ಪೆನಾಲ್ಟಿ ಶೂಟೌಟ್ ಗೆದ್ದು ಸೆಮಿಫೈನಲ್‍ಗೆ ಪ್ರವೇಶಿಸಿದ ಮೆಸ್ಸಿ ಪಡೆ

ದೋಹಾ, ಡಿ. 10- ಕತಾರ್‍ ಫಿಫಾ ಫುಟ್ಬಾಲ್ ಟೂರ್ನಿಯಲ್ಲಿ ಕಳೆದ ತಡರಾತ್ರಿ ಲೂಸಿಯಲ್ ಕ್ರೀಡಾಂಗಣದಲ್ಲಿ ನೆದರ್ಲೆಂಡ್ಸ್ ವಿರುದ್ಧ ನಡೆದ ರೋಚಕ ಪಂದ್ಯದಲ್ಲಿ ಮೆಸ್ಸಿ ಸಾರಥ್ಯದ ಅರ್ಜೆಂಟೀನಾ ತಂಡವು ಶೂಟೌಟ್ ಲಾಭ ಪಡೆದು ಸೆಮಿಫೈನಲ್ ಪ್ರವೇಶಿಸಿದೆ. ಪಂದ್ಯದ ಆರಂಭಿಕ ಕ್ಷಣದಿಂದಲೂ ಎರಡು ತಂಡಗಳ ಆಟಗಾರರು ರೋಚಕ ಪ್ರದರ್ಶನ ನೀಡಿದ್ದರಿಂದ ಪಂದ್ಯ ಮುಗಿದ ಬಳಿಕ ನೆದರ್ಲೆಂಡ್ಸ್ ಹಾಗೂ ಅರ್ಜೆಂಟೀನಾ ತಂಡವು 2-2 ಗೋಲುಗಳಿಂದ ಸಮಬಲ ಸಾಧಿಸಿತ್ತು.ಪಂದ್ಯದ ಫಲಿತಾಂಶವನ್ನು ನಿರ್ಧರಿಸಲು ಪೆನಾಲ್ಟಿ ಶೂಟೌಟ್‍ನ ಮೊರೆ ಹೋಗಬೇಕಾಯಿತು. ಪಂದ್ಯದ ಆರಂಭದ 10 ನಿಮಿಷಗಳಲ್ಲೇ […]