ಮಿನಿ ವ್ಯಾನ್ ಮಗುಚಿ ಬಿದ್ದು ನಾಲ್ವರು ಅಯ್ಯಪ್ಪ ಭಕ್ತರ ಸಾವು

ಗುಂಟೂರು (ಆಂಧ್ರಪ್ರದೇಶ), ಡಿ.5- ಮಂಜು ತಂದ ಅವಾಂತರದಿಂದಾಗಿ ಮಿನಿ ವ್ಯಾನ್ ಒಂದು ರಸ್ತೆಯಲ್ಲೇ ಉರುಳಿ ಬಿದ್ದ ಪರಿಣಾಮ ನಾಲ್ವರು ಅಯ್ಯಪ್ಪ ಸ್ವಾಮಿ ಭಕ್ತರು ಸಾವನ್ನಪ್ಪಿ, 16 ಮಂದಿ ಗಾಯಗೊಂಡಿರುವ ಘಟನೆ ಇಂದು ಬೆಳಗ್ಗೆ ಗುಂಟೂರು ಜಿಲ್ಲೆಯ ಜಂಪಾನಿ ಗ್ರಾಮದಲ್ಲಿ ಸಂಭವಿಸಿದೆ. ಕೇರಳದ ಶಬರಿ ಮಲೈ ಯಾತ್ರೆಗೆ ತೆರಳುವ ಸಲುವಾಗಿ ತೆನಾಲಿ ರೈಲು ನಿಲ್ದಾಣಕ್ಕೆ ಮಿನಿ ವ್ಯಾನ್‍ನಲ್ಲಿ ತೆರಳುತ್ತಿದ್ದ ವೇಳೆ ಜಂಪಾನಿ ಗ್ರಾಮದ ಬಳಿ ತಿರುವು ತೆಗೆದುಕೊಳ್ಳುವ ಭರದಲ್ಲಿ ಚಾಲಕನ ನಿಯಂತ್ರಣ ತಪ್ಪಿ ವ್ಯಾನ್ ರಸ್ತೆಯಲ್ಲೇ ಉರುಳಿಬಿದ್ದಿದೆ. ಮಿನಿ […]