ಇಡಿಯಿಂದ ಮತ್ತೊಂದು ಹೊಸ ಕತೆ : ತೇಜೆಸ್ವಿ ಯಾದವ್

ಪಾಟ್ನಾ,ಮಾ.12- ತಮ್ಮ ಮನೆ, ಕಚೇರಿ ಮತ್ತು ಆಪ್ತರಿಗೆ ಸೇರಿ ಸ್ಥಳಗಳಲ್ಲಿ ನಡೆದ ಶೋಧ ಕಾರ್ಯಾಚರಣೆಯಲ್ಲಿ 600 ಕೋಟಿ ರೂಪಾಯಿ ಪತ್ತೆಯಾಗಿದೆ ಎಂಬುದು ಸುಳ್ಳು ವದ್ಧಂತಿ ಎಂದು ಬಿಹಾರದ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಅಲ್ಲಗಳೆದಿದ್ದಾರೆ. ಕಳೆದ ಮೂರು ದಿನಗಳಿಂದ ನಡೆದ ಕಾರ್ಯಾಚರಣೆಯಲ್ಲಿ ಅಪರಾಧಿಕ ಮೊತ್ತ 600 ಕೋಟಿ ರೂಪಾಯಿಗಳು ಪತ್ತೆಯಾಗಿದೆ ಎಂದು ಜಾರಿ ನಿರ್ದೇಶನಾಲಯ ನಿನ್ನೆ ಹೇಳಿಕೆ ನೀಡಿತ್ತು. ಇದನ್ನು ಅಲ್ಲಗಳೆದ ತೇಜೆಸ್ವಿ ಯಾದವ್ ಜಾರಿನಿರ್ದೇಶನಾಲಯದ ಹೇಳಿಕೆಗಳು ವದ್ಧಂತಿಗಳು ಎಂದು ಅಲ್ಲಗಳೆದಿದ್ದಾರೆ. ಮೋದಿ ರೋಡ್‌ ಶೋ : ‘ಉರಿಗೌಡ […]

ಎಷ್ಟೇ ಕಿರುಕುಳ ನೀಡಿದರೂ ಬಿಜೆಪಿ ಮುಂದೆ ತಲೆ ಬಾಗಲ್ಲ : ಲಾಲೂ

ನವದೆಹಲಿ,ಮಾ.11- ಬಿಜೆಪಿಯವರು ನನಗೆ ಹಾಗೂ ನನ್ನ ಕುಟುಂಬಕ್ಕೆ ಎಷ್ಟೇ ಕಿರುಕುಳ ನೀಡಿದರೂ ಅವರ ಮುಂದೆ ತಲೆ ಬಗ್ಗಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಬಿಹಾರದ ಮಾಜಿ ಮುಖ್ಯಮಂತ್ರಿ ಹಾಗೂ ಆರ್‍ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಸ್ಪಷ್ಟಪಡಿಸಿದ್ದಾರೆ. ಜಮೀನು-ಉದ್ಯೋಗ ಪ್ರಕರಣದಲ್ಲಿ ಸಿಬಿಐ ಮತ್ತು ಇಡಿ ಅಧಿಕಾರಿಗಳು ಆಧಾರವಿಲ್ಲದ ಸೇಡಿನ ಪ್ರಕರಣದ ಮೇಲೆ ಅವರು ತಮ್ಮ ಮಗಳು, ಮೊಮ್ಮಗಳು ಮತ್ತು ಗರ್ಭಿಣಿ ಸೊಸೆಗೂ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ನಾವು ತುರ್ತು ಪರಿಸ್ಥಿತಿಯ ಕರಾಳ […]