ಸಂಸತ್ ಉಭಯ ಸದನಗಳಲ್ಲಿ ಅದಾನಿ ಕೋಲಾಹಲ

ನವದೆಹಲಿ,ಫೆ.1- ಬಜೆಟ್ ಅಧಿವೇಶನದ ಮೊದಲ ದಿನವಾದ ಇಂದು ಸಂಸತ್ ಕಲಾಪದಲ್ಲಿ ಅದಾನಿ ಗುಂಪಿನ ಹಗರಣ ಪ್ರಸ್ತಾಪವಾಗಿ ಭಾರಿ ಕೋಲಾಹಲ ಉಂಟಾಗಿದ್ದು, ಉಭಯ ಸದನಗಳ ಕಾರ್ಯಕಲಾಪ ಮಧ್ಯಾಹ್ನದವರೆಗೆ ಮುಂದೂಡಿಕೆಯಾಗಿದೆ. ವಿರೋಧ ಪಕ್ಷಗಳು ವಿವಿಧ ಸಮಸ್ಯೆಗಳನ್ನು ಮುಂದಿಟ್ಟು ಪ್ರತಿಭಟನೆ ನಡೆಸಿದ್ದರಿಂದಾಗಿ ಲೋಕಸಭೆಯಲ್ಲಿ ಇಂದು ಗದ್ದಲದ ವಾತವರಣ ನಿರ್ಮಾಣಗೊಂಡು ಕಲಾಪವನ್ನು ಮಧ್ಯಾಹ್ನ 2 ಗಂಟೆಯವರೆಗೆ ಮುಂದೂಡಲಾಯಿತು. ಕಲಾಪ ಆರಂಭವಾಗುತ್ತಿದ್ದಂತೆ ಸಭಾಧ್ಯಕ್ಷರಾದ ಓಂ ಬಿರ್ಲಾ ಜೋಂಬಿಯಾ ದಿಂದ ಆಗಮಿಸಿದ್ದ ನಿಯೋಗವನ್ನು ಸ್ವಾಗತಿಸಿದರು. ಬಳಿಕ ಪ್ರಶ್ನೋತ್ತರವನ್ನು ಕೈಗೆತ್ತಿಕೊಳ್ಳಲು ಮುಂದಾದರು. ಈ ಹಂತದಲ್ಲಿ ಪ್ರತಿಪಕ್ಷಗಳಾದ ಕಾಂಗ್ರೆಸ್, […]
ಅಸ್ಸಾಂ ವಿಧಾನಸಭೆಯಲ್ಲಿ ಎನ್‍ಕೌಂಟರ್ ಗಲಾಟೆ

ಗುವಾಹಟಿ,ಡಿ.24- ಅಸ್ಸಾಂನಲ್ಲಿ ನಡೆದ ಎನ್‍ಕೌಂಟರ್‍ಗಳ ಕುರಿತು ಸದನದಲ್ಲಿ ಕಾವೇರಿದ ಚರ್ಚೆಯಾಗಿ, ವಿಧಾನಸಭೆ ಕಲಾಪವನ್ನು ಒಂದು ಗಂಟೆಗಳ ಕಾಲ ಮುಂದೂಡಬೇಕಾದ ವಾತಾವರಣ ನಿರ್ಮಾಣವಾಯಿತು. ಗೃಹ ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಪರವಾಗಿ ಸಂಸದೀಯ ವ್ಯವಹಾರಗಳ ಸಚಿವ ಪಿಜೂಶ್ ಹಜಾರಿಕಾ ಪ್ರತಿಪಕ್ಷಗಳ ಪ್ರಸ್ತಾಪಕ್ಕೆ ಪ್ರತಿಕ್ರಿಯಿಸಿ, ರಾಜ್ಯದಲ್ಲಿ ಯಾವುದೇ ಎನ್‍ಕೌಂಟರ್ ನಡೆದಿಲ್ಲ. ಆದರೆ ಶಂಕಿತ ಅಪರಾಧಿಗಳು ತಪ್ಪಿಸಿಕೊಳ್ಳಲು ಪ್ರಯತ್ನಿಸುವಾಗ ಪೊಲೀಸ್ ಗುಂಡಿನ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ ಮತ್ತು ಕೆಲವರ ಗಾಯಗೊಂಡಿದ್ದಾರೆ ಎಂದು ಹೇಳಿದರು. ಈ ಹೇಳಿಕೆಯನ್ನು ಒಪ್ಪದ ಪಕ್ಷೇತರ ಶಾಸಕ […]
ಉತ್ತರ ಕರ್ನಾಟಕದ ಸಮಸ್ಯೆಗಳ ಕುರಿತು ಚರ್ಚೆಗೆ 2 ದಿನ ಮೀಸಲು

ಬೆಳಗಾವಿ. ಡಿ.21- ಉತ್ತರ ಕರ್ನಾಟಕ ಜನರು ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳ ಕುರಿತು ಚರ್ಚಿಸಿ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕುಂದಾನಗರಿಯಲ್ಲಿ ನಡೆಯುತ್ತಿರುವ ವಿಧಾನ ಮಂಡಲದ ಚಳಿಗಾಲದ ಅಧಿವೇಶನದಲ್ಲಿ ಎರಡು ದಿನಗಳನ್ನು ಮೀಸಲಿಡಲಾಗುತ್ತದೆ. ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿ ಇರುವ ಈ ಸಂದರ್ಭದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದ ಮೂಲಕ ಉತ್ತರ ಕರ್ನಾಟಕ ಭಾಗದ ಜನರ ಒಲವು ಗಳಿಸುವ ಕಾರ್ಯತಂತ್ರಗಳಲ್ಲಿ ಇದು ಕೂಡ ಒಂದಾಗಿದೆ.ಮೂರು ರಾಜಕೀಯ ಪಕ್ಷಗಳು ಜನರ ಒಲವು ಗಳಿಸುವ ಪ್ರಯತ್ನದಲ್ಲಿ ನಿರತರಾಗಿದ್ದು, ಈ ವಿಚಾರದಲ್ಲಿ ಪೈಫೋಟಿಗೆ ಮುಂದಾಗಿವೆ. ಶಾಸಕರಿಗೆ ಏಕವಚನದಲ್ಲಿ […]
ಚೀನಾ ಗಡಿ ಗಲಾಟೆ ಚರ್ಚೆಗೆ ಕಾಂಗ್ರೆಸ್ ಪಟ್ಟು : ಸಂಸತ್ ಭವನದೆದುರು ಪ್ರತಿಭಟನೆ

ನವದೆಹಲಿ,ಡಿ.21- ಭಾರತದ ಗಡಿ ಭಾಗದಲ್ಲಿ ಚೀನಾ ಸೈನಿಕರ ಉದ್ಧಟತನ ವರ್ತನೆ ಕುರಿತು ಚರ್ಚೆಗೆ ಸಂಸತ್‍ನಲ್ಲಿ ಅವಕಾಶ ನೀಡಬೇಕು ಎಂದು ಕಾಂಗ್ರೆಸ್ ನೇತೃತ್ವದಲ್ಲಿ ಪ್ರತಿಪಕ್ಷಗಳು ಮಹಾತ್ಮಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸಲಾಯಿತು. ನಂತರ ಸಂಸತ್‍ನಲ್ಲೂ ಸಭಾತ್ಯಾಗದ ಮೂಲಕ ಒತ್ತಡ ಹೇರುವ ಪ್ರಯತ್ನಗಳಾಗಿವೆ. ಇದಕ್ಕೂ ಮುನ್ನಾ ಕಾಂಗ್ರೆಸ್ ಸಂಸದೀಯ ವ್ಯವಹಾರಗಳ ಸಮಿತಿ ಅಧ್ಯಕ್ಷೆ ಸೋನಿಯಾ ಗಾಂಧಿ ನೇತೃತ್ವದಲ್ಲಿ ಪ್ರತಿಪಕ್ಷಗಳ ನಾಯಕರ ಸಭೆ ನಡೆಯಿತು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ಕಾಂಗ್ರೆಸ್ ಪಕ್ಷದ ಸಂಸದೀಯ ನಾಯಕ ಅೀಧಿರ್ ರಂಜನ್ ಚೌದರಿ, […]
ಎಸ್‍ಸಿ-ಎಸ್‍ಟಿ ಮೀಸಲಾತಿ ಹೆಚ್ಚಳ ಕುರಿತು ಚರ್ಚೆಗೆ ಅವಕಾಶ

ಬೆಳಗಾವಿ,ಡಿ.20- ಶಿಕ್ಷಣ ಮತ್ತು ಉದ್ಯೋಗದಲ್ಲಿ ಪರಿಶಿಷ್ಟ ಜಾತಿ/ವರ್ಗದವರಿಗೆ ಮೀಸಲಾತಿ ಹೆಚ್ಚಳ ಮಾಡುವ ಕಾಯ್ದೆ ಕುರಿತು ಚರ್ಚೆಗೆ ಅವಕಾಶ ನೀಡುವುದಾಗಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರಕಟಿಸಿದರು. ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರ ನಿಲುವಳಿ ಸೂಚನೆ ಕುರಿತು ಪ್ರಸ್ತಾಪಿಸಿ, ಇದೊಂದು ಮಹತ್ವದ ವಿಷಯವಾಗಿರುವುದರಿಂದ ಸದನದಲ್ಲಿ ಅನೇಕ ಸದಸ್ಯರು ಮಾತನಾಡಬೇಕಿದೆ. ಕೇವಲ ಪ್ರತಿಪಕ್ಷದ ನಾಯಕರು, ಮುಖ್ಯಮಂತ್ರಿಗಳು ಚರ್ಚೆ ನಡೆಸಿದರೆ ಸಾಲದು, ಸದನದಲ್ಲಿ ಸುದೀರ್ಘವಾದ ಚರ್ಚೆ ಆಗಬೇಕೆಂದು ಅಭಿಪ್ರಾಯಪಟ್ಟರು. ಈ ವೇಳೆ ಮಧ್ಯಪ್ರವೇಶಿಸಿದ ಮುಖ್ಯಮಂತ್ರಿ ಬೊಮ್ಮಾಯಿ, ಕಾಯ್ದೆಯನ್ನು ನಾವು ಸುಗ್ರಿವಾಜ್ಞೆ ಮೂಲಕ […]