ಅನ್ಯಾಯದ ವಿರುದ್ಧ ಉಪ್ಪಿನ ಸತ್ಯಾಗ್ರಹ ಪರಿಣಾಮಕಾರಿ ಹೋರಾಟ : ಪ್ರಧಾನಿ

ನವದೆಹಲಿ,ಮಾ.12- ಐತಿಹಾಸಿಕ ಉಪ್ಪಿನ ಸತ್ಯಾಗ್ರಹ ಅನ್ಯಾಯದ ವಿರುದ್ಧ ನೆನಪಿನಲ್ಲಿ ಉಳಿಯುವ ಪರಿಣಾಮಕಾರಿ ಹೋರಾಟವಾಗಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಪ್ರತಿಪಾದಿಸಿದ್ದಾರೆ. ಮಾರ್ಚ್ 12ರಂದು ದಂಡಿ ಚಳವಳಿಯ ಮಾರ್ಚ್ ವಾರ್ಷಿಕೋತ್ಸವದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿ, ಚಳವಳಿಯಲ್ಲಿ ಭಾಗವಹಿಸಿದ್ದ ಮಹಾತ್ಮಾ ಗಾಂಧಿ ಸೇರಿದಂತೆ ಎಲ್ಲರಿಗೂ ಗೌರವ ಸಲ್ಲಿಸಿದ್ದಾರೆ. ದಂಡಿ ಚಳವಳಿ ಅನ್ಯಾಯದ ವಿರುದ್ಧ ನೆನಪಿನಲ್ಲಿ ಉಳಿಯುವ ದೃಢವಾದ ಹೋರಾಟವಾಗಿದೆ. ಉಪ್ಪಿನ ಸತ್ಯಾಗ್ರಹ ಎಂದು ಕರೆಯಲ್ಪಡುವ 1930 ರ ದಂಡಿ ಆಂದೋಲನ ಭಾರತದ ಸ್ವಾತಂತ್ರ್ಯ ಹೋರಾಟದ […]