ಬಕ್ರೀದ್ ಹಬ್ಬದ ವೇಳೆ ಗೋಹತ್ಯೆ ತಡೆಯಲಾಗಿದೆ : ಸಚಿವ ಪ್ರಭುಚೌಹಾಣ್

ಬೆಂಗಳೂರು, ಜು.11-ಬಕ್ರೀದ್ ಹಬ್ಬದ ಆಚರಣೆ ವೇಳೆ ಗೋ ಹತ್ಯೆ ತಡೆಯಲಾಗಿದೆ ಎಂದು ಪಶು ಸಂಗೋಪನಾ ಸಚಿವ ಪ್ರಭುಚೌಹಾಣ್ ತಿಳಿಸಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಲವು ಜಿಲ್ಲೆಗಳಲ್ಲಿ ಗೋ ಶಾಲೆಗೆ ಹಸುಗಳನ್ನು ಕಳುಹಿಸಿ ರಕ್ಷಣೆ ಮಾಡಲಾಗಿದೆ. 15ದಿನಗಳಿಂದ ರಾಜ್ಯ ಪ್ರವಾಸ ಮಾಡಿ, ಚೆಕ್ ಪೋಸ್ಟ್ ಕೂಡ ಹಾಕಲಾಗಿದೆ. ಗೋಹತ್ಯಾ ನಿಷೇಧ ಕಾಯ್ದೆ ಜಾರಿಗೆ ಬಂದ ನಂತರ 25 ಸಾವಿರ ಗೋವುಗಳ ರಕ್ಷಣೆ ಮಾಡಲಾಗಿದೆ ಎಂದರು. ಗುಲ್ಬರ್ಗದಲ್ಲಿ 25 ಕೇಸ್ ಗಳಾಗಿದೆ. ಕೋಲಾರದಲ್ಲಿ 6ಹಸುಗಳನ್ನ ರಕ್ಷಣೆ ಮಾಡಲಾಗಿದೆ. ಕಳೆದ ಬಾರಿಗೆ ಹೋಲಿಸಿದರೆ, […]