ಕೋಮಾದಲ್ಲಿದ್ದಾನೆ ಎಂದು 18 ತಿಂಗಳಿನಿಂದ ಶವವನ್ನು ಮನೆಯಲ್ಲಿರಿಸಿಕೊಂಡಿದ್ದರು!

ಕಾನ್ಪುರ ,ಸೆ.24-ಕಳೆದ ವರ್ಷ ಮೃತಪಟ್ಟ ಆದಾಯ ತೆರಿಗೆ ಇಲಾಖೆ ನೌಕರ ಕೋಮಾದಲ್ಲಿದ್ದಾನೆ ಎಂದು ಭಾವಿಸಿ ಅವನ ಕುಟುಂಬ ವರ್ಗದವರು, ಸುಮಾರು 18 ತಿಂಗಳ ಕಾಲ ಆತನ ಶವವನ್ನು ಮನೆಯಲ್ಲಿಯೇ ಇರಿಸಿಕೊಂಡಿದ್ದ ವಿಲಕ್ಷಣ ಘಟನೆ ಮಧ್ಯಪ್ರದೇಶದ ಕಣ್ಣೂರಿನಲ್ಲಿ ನಡೆದಿದೆ. ಸತ್ತ ಪತಿಯ ಶವ ಕೊಳೆಯಬಾರದು ಎಂದು ಆತನ ಪತ್ನಿ ಪ್ರತಿದಿನ ಶವದ ಮೇಲೆ ಗಂಗಾಜಲ ಎರಚುತ್ತ ಇಂದಲ್ಲ, ನಾಳೆ ನನ್ನ ಪತಿ ಮೇಲೇಳುತ್ತಾನೆ ಎಂದು ಭಾವಿಸಿಕೊಂಡು ಈ ರೀತಿ ನಡೆದುಕೊಳ್ಳುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. 2021 ರ ಏಪ್ರಿಲ್ […]