ಜೋಡೊ ಯಾತ್ರೆ ಬೆಂಬಲಿಸಲು ಚಳಿಯಲ್ಲೂ ಶರ್ಟ್ ತೆಗೆದು ನೃತ್ಯ

ನವದೆಹಲಿ,ಜ.8- ರಾಹುಲ್‍ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಹರಿಯಾಣ ತಲುಪಿದ್ದು, ದಟ್ಟ ಮಂಜಿನ ನಡುವೆಯೂ ಕಾರ್ಯಕರ್ತರು ಶರ್ಟ್ ತೆಗೆದು ನೃತ್ಯ ಮಾಡುತ್ತಿರುವುದು ಯಾತ್ರೆಗೆ ಮತ್ತಷ್ಟು ಹುರುಪು ತರಿಸಿದೆ.ದಟ್ಟ ಮಂಜಿನ ನಡುವೆಯೂ ಕಾರ್ಯಕರ್ತರು ಶರ್ಟ್ ತೆಗೆದು ಬಸ್ ಮೇಲೆ ನೃತ್ಯ ಪ್ರದರ್ಶನ ಮಾಡುತ್ತಿರುವ ದೃಶ್ಯ ಇದೀಗ ಎಲ್ಲೆಡೆ ವೈರಲ್ ಆಗಿದೆ. ಯಾತ್ರೆಯ ಬ್ಯಾನರ್ ಹಿಡಿದುಕೊಂಡಿರುವ ಯುವಕರ ಗುಂಪೊಂದು ಗುಲಾಬಿ ಪೇಟ ಧರಿಸಿ ಬಸ್‍ಗಳ ಮೇಲೆ ಶರ್ಟ್‍ರಹಿತರಾಗಿ ನೃತ್ಯ ಮಾಡುತ್ತ ಯಾತ್ರೆಯನ್ನು ಹುರಿದುಂಬಿಸುತ್ತಿದ್ದಾರೆ. ಮೈ ಕೊರೆಯುವ ಚಳಿಯಲ್ಲೂ ಇಂತಹ ಸಾಹಸ […]

1.9 ಡಿಗ್ರಿ ಸೆಲ್ಸಿಯಸ್‌ಗೆ ಕುಸಿದ ತಾಪಮಾನ, ಚಳಿಗೆ ದೆಹಲಿ ಗಢ ಗಢ

ನವದೆಹಲಿ,ಜ.8- ಚಳಿಗೆ ರಾಷ್ಟ್ರ ರಾಜಧಾನಿ ತತ್ತರಿಸಿ ಹೋಗಿದೆ. ದೆಹಲಿಯ ಸಫ್ದರ್‍ಜಂಗ್‍ನಲ್ಲಿ ಕನಿಷ್ಠ ತಾಪಮಾನ 1.9 ಡಿಗ್ರಿ ಸೆಲ್ಸಿಯಸ್ ಕುಸಿದಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಏತನ್ಮಧ್ಯೆ, ದೆಹಲಿಯ ಹಲವು ನಗರಗಳಲ್ಲಿ ಕನಿಷ್ಠ 2.6 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದರೆ, ಲೋ ರಸ್ತೆಯಲ್ಲಿ 2.8 ಡಿಗ್ರಿ ಸೆಲ್ಸಿಯಸ್ ಮತ್ತು ಪಾಲಂನಲ್ಲಿ 5.2 ಡಿಗ್ರಿ ಸೆಲ್ಸಿಯಸ್ ಇದೆ ಎಂದು ವರದಿಯಾಗಿದೆ. ಇಂದು ಬೆಳಗ್ಗೆ ದೆಹಲಿ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ದಟ್ಟವಾದ ಮಂಜು ಆವರಿಸಿರುವುದರಿಂದ ಜನ ತೀವ್ರ ಚಳಿಯಿಂದ […]

ಚಳಿಗೆ ಉತ್ತರ ಭಾರತ ಗಢ ಗಢ

ನವದೆಹಲಿ,ಡಿ.26- ರಾಷ್ಟ್ರ ರಾಜಧಾನಿಗೆ ಹಿಡಿದಿದ್ದ ಥಂಡಿ ಇದೀಗ ಉತ್ತರ ಭಾರತದ ಹಲವಾರು ರಾಜ್ಯಗಳಿಗೂ ವಿಸ್ತರಿಸಿದೆ. ಇದರ ಪರಿಣಾಮ ಪಂಜಾಬ್, ಹರಿಯಾಣ ಸೇರಿದಂತೆ ಉತ್ತರ ಭಾರತದ ಹಲವಾರು ಸ್ಥಳಗಳಲ್ಲಿ ಶೀತಗಾಳಿ ಬೀಸುತ್ತಿರುವುದರಿಂದ ಜನ ಚಳಿಗೆ ತತ್ತರಿಸಿ ಹೋಗಿದ್ದಾರೆ. ದೆಹಲಿ, ಪಂಜಾಬ್, ಹರಿಯಾಣ ಮತ್ತಿತರ ರಾಜ್ಯಗಳ ಹಲವಾರು ಪ್ರದೇಶಗಳಲ್ಲಿ ತಾಪಮಾನ 4 ಡಿಗ್ರಿ ಸೆಲ್ಸಿಯಷ್‍ಗೆ ಕುಸಿಯುವ ಸಾಧ್ಯತೆಗಳಿವೆ. ಮುಂದಿನ 48 ಗಂಟೆಗಳಲ್ಲಿ ದೆಹಲಿಯಲ್ಲಿ ತಾಪಮಾನವು 4 ಡಿಗ್ರಿ ಸೆಲ್ಸಿಯಸ್‍ಗೆ ಇಳಿಯಬಹುದು ಎಂದು ಭಾರತೀಯ ಹವಾಮಾನ ಇಲಾಖೆ ಟ್ವೀಟ್ ಮಾಡಿದೆ, ಪಂಜಾಬ್‍ನ […]