ದೇವರ ಉತ್ಸವದಲ್ಲಿ ಕ್ರೇನ್ ಮಗುಚಿಬಿದ್ದು ನಾಲ್ವರ ಸಾವು

ಚೆನ್ನೈ,ಜ.23-ದೇವರ ಉತ್ಸವದಲ್ಲಿ ಸಂಭವಿಸಿದ ಕ್ರೇನ್ ಅವಘಡದಲ್ಲಿ 4 ಮಂದಿ ಮೃತಪಟ್ಟು, ಇತರ ಐದು ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ತಮಿಳುನಾಡಿನಲ್ಲಿ ಸಂಭವಿಸಿದೆ. ರಾಣಿಪೇಟೆಯ ದ್ರೌಪದಿ ದೇವಾಲಯದಲ್ಲಿ ನಡೆಯುತ್ತಿದ್ದ ಉತ್ಸವದ ಸಂದರ್ಭದಲ್ಲಿ ಕ್ರೇನ್ ಮಗುಚಿಬಿದ್ದು ಈ ದುರ್ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಭಕ್ತರು ನೀಡುವ ಮಾಲೆ ಸ್ವೀಕರಿಸಲು ಕ್ರೇನ್‍ನಲ್ಲಿ ಎಂಟು ಮಂದಿ ಇದ್ದರು. ಕ್ರೇನ್‍ನಲ್ಲಿ ದೇವರು ಮತ್ತು ದೇವಿಯರ ವಿಗ್ರಹಗಳ ಮೆರವಣಿಗೆ ಸಾಗಿಸಲಾಗುತಿತ್ತು. ಈ ಸಂದರ್ಭದಲ್ಲಿ ಕ್ರೇನ್ ಏಕಾಏಕಿ ಅಪಘಾತಕ್ಕೀಡಾಯಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಪೊಂಗಲ್ ನಂತರ […]