ದಲಿತ ಕುಟುಂಬಕ್ಕೆ ಸೇರಿದ 10 ಎಕರೆ ಜಮೀನು ಕಬಳಿಕೆ

ಬೆಂಗಳೂರು, ಮಾ, 18;ದಲಿತ ಕುಟುಂಬಕ್ಕೆ ಸೇರಿದ ಹತ್ತಾರು ಕೋಟಿ ರೂಪಾಯಿ ಬೆಲೆಬಾಳುವ ಸುಮಾರು 10 ಎಕರೆ ಜಮೀನಿಗೂ ಮೇಲ್ಪಟ್ಟು ಆಸ್ತಿಯನ್ನು ಬೆಂಗಳೂರು ನಗರ ಮಾಜಿ ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಹಾಗೂ ಎಸ್.ಐ.ಆರ್.ಆರ್.ನ ಅಧ್ಯಕ್ಷ ಸಿ. ಮುನಿರಾಜು ಕಬಳಿಸಿದ್ದಾರೆ ಎಂದು ಬಹುಜನ ಸಮಾಜ ಪಾರ್ಟಿ ಇಂದು ಆಪಾದಿಸಿತು. ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ರಾಜ್ಯ ಸಂಯೋಜಿಕ ಮಾರಸಂದ್ರ ಮುನಿಯಪ್ಪ, ಮುನಿರಾಜು,ಅನ್ ಟಿ.ಎಂ. ಚಿನ್ನಪ್ಪ ಇವರು ದೊಡ್ಡ ತಿಮ್ಮಸಂದ್ರ ಗ್ರಾಮ, ಸರ್ಜಾಪುರ ಹೋಬಳಿ, ಆನೇಕಲ್ ತಾಲ್ಲೂಕು ಇಲ್ಲಿ ವಾಸವಾಗಿದ್ದು, ಇವರು ಸುಮಾರು […]

ಎ.ಜೆ ಸದಾಶಿವ ಆಯೋಗ ವರದಿ ಜಾರಿಗೆ ದಲಿತ ಸಂಘಟನೆಗಳ ಆಗ್ರಹ

ಬೆಂಗಳೂರು, ಮಾ.2- ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೆಲವು ಶಕ್ತಿಗಳ ಪ್ರಭಾವಕ್ಕೆ ಮಣಿದು ಒಳ ಮೀಸಲಾತಿಯ ಕುರಿತ ಎ.ಜೆ ಸದಾಶಿವ ಆಯೋಗ ವರದಿ ಜಾರಿ ಮಾಡಲು ಮೀನಾ ಮೇಷ ಎಣಿಸುತ್ತಿದ್ದು, ಮುಂದಿನ ದಿನಗಳಲ್ಲಿ ಅಧಿಕಾರ ಕಳೆದುಕೊಳ್ಳಲಿದ್ದಾರೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಹಾಗೂ ದಸಂಸ ಸಂಘಟನೆಗಳ ಒಕ್ಕೂಟ ಇಂದು ಎಚ್ಚರಿಸಿದವು. ರಾಜ್ಯ ಸರ್ಕಾರ ಈ ತಕ್ಷಣವೇ ಇದರ ಕುರಿತು ಗಮನ ಹರಿಸಬೇಕು ಎಂದು ಆರ್ ಪಿಐ ಹಾಗೂ ಡಿಎಸ್ಎಸ್ ರಾಜ್ಯಾಧ್ಯಕ್ಷ ಡಾ ಆರ್. ಮೋಹನ್ ರಾಜು, ಡಿಎಸ್ಎಸ್ […]

ಸಿದ್ದು ದಲಿತ ಪ್ರೀತಿ ನಾಟಕ: ಬಿಜೆಪಿ ಕಿಡಿ

ಬೆಂಗಳೂರು,ಡಿ.12- ದಲಿತರ ನಿರೀಕ್ಷೆಯನ್ನು ಹುಸಿಮಾಡಿ, ದಲಿತರ ಹೆಸರಲ್ಲಿ ಅಧಿಕಾರ ಅನುಭವಿಸಿದ್ದು ಮರೆತು ಹೋಯಿತಾ? ದಲಿತರಿಗೆ ಸಿದ್ದರಾಮಯ್ಯ ಅವರಿಂದ ಯಾವತ್ತಿಗೂ ಸಿಗುವುದು ಕುತಂತ್ರದ ಒಳ ಏಟು ಮಾತ್ರ ಎಂದು ಬಿಜೆಪಿ ಕಿಡಿಕಾರಿದೆ. ಸರಣಿ ಟ್ವೀಟ್‍ಗಳ ಮೂಲಕ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ, ದಲಿತರ ನಿರೀಕ್ಷೆಯನ್ನು ಹುಸಿ ಮಾಡಿ, ದಲಿತರ ಹೆಸರಲ್ಲಿ ಅಧಿಕಾರ ಅನುಭವಿಸಿದ್ದು ಮರೆತು ಹೋಯಿತಾ ಎಂದು ಪ್ರಶ್ನಿಸಿದೆ. ಸಿದ್ದರಾಮಯ್ಯ ಅವರು ಐದು ವರ್ಷ ಅಧಿಕಾರದಲ್ಲಿದ್ದಾಗಲೇ ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ ಬಂದಿದೆ. ಆಗ […]

ಜೆಡಿಎಸ್ ಅಧಿಕಾರಕ್ಕೆ ಬಂದರೆ ದಲಿತರನ್ನು ಸಿಎಂ ಮಾಡ್ತೀವಿ : ಹೆಚ್ಡಿಕೆ

ಬೆಂಗಳೂರು, ಡಿ.2- ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದು ಅವಕಾಶ ಒದಗಿ ಬಂದರೆ ದಲಿತರನ್ನು ಮುಖ್ಯಮಂತ್ರಿ ಮಾಡಲು ಸಿದ್ಧರಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಈಗಾಗಲೇ ಜೆಡಿಎಸ್ ಸ್ವಂತ ಶಕ್ತಿಯ ಮೇಲೆ ಅಧಿಕಾರಕ್ಕೆ ಬಂದರೆ ಮುಸ್ಲೀಂರನ್ನು ಮತ್ತು ಮಹಿಳೆಯರನ್ನುಉಪ ಮುಖ್ಯಮಂತ್ರಿ ಮಾಡುವುದಾಗಿ ಘೋಷಿಸಿದ್ದರು. ಪಂಚರತ್ನ ರಥಯಾತ್ರೆಯ ಪ್ರವಾಸದಲ್ಲಿರುವ ಕುಮಾರಸ್ವಾಮಿ ಈಗ ದಲಿತರನ್ನು ಮುಖ್ಯಮಂತ್ರಿ ಮಾಡಲು ತಯಾರಿರುವುದಾಗಿ ತುಮಕೂರಿನಲ್ಲಿ ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿರುವ ಅವರು, ದಲಿತರು ಮುಖ್ಯಮಂತ್ರಿ ಏಕಾಗಬಾರದು ಎಂದು ಪ್ರಶ್ನಿಸಿದ್ದಾರೆ. […]