ನೈಜೀರಿಯಾ ಪ್ರಜೆ ಸೆರೆ : 12 ಲಕ್ಷ ಮೌಲ್ಯದ ಡ್ರಗ್ಸ್ ವಶ

ಬೆಂಗಳೂರು, ಜ.7- ನಗರದಲ್ಲಿ ಮಾದಕ ವಸ್ತುಗಳ ಸಾಗಣೆ ಮತ್ತು ಮಾರಾಟ ಮಾಡುವವರ ಬಗ್ಗೆ ನಿರಂತರ ದಾಳಿ ಮುಂದುವರೆದಿದ್ದು, ಬೈಯಪ್ಪನಹಳ್ಳಿ ಪೊಲೀಸರು ನೈಜೀರಿಯಾ ಪ್ರಜೆಯನ್ನು ಬಂಧಿಸಿ 12 ಲಕ್ಷ ಮೌಲ್ಯದ ಕೊಕೈನ್, ಎಕ್ಸ್‍ಟಸಿ ಮಾತ್ರೆಗಳನ್ನು ವಶಪಡಿಸಿಕೊಂಡಿದ್ದಾರೆ. ಅಗು ಎಜೆಮಾ ಅರುವಾ (41) ಬಂvತ ನೈಜೀರಿಯಾ ಪ್ರಜೆ. ಈತನಿಂದ ಮಾದಕ ವಸ್ತುಗಳಾದ 50 ಗ್ರಾಂ ಕೊಕೈನ್, 105 ಗ್ರಾಂ ಎಂಡಿಎಂಎ ಮತ್ತು ವಿವಿಧ ಬಣ್ಣದ 80 ಎಕ್ಸ್‍ಟೆಸಿ ಮಾತ್ರೆಗಳು ಹಾಗೂ ಒಂದು ಕಾರನ್ನು ವಶಪಡಿಸಿಕೊಳ್ಳಲಾಗಿದೆ. ನಗರದಾದ್ಯಂತ ಸಿಂಥೆಟಿಕ್ ಡ್ರಗ್‍ಗಳ ಸಾಗಣೆ […]