ಸ್ಪೋಟಕ ತಯಾರಿಕೆ : ಎನ್‍ಐಎ ದಾಳಿ, 2 ಶಂಕಿತರ ಬಂಧನ

ಸಿಯೋನಿ,( ಮಧ್ಯಪ್ರದೇಶ)ಮಾ.12-ಸ್ಪೋಟಕ ತಯಾರಿಕೆ ಶಂಕೆಯ ಮೇಲೆ ಸಿಯೋನಿಯ ಮನೆಯೊಂದರೆ ಮೇಲೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‍ಐಎ) ಮತ್ತು ಸ್ಥಳೀಯ ಪೊಲೀಸರು ದಾಳಿ ನಡೆಸಿ ಇಬ್ಬರನ್ನುವಶಕ್ಕೆ ಪಡೆದಿದ್ದಾರೆ. ಕೆಲವು ಅಸುರಕ್ಷಿತ ವಸ್ತು ಮತ್ತು ಎಲೆಕ್ಟ್ರಾನಿಕ್ ಸಾಧನಗಳನ್ನು ವಶಪಡಿಸಿಕೊಳ್ಳಲಾಗಿದೆ ಅವರನ್ನು ವಿಚಾರಣೆಗಾಗಿ ಜಬಲ್ಪುರಕ್ಕೆ ಕರೆದೊಯ್ಯಲಾಗಿದೆ ಎಂದು ಸಿಯೋನಿ ಪೊಲೀಸ್ ವರಿಷ್ಠಾಕಾರಿ ರಾಮ್ಜಿ ಶ್ರೀವಾಸ್ತವ ತಿಳಿಸಿದ್ದಾರೆ. ಎನ್‍ಐಎ ವಶದಲ್ಲಿರುವ ಅಜೀಜ್ ಸಲಿ (40) ಮತ್ತು ಶೋಬ್ ಖಾನ್ (27)ಎಲ್ಲಿಂದ ಬಂದಿದ್ದರು ಮತ್ತು ಇವರ ಉದೇಶದ ಬಗ್ಗೆ ತನಿಖೆ ನಡೆಯುತ್ತಿದೆ.ಒಬ್ಬ ಪರಾರಿಯಾಗಿದ್ದು ಆತನ […]

8 ವರ್ಷದ ವಿದ್ಯಾರ್ಥಿ ಮೇಲೆ ಲೈಂಗಿಕ ದೌರ್ಜನ್ಯ, ಸಿಕ್ಕಿಬಿದ್ದ ಶಿಕ್ಷಕ

ನವದೆಹಲಿ,ಫೆ.9- ಮೂರನೆ ತರಗತಿ ಓದುತ್ತಿದ್ದ ಎಂಟು ವರ್ಷದ ವಿದ್ಯಾರ್ಥಿನಿಗೆ ಶಾಲಾ ಆವರಣದಲ್ಲೇ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಸರ್ಕಾರಿ ಶಾಲೆಯ ಶಿಕ್ಷಕರೊಬ್ಬರನ್ನು ಪೂರ್ವ ದೆಹಲಿ ಪೊಲೀಸರು ಬಂಧಿಸಿದ್ದಾರೆ. ಪೂರ್ವ ದೆಹಲಿಯ ನ್ಯೂ ಅಶೋಕ್‍ನಗರದ ಸರ್ಕಾರಿ ಶಾಲೆಯಲ್ಲಿ ಕ್ರೀಡಾ ಶಿಕ್ಷಕನಾಗಿರುವ 40 ವರ್ಷದ ವ್ಯಕ್ತಿಯನ್ನು ಬಂಧಿಸಿ ತೀವ್ರ ವಿಚಾರಣೆಗೊಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕೆಲ ದಿನಗಳ ಹಿಂದೆ ಎಂಟು ವರ್ಷದ ವಿದ್ಯಾರ್ಥಿನಿಗೆ ಚಾಕಲೇಟ್ ಆಮಿಷ ಒಡ್ಡಿದ ಶಿಕ್ಷಕ ಬಾಲಕಿಯನ್ನು ಏಕಾಂತ ಸ್ಥಳಕ್ಕೆ ಕರೆದೊಯ್ದು ಲೈಂಗಿಕ ದೌರ್ಜನ್ಯವೆಸಗಿದ್ದ ಎನ್ನಲಾಗಿದೆ. […]

ಮೂವರು ಶಂಕಿತ ಪಿಎಫ್‍ಐ ಸದಸ್ಯರ ಬಂಧನ

ಪಾಟ್ನಾ,ಫೆ.4- ನಿಷೇಧಿತ ಸಂಘಟನೆ ಫಾಪುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‍ಐ)ನ ಮೂವರು ಶಂಕಿತ ಸದಸ್ಯರನ್ನು ರಾಷ್ಟ್ರೀಯ ತನಿಖಾ ದಳ ಮತ್ತು ಸ್ಥಳೀಯ ಪೊಲೀಸರು ಜಂಟಿ ಕಾರ್ಯಾರಣೆ ಮೂಲಕ ಬಂಧಿಸಿದ್ದಾರೆ. ಪಶ್ಚಿಮ ಚಂಪರಣ್ ಜಿಲ್ಲೆಯ ಚಾಕಿಯಾ ಉಪವಿಭಾಗದಲ್ಲಿ ಶನಿವಾರ ನಡೆದ ಕಾರ್ಯಾಚರಣೆಯಲ್ಲಿ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಕೇಂದ್ರ ಮತ್ತು ರಾಜ್ಯ ತನಿಖಾ ಸಂಸ್ಥೆಗಳು ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿವೆ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಜೆ.ಎಸ್.ಗ್ವಾಂಕರ್ ತಿಳಿಸಿದ್ದಾರೆ. ಸರ್ಕಾರಿ ಅಧಿಕಾರಿಗಳು ಆಸ್ತಿ ದಾಖಲೆ ಸಲ್ಲಿಸಲು ಮಾ. 31 […]

ಗಾಯಕ ಸಿಧು ಮೂಸೆವಾಲಾ ಹಂತಕ ಗೋಲ್ಡಿ ಅಮೆರಿಕಾದಲ್ಲಿ ಸೆರೆ..!

ನವದೆಹಲಿ,ನ.2- ಪಂಜಾಬಿ ಗಾಯಕ ಸಿಧು ಮೂಸೆ ವಾಲಾ ಹತ್ಯೆಯ ಪ್ರಮುಖ ಸಂಚುಕೋರರಲ್ಲಿ ಒಬ್ಬನಾದ ಗ್ಯಾಂಗ್‍ಸ್ಟರ್ ಗೋಲ್ಡಿ ಬ್ರಾರ್‍ನನ್ನು ಅಮೆರಿಕಾದಲ್ಲಿ ಬಂಧಿಸಲಾಗಿದೆ ಎಂದು ವರದಿಯಾಗಿದೆ. ಗ್ಯಾಂಗ್‍ಸ್ಟರ್ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‍ನ ಸದಸ್ಯ ಗೋಲ್ಡಿ ಬ್ರಾರ್ ಇತ್ತೀಚೆಗೆ ಕೆನಡಾದಿಂದ ಅಮೆರಿಕಾಕ್ಕೆ ಬಂದು ನೆಲೆಸಿದ್ದು, ಕೆಲ ದಿನಗಳ ಹಿಂದಷ್ಟೆ ಆತನನ್ನು ಕ್ಯಾಲಿಫೋರ್ನಿಯಾ ಪೊಲೀಸರು ಬಂಧಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದರೆ, ಗೋಲ್ಡಿಬ್ರಾರ್ ಬಂಧನ ಕುರಿತಂತೆ ಅಮೆರಿಕಾದಿಂದ ಭಾರತಕ್ಕೆ ಯಾವುದೇ ಅಧಿಕೃತ ಮಾಹಿತಿ ರವಾನೆಯಾಗಿಲ್ಲ ಎಂದು ಮೂಲಗಳು ವಿವರಿಸಿವೆ. ಮೂಸೆವಾಲಾ ಹತ್ಯೆಯ ಜವಾಬ್ದಾರಿಯನ್ನು […]