ಮೂವರು ದರೋಡೆಕೋರರ ಸೆರೆ

ದೇವನಹಳ್ಳಿ, ಜು.15- ಕಾರಿನಲ್ಲಿ ಬಂದು ವ್ಯಕ್ತಿಯ ಕಾಲಿಗೆ ಹೊಡೆದು 10 ಗ್ರಾಂ ಸರ ಕಿತ್ತುಕೊಂಡು ಎಟಿಎಂನಿಂದ 15 ಸಾವಿರ ಹಣ ಡ್ರಾಮಾಡಿಸಿಕೊಂಡು ಪರಾರಿಯಾಗಿದ್ದ ಮೂವರನ್ನು ದೇವನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿಯ ಅನಿಲ್‍ಕುಮಾರ್ ಅಲಿಯಾಸ್ ದೇವು (22), ಸುಬ್ರಹ್ಮಣಿ ಅಲಿಯಾಸ್ ಸುಟ್ಟ (19) ಮತ್ತು ಪವನ್‍ಕುಮಾರ್ (24) ಬಂಧಿತರು. ಆರೋಪಿಗಳಿಂದ 10 ಗ್ರಾಂ ಸರ, ಮಾರುತಿ 800 ಕಾರು ಹಾಗೂ ಕಬ್ಬಿಣದ ರಾಡನ್ನು ವಶಪಡಿಸಿಕೊಂಡಿದ್ದಾರೆ.ಜುಲೈ 8ರಂದು ದೇವನಹಳ್ಳಿ ಬೈಪಾಸ್‍ನಲ್ಲಿರುವ ರಿಗಾನ್ ಹೋಟೆಲ್‍ನಲ್ಲಿ ಪಿರ್ಯಾದುದಾರರು […]