಿಟ್ ಮಾಡಿ ತಮ್ಮ ಸಂತಸ ಹಂಚಿಕೊಂಡಿದ್ದಾರೆ. ದೇವರು ಸಂತೋಷಪಟ್ಟು ಮಗಳ ರೂಪದಲ್ಲಿ ಉಡುಗೊರೆಯನ್ನು ಕಳುಹಿಸಿದ್ದಾರೆ ಎಂದು ಅವರು ಹೇಳಿಕೊಂಡಿದ್ದಾರೆ. ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಅವರ ಒಂಬತ್ತು ಮಕ್ಕಳಲ್ಲಿ ಕಿರಿಯರಾಗಿರುವ ತೇಜಸ್ವಿ ಯಾದವ್ ಅವರು ರಾಚೆಲ್ ಗೊಡಿನೋ ಅವರನ್ನು ವಿವಾಹವಾಗಿದ್ದಾರೆ. ಬಸವಣ್ಣ, ಕೆಂಪೇಗೌಡ ಪ್ರತಿಮೆ ಅನಾವರಣ ರಾಷ್ಟ್ರೀಯ ಜನತಾ ದಳ (ಆರ್‍ಜೆಡಿ) ನಾಯಕನ ಸಹೋದರಿ […]

ಡೈಪರ್‌ನಲ್ಲಿ ಅಡಗಿಸಿಟ್ಟು ಚಿನ್ನ ಕಳ್ಳ ಸಾಗಾಣಿಕೆ

ಮಂಗಳೂರು,ಮಾ.18- ವಿದೇಶದಿಂದ ಚಿನ್ನವನ್ನು ಕಳ್ಳ ಸಾಗಾಣಿಕೆ ಮೂಲಕ ತರಲು ನಾನಾ ರೀತಿಯ ಪ್ರಯತ್ನಗಳು ನಡೆಯುತ್ತಲೇ ಇವೆ. ಸುಮಾರು ಎರಡು ವರ್ಷದ ಮಗುವಿನ ಡೈಪರ್‌ನಲ್ಲಿ ಹಳದಿ ಲೋಹವನ್ನು ಅಡಗಿಸಿಟ್ಟು ಸಾಗಾಣಿಕೆ ಮಾಡುವಾಗ ವ್ಯಕ್ತಿಯೊಬ್ಬರು ಸಿಕ್ಕಿ ಬಿದಿದ್ದಾರೆ. ಮಂಗಳೂರು ಅಂತಾರಾಷ್ಟ್ರೀಯ ವಿಮಾನಕ್ಕೆ ಬಂದಿಳಿದ ಪುರುಷ ಪ್ರಯಾಣಿಕನೊಬ್ಬ ತನ್ನ 21 ತಿಂಗಳ ಮಗಳ ಡೈಪರ್‌ನಲ್ಲಿ ಚಿನ್ನವನ್ನು ಬಚ್ಚಿಟ್ಟು ಕಳ್ಳಸಾಗಣೆ ಮಾಡುತ್ತಿದ್ದಾಗ ಸಿಕ್ಕಿ ಬಿದ್ದಿದ್ದಾರೆ. ದ್ರಾವಕ ರೂಪದಲ್ಲಿದ್ದ ಚಿನ್ನವನ್ನು ಡೈಪರ್‍ನ ಮಡಿಕೆಗಳಲ್ಲಿ ಅಡಗಿಸಿಡಲಾಗಿತ್ತು. ಕಸ್ಟಮ್ಸ್ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ಪತ್ತೆಯಾಗಿದೆ ಎಂದು ಪ್ರಕಟಣೆಯಲ್ಲಿ […]

ಬೆಂಗಳೂರು : ಲಿಫ್ಟ್ ಗುಂಡಿಗೆ ಬಿದ್ದು 6 ವರ್ಷದ ಮಗು ಸಾವು

ಬೆಂಗಳೂರು,ಫೆ.25- ನಿರ್ಮಾಣ ಹಂತದ ಲಿಫ್ಟ್ ಗುಂಡಿಗೆ ಬಿದ್ದು ಆರು ವರ್ಷದ ಮಗು ಸಾವನ್ನಪ್ಪಿರುವ ಘಟನೆ ಕೆ.ಆರ್.ಮಾರ್ಕೆಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಲಿಫ್ಟ್ ಗುಂಡಿಗೆ ಬಲಿಯಾದ ಮಗುವನ್ನು ಮಹೇಶ್ವರಿ ಎಂದು ಗುರುತಿಸಲಾಗಿದೆ. ಸುಲ್ತಾನ್‍ಪೇಟೆಯಲ್ಲಿ ನಿರ್ಮಾಣವಾಗುತ್ತಿರುವ ಕಟ್ಟಡದ ಕಾಮಗಾರಿ ಮಾಡಲು ಬಂದಿದ್ದ ದಂಪತಿ ಪುತ್ರಿಯಾಗಿದ್ದ ಮಹೇಶ್ವರಿ ಗುಂಡಿಗೆ ಬಿದ್ದು ಸಾವನ್ನಪ್ಪಿದೆ. ಐದಂತಸ್ತಿನ ಕಟ್ಟಡ ಕಾಮಗಾರಿ ನಡೆಯುತ್ತಿದ್ದು, ಕಟ್ಟಡಕ್ಕೆ ಲಿಫ್ಟ್ ನಿರ್ಮಿಸಲು ಗುಂಡಿ ತೊಡಲಾಗಿತ್ತು. ನಿರ್ಮಾಣ ಹಂತದ ಕಾಮಗಾರಿ ನಡೆಯುತ್ತಿದ್ದ ಸ್ಥಳದಲ್ಲೇ ದಂಪತಿ ವಾಸಿಸುತ್ತಿದ್ದರು. ಸೋನಿಯಾ ಗಾಂಧಿ ರಾಜಕೀಯ ನಿವೃತ್ತಿ..? […]

ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ಕುಸಿದು ತಾಯಿ, ಮಗು ಸಾವು..!

ಬೆಂಗಳೂರು,ಜ.10- ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್‍ಗೆ ಅಳವಡಿಸಿದ್ದ ಕಬ್ಬಿಣದ ಸಲಾಕೆಗಳು ಏಕಾಏಕಿ ಚಲಿಸುತ್ತಿದ್ದ ಆ್ಯಕ್ಟಿವ್ ಹೋಂಡಾ ಸ್ಕೂಟರ್ ಮೇಲೆ ಉರುಳಿಬಿದ್ದ ಪರಿಣಾಮ ತಾಯಿ-ಮಗು ಸಾವಿಗೀಡಾಗಿರುವ ದಾರುಣ ಘಟನೆ ಗೋವಿಂದಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ಬೆಳಗ್ಗೆ ಸಂಭವಿಸಿದೆ. ಈ ದುರ್ಘಟನೆಯಲ್ಲಿ ಹೆಣ್ಣೂರಿನಲ್ಲಿರುವ ಡಿಎಕ್ಸ್ ಮ್ಯಾಕ್ಸ್ ಅಪಾರ್ಟ್‍ಮೆಂಟ್‍ನ ನಿವಾಸಿ ತೇಜಸ್ವಿನಿ(28) ಮತ್ತು ಎರಡೂವರೆ ವರ್ಷದ ಮಗು ವಿಹಾನ್ ಮೃತಪಟ್ಟಿದ್ದಾರೆ. ಪತಿ ಲೋಹಿತ್ ಕುಮಾರ್ ಮತ್ತು ಮತ್ತೊಂದು ಮಗು ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೂಲತಃ ಧಾರವಾಡ ಜಿಲ್ಲೆಯ […]

ಬಾಲ್ಯ ವಿವಾಹ ತಡೆಗೆ ಹೊಸ ಪ್ಲಾನ್

ಬೆಂಗಳೂರು,ಜ.4- ಕೊರೊನಾ ಸೋಂಕು ಕಾಣಿಸಿಕೊಂಡ ನಂತರ ರಾಜ್ಯದಲ್ಲಿ ಬಾಲ್ಯ ವಿವಾಹಗಳು ಹೆಚ್ಚಾಗುತ್ತಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಿರುವ ಮಹಿಳೆ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅನಿಷ್ಟ ಪದ್ಧತಿ ತಡೆಗೆ ಹೊಸ ಪ್ಲಾನ್ ರೂಪಿಸಿದೆ. ಜನ ಎಷ್ಟೆ ಬುದ್ದಿವಂತರಾದರೂ ತಮ್ಮ ಅನಿಷ್ಟ ಪದ್ದತಿಗಳನ್ನು ಬಿಡುತ್ತಿಲ್ಲ ಎನ್ನುವುದಕ್ಕೆ ರಾಜ್ಯದಲ್ಲಿ ಹೆಚ್ಚುತ್ತಿರುವ ಬಾಲ್ಯ ವಿವಾಹಗಳ ಸಂಖ್ಯೆಗಳೆ ಸಾಕ್ಷಿಯಾಗಿದೆ. ಕೊರೊನಾ ಸಂದರ್ಭದಲ್ಲಿ ಶಾಲೆಗಳಿಗೂ ರಜೆ ಘೋಷಿಸಲಾಗಿದ್ದ ಕಾರಣ ಮದುವೆ ಖರ್ಚು ಉಳಿಸಬಹುದು ಎಂಬ ಲೆಕ್ಕಚಾರದಲ್ಲಿ ಲಾಕ್‍ಡೌನ್‍ನಲ್ಲಿ ಸಾವಿರಾರು ಬಾಲ್ಯ ವಿವಾಹಗಳು ನಡೆದು ಹೋಗಿದ್ದವು. ಇಂತಹ […]

ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಮಗು ಕೊಂದ ತಾಯಿ

ಮುಳಬಾಗಲು.ಡಿ.7- ಹೆತ್ತ ತಾಯಿಯೇ ತನ್ನ ಇಬ್ಬರು ಕರುಳ ಕುಡಿಗಳ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ನಂತರ ತಾನೂ ಆತ್ಮಹತ್ಯೆಗೆ ಯತ್ನಿಸಿರುವ ಹೃದಯ ವಿದ್ರಾವಕ ಘಟನೆ ಅಂಜನಾದ್ರಿ ಬೆಟ್ಟದ ತಪ್ಪಿಲಿನಲ್ಲಿ ಕಳೆದ ರಾತ್ರಿ ನಡೆದಿದ್ದು, ಒಂದು ಮಗು ಸಾವನ್ನಪ್ಪಿದೆ. ತಾಯಿ ಹಾಗೂ ಮತ್ತೊಂದು ಮಗು ಸುಟ್ಟ ಗಾಯಗಳಿಂದ ಸಾವು, ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.ಆಂಧ್ರ ಪ್ರದೇಶದ ರಾಮಸಮುದ್ರದ ನಿವಾಸಿ ಜ್ಯೋತಿ ಎಂಬ ಮಹಿಳೆ ಕಳೆದ ರಾತ್ರಿ ತನ್ನ ಇಬ್ಬರು ಮಕ್ಕಳ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ […]

ಮಕ್ಕಳ ಕಳ್ಳರೆಂದು ಶಂಕಿಸಿ ನಾಲ್ವರು ಸಾಧುಗಳ ಮೇಲೆ ಹಲ್ಲೆ

ಸಾಂಗ್ಲಿ, ಸೆ 14 – ಮಕ್ಕಳ ಕಳ್ಳರೆಂದು ಶಂಕಿಸಿ ನಾಲ್ವರು ಸಾಧುಗಳ ಮೇಲೆ ಗುಂಪೊಂದು ಹಲ್ಲೇ ನಡೆಸಿರುವ ಘಟನೆ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೇಯ ಜಟ್ ತೆಹಸಿಲನ ಪ್ರದೇಶದಲ್ಲಿ ನಡೆದಿದೆ. ಉತ್ತರ ಪ್ರದೇಶ ಮೂಲದ ನಾಲ್ವರು ಕಾರಿನಲ್ಲಿ ಕರ್ನಾಟಕದ ಬಿಜಾಪುರದಿಂದ ಪಂಢರಪುರದ ದೇವಸ್ಥಾನದ ಕಡೆಗೆ ಹೋಗುತ್ತಿದ್ದಾಗ ಲವಂಗಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಇದನ್ನೂ ಓದಿ : ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (14-09-2022) ಸೋಮವಾರ ಗ್ರಾಮದ ದೇವಸ್ಥಾನದಲ್ಲಿ ತಂಗಿದ್ದರು. ಮಂಗಳವಾರ ಪ್ರಯಾಣವನ್ನು ಪುನರಾರಂಭಿಸುವಾಗ, ಅವರು ಹುಡುಗನನ್ನು ದಾರಿ […]

ಹೆತ್ತ ಮಗುವನ್ನೇ ಮಹಡಿಯಿಂದ ಎಸೆದು ಕೊಂದು ಆತ್ಮಹತ್ಯೆಗೆ ಯತ್ನಿಸಿದ ತಾಯಿ..!

ಬೆಂಗಳೂರು,ಆ.5- ದಂತ ವೈದ್ಯೆಯೊಬ್ಬರು ತನ್ನ ಐದು ವರ್ಷದ ಕರುಳ ಕುಡಿಯನ್ನು ನಾಲ್ಕನೇ ಮಹಡಿ ಯಿಂದ ಎಸೆದು ಸಾಯಿಸಿ ತಾನೂ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಸಂಪಂಗಿ ರಾಮನಗರ ಪೊಲೀಸ್ ಠಾಣೆ ವ್ಯಾಪ್ತಿ ಯಲ್ಲಿ ನಿನ್ನೆ ಸಂಜೆ ನಡೆದಿದೆ. ಸಿಕೆಎಸ್ ಗಾರ್ಡನ್, ಚೆನ್ನಮ್ಮ ಶಾಲೆ ಹಿಂಭಾಗದ ಅದ್ವಿತ್ ಅಪಾರ್ಟ್‍ಮೆಂಟ್‍ನ 4ನೇ ಮಹಡಿಯಲ್ಲಿ ದಂತ ವೈದ್ಯೆ ಡಾ.ಸುಷ್ಮಾ ಹಾಗೂ ಸಾಫ್ಟ್‍ವೇರ್ ಎಂಜಿನಿಯರ್ ಕಿರಣ್ ದಂಪತಿ 5 ವರ್ಷದ ಧೃತಿ ಎಂಬ ಮಗಳೊಂದಿಗೆ ವಾಸವಾಗಿದ್ದಾರೆ. ಮಗು ಧೃತಿ ಬುದ್ದಿ ಮಾಂದ್ಯವಾಗಿದ್ದರಿಂದ ತಮ್ಮ ವೃತ್ತಿ […]

ಭಿಕ್ಷಾಟನೆ ತಡೆಯಲು ಯೋಜನೆ

ಬೆಂಗಳೂರು,ಜು.18- ಎಲ್ಲ ಇಲಾಖೆಗಳ ಸಹಯೋಗದಿಂದ ತಾಯಿ-ಮಗುವಿನ ಭಿಕ್ಷಾಟನೆ ತಡೆಯಲು ಯೋಜನೆ ರೂಪಿಸಲಾಗಿದೆ ಎಂದು ಸಮಾಜ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ತಿಳಿಸಿದರು. ವಿಕಾಸಸೌಧದಲ್ಲಿ ನಡೆದ ಭಿಕ್ಷಾಟನೆಯಲ್ಲಿ ತೊಡಗಿರುವ ಮಕ್ಕಳು-ತಾಯಂದಿರನ್ನು ರಕ್ಷಿಸಲು ಮತ್ತು ಭಿಕ್ಷಾಟನೆ ನಿಯಂತ್ರಿಸುವ ಸಂಬಂಧ ನಡೆದ ಸಭೆಯ ನಂತರ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಬೆಂಗಳೂರಿನಲ್ಲಿ 720 ಮಕ್ಕಳು ಭಿಕ್ಷಾಟನೆಯಲ್ಲಿ ತೊಡಗಿದ್ದಾರೆ ಎಂದು ಕಾನೂನು ಸೇವಾ ಪ್ರಾಧಿಕಾರ ಮಾಹಿತಿ ನೀಡಿದೆ. ಈ ಹಿನ್ನಲೆಯಲ್ಲಿ ಮಕ್ಕಳ-ತಾಯಿಂದಿರ ಭಿಕ್ಷಾಟನೆ ತಡೆಯಲು ಬೆಂಗಳೂರಿನಲ್ಲಿ ಯೋಜನೆ ರೂಪಿಸಲಾಗಿದೆ. ಬೆಂಗಳೂರಿನ 8 ವಿಭಾಗಗಳಲ್ಲಿ […]