ಏಕಾಏಕಿ ಹೊತ್ತಿ ಉರಿದ ಬಿಎಂಟಿಸಿ ಬಸ್, ನಿರ್ವಾಹಕ ಸಜೀವ ದಹನ

ಬೆಂಗಳೂರು, ಮಾ.10- ಏಕಾಏಕಿ ಬಿಎಂಟಿಸಿ ಬಸ್‍ನಲ್ಲಿ ಬೆಂಕಿ ಕಾಣಿಸಿಕೊಂಡು ಕ್ಷಣಾರ್ಧದಲ್ಲಿ ಬಸ್ ಪೂರ್ತಿ ಬೆಂಕಿ ಆವರಿಸಿದ್ದರಿಂದ ಒಳಗೆ ಮಲಗಿದ್ದ ನಿರ್ವಾಹಕ ರೊಬ್ಬರು ಸಜೀವ ದಹನವಾಗಿರುವ ಹೃದಯ ವಿದ್ರಾವಕ ಘಟನೆ ಇಂದು ಮುಂಜಾನೆ ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದೆ. ಮೂಲತಃ ಬಳ್ಳಾರಿಯ ಮುತ್ತಯ್ಯಸ್ವಾಮಿ(45)ಮೃತಪಟ್ಟಿರುವ ಬಿಎಂಟಿಸಿ ನಿರ್ವಾಹಕರು. ರಾತ್ರಿ 10.30ರ ಸುಮಾರಿಗೆ ಎಂದಿನಂತೆ ಕರ್ತವ್ಯ ಮುಗಿಸಿ ಸುಮನಹಳ್ಳಿ ಡಿಪೆಫೋಗೆ ಸೇರಿದ ಬಿಎಂಟಿಸಿ ಬಸ್‍ನ್ನು ಚಾಲಕ ಪ್ರಕಾಶ್ ಅವರು ಲಿಂಗೀರನಹಳ್ಳಿ ಡಿ ಗ್ರೂಪ್ ಲೇಔಟ್ ಬಸ್ ನಿಲ್ದಾಣದಲ್ಲಿ ನಿಲ್ಲಿಸಿ ನಿಲ್ದಾಣದಲ್ಲಿರುವ […]
ರಿಷಭ್‍ಪಂತ್ ಜೀವ ರಕ್ಷಿಸಿದ ಚಾಲಕ ಸುಶೀಲ್‍ಮಾನ್‍ಗೆ ಸನ್ಮಾನ

ನವದೆಹಲಿ, ಜ.1- ಖ್ಯಾತ ಕ್ರಿಕೆಟಿಗ ರಿಷಭ್ ಪಂತ್‍ರ ಜೀವ ಉಳಿಸಲು ಸಹಕರಿಸಿದ ಬಸ್ ಚಾಲಕ ಸುಶೀಲ್ ಮಾನ್‍ರನ್ನು ಗೌರವಿಸಲು ಉತ್ತರ ಖಂಡ್ ಸರ್ಕಾರವು ತೀರ್ಮಾನಿಸಿದೆ. ಜನವರಿ 26 ರಂದು ನಡೆಯಲಿರುವ ಗಣರಾಜ್ಯೋತ್ಸವದ ಅಂಗವಾಗಿ ನಡೆಯಲಿರುವ ಸಮಾರಂಭದಲ್ಲಿ ಉತ್ತರ ಖಂಡ್‍ನ ಮುಖ್ಯಮಂತ್ರಿ ಶ್ರೀ ಪುಷ್ಕರ್ ಧಾಮಿ ಅವರು ಪದಕ ನೀಡಿ ಸನ್ಮಾನಿಸಲಿದ್ದಾರೆ ಎಂದು ಸರ್ಕಾರಿ ಮೂಲಗಳು ಸ್ಪಷ್ಟಪಡಿಸಿವೆ. ಕಳೆದ ಶುಕ್ರವಾರ ಕ್ರಿಕೆಟಿಗ ರಿಷಭ್ ಪಂತ್ ಚಲಿಸುತ್ತಿದ್ದ ಐಷಾರಾಮಿ ಕಾರು ನವದೆಹಲಿ- ಡೆಹ್ರಾಡೂನ್ ರಾಷ್ಟ್ರೀಯ ಹೆದ್ದಾರಿಯ ರೂರ್ಕಿ ಬಳಿ ಅಪಘಾತಕ್ಕೆ […]