ಒತ್ತುವರಿ ತೆರವು ಕಾರ್ಯ ಸ್ಥಗಿತ ಮಾತು ತಪ್ಪಿದ ಬಿಬಿಎಂಪಿ

ಬೆಂಗಳೂರು,ನ.30- ಮತ್ತೆ ಬಿಬಿಎಂಪಿ ಕೊಟ್ಟ ಮಾತಿಗೆ ತಪ್ಪಿದೆ. ನವಂಬರ್ ಅಂತ್ಯದ ವೇಳೆಗೆ ನಗರದಲ್ಲಿ ಮಾಡಲಾಗಿರುವ ಎಲ್ಲ ಒತ್ತುವರಿಯನ್ನು ತೆರವುಗೊಳಿಸುವುದಾಗಿ ಮಾತು ಕೊಟ್ಟಿದ್ದ ಬಿಬಿಎಂಪಿ ಇದೀಗ ನವಂಬರ ತಿಂಗಳು ಪೂರ್ಣಗೊಳ್ಳುತ್ತಿದ್ದರೂ ಒತ್ತುವರಿ ತೆರವು ಮಾಡುವಲ್ಲಿ ವಿಫಲವಾಗಿದೆ. ಮಳೆ ಅನಾಹುತ ಸಂಭವಿಸಿದ್ದ ಸಂದರ್ಭದಲ್ಲಿಕೇವಲ ಬಡವರ ಮನೆಗಳ ಮೇಲೆ ದಬ್ಬಾಳಿಕೆ ನಡೆಸಿ ಶ್ರೀಮಂತರ ಬೆನ್ನಿಗೆ ಬೆಣ್ಣೆ ಸವರಿದ್ದ ಬಿಬಿಎಂಪಿ ಅಧಿಕಾರಿಗಳ ಆಸಲಿ ಮುಖ ಇದೀಗ ಬಯಲಾಗಿದೆ. ಆರಂಭದಲ್ಲಿ ಬಡವರ ಮನೆಗಳಿಗೆ ಜೆಸಿಬಿಗಳನ್ನು ನುಗ್ಗಿಸಿ ಬಳಿಕ ಸರ್ವೇ ಮಾಡಬೇಕು. ಅದುವರೆಗೂ ಡೆಮಾಲೇಷನ್ ನಿಲ್ಲಿಸಲಾಗುವುದು. […]
ರಾಜಧಾನಿಯಲ್ಲಿ ಮುಂದುವರೆಯಲಿದೆ ಒತ್ತುವರಿ ತೆರವು ಕಾರ್ಯ : ತುಷಾರ್ ಗಿರಿನಾಥ್

ಬೆಂಗಳೂರು,ಅ.17- ರಾಜಕಾಲುವೆ ಒತ್ತುವರಿ ತೆರವು ಕಾರ್ಯ ಕೈ ಬಿಡುವ ಪ್ರಶ್ನೆಯೇ ಇಲ್ಲ. ಆದಷ್ಟು ಬೇಗ ತೆರವು ಕಾರ್ಯಾಚರಣೆ ನಡೆಸಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಇಂದಿಲ್ಲಿ ತಿಳಿಸಿದ್ದಾರೆ. ನಗರದ ಪೂರ್ವ ವಲಯದ ಹೆಣ್ಣೂರು ಮುಖ್ಯ ರಸ್ತೆ, ಬಾಣಸವಾಡಿ ಮತ್ತಿತರ ಪ್ರದೇಶಗಳಿಗೆ ಕಾಲ್ನಡಿಗೆಯಲ್ಲಿ ತೆರಳಿ ಸಾರ್ವಜನಿಕರಿಂದ ಸಮಸ್ಯೆ ಆಲಿಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ರಾಜಕಾಲುವೆ ಒತ್ತುವರಿ ತೆರವಿನಲ್ಲಿ 504 ಸ್ವತ್ತು ಇದೆ. ಎಲ್ಲದಕ್ಕೂ ನೋಟೀಸ್ ನೀಡುತ್ತೇವೆ ನಂತರ ತೆರವು ಕಾರ್ಯ ಆರಂಭಿಸಲಾಗುವುದು ಎಂದು ಅವರು […]
ಒತ್ತುವರಿ ತೆರವಿಗೆ ದಂಪತಿ ವಿರೋಧ: ಆತ್ಮಾಹುತಿ ಬೆದರಿಕೆ

ಬೆಂಗಳೂರು,ಅ.12- ಕೆ.ಆರ್.ಪುರ ವಿಧಾನಸಭಾ ಕ್ಷೇತ್ರದಲ್ಲಿ ಮೂರನೇ ದಿನವು ಒತ್ತುವರಿ ತೆರವು ಕಾರ್ಯಾಚರಣೆ ನಡೆದಿದ್ದು, ತೆರವಿಗೆ ಬಂದಿದ್ದ ಪಾಲಿಕೆ ಅಧಿಕಾರಿಗಳಿಗೆ ದಂಪತಿ ಶಾಕ್ ನೀಡಿದ್ದಾರೆ. ಮನೆ ತೆರವು ಮಾಡಿದರೆ ಆತ್ಮಹತ್ಯೆ ಮಾಡಿಕೊಳ್ಳುವು ದಾಗಿ ಬಸವನಪುರ ಮುಖ್ಯರಸ್ತೆಯ ಎಸ್‍ಆರ್ ಲೇಔಟ್‍ನ ಸೋನಾ ಸಿಂಗ್ ಹಾಗೂ ಸುನೀಲ್ ಸಿಂಗ್ ದಂಪತಿ ಕೈಯಲ್ಲಿ ಪೆಟ್ರೋಲ್ ಹಿಡಿದು ಮೈಮೇಲೆ ಸುರಿದುಕೊಂಡು ರಂಪಾಟ ಮಾಡಿದ್ದಾರೆ. ನಾವು ಇಲ್ಲಿಯವರೆ. ಇಲ್ಲೇ ಹುಟ್ಟಿ ಬೆಳೆದಿದ್ದೇವೆ. ಮನೆ ಕಟ್ಟುವಾಗ ಇಲ್ಲದ ರಾಜಕಾಲುವೆ ಈಗ ಎಲ್ಲಿಂದ ಬಂತು. ನಾವೇನು ಪಾಕಿಸ್ತಾನದಿಂದ ಬಂದಿದ್ದೇವಾ? […]
ಇಂದೂ ಕೂಡ ಮುಂದುವರೆದ ಒತ್ತುವರಿ ತೆರವು ಕಾರ್ಯ

ಬೆಂಗಳೂರು, ಅ.11- ಒತ್ತುವರಿ ತೆರವು ಕಾರ್ಯಾಚರಣೆ ಅಧ್ಯಾಯ-2 ಪ್ರಾರಂಭವಾಗಿದ್ದು , ಕೆಆರ್ ಪುರ ಕ್ಷೇತ್ರದಲ್ಲಿ ಇಂದೂ ಕೂಡ ಕಾರ್ಯಾಚರಣೆ ಭರದಿಂದ ಸಾಗಿತ್ತು. ಬಸವನಪುರ ವಾರ್ಡ್ನ ಎಸ್ಆರ್ ಲೇಔಟ್ನಲ್ಲಿ ಪಾಲಿಕೆ ಎಇಇ ಪಂಪಾಪತಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದ್ದು, ಈ ಹಿಂದೆಯೇ 15 ಮನೆಗಳಿಗೆ ನೋಟೀಸ್ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಇಂದು ತೆರವು ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಜೆಸಿಬಿ ಮೂಲಕ ತೆರವು ಮಾಡಿದರೆ ಮನೆಯ ಕಿಟಕಿಗಳಿಗೆ ತೊಂದರೆಯಾಗುತ್ತದೆ. ಮರು ಬಳಕೆಗೆ ಬಾರದಂತಾಗುತ್ತದೆ ಎಂದು ಕೆಲವು ಮನೆಯವರೇ ಸ್ವತಃ ಕಿಟಕಿಗಳನ್ನು ತೆರವು ಮಾಡಿ […]
ಸೋಮವಾರದಿಂದ ಮತ್ತೆ ಒತ್ತುವರಿ ತೆರವು ಕಾರ್ಯಚರಣೆ

ಬೆಂಗಳೂರು,ಅ.8- ದಸರಾ ಹಬ್ಬದ ಅಂಗವಾಗಿ ಬಿಡುವು ನೀಡಲಾಗಿದ್ದ ದೊಡ್ಡ ದೊಡ್ಡ ಕಟ್ಟಡಗಳ ಒತ್ತುವರಿ ತೆರವು ಕಾರ್ಯಚರಣೆ ಸೋಮವಾರದಿಂದ ಮತ್ತೆ ಆರಂಭವಾಗಲಿದೆ. ಸುಪ್ರಸಿದ್ಧ ದಸರಾ ಹಬ್ಬದ ಸಂದರ್ಭದಲ್ಲಿ ಪೂಜೆ ಮಾಡಿ ನಿಲ್ಲಿಸಲಾಗಿದ್ದ ಜೆಸಿಬಿ ಯಂತ್ರಗಳು ಹಾಗೂ ಬುಲ್ಡೋಜರ್‍ಗಳು ಮತ್ತೆ ಘರ್ಜನೆ ಮಾಡಲು ಸಿದ್ದವಾಗಿವೆ. ಈಗಾಗಲೇ ಒತ್ತುವರಿದಾರ ಪಟ್ಟಿ ಸಿದ್ದಪಡಿಸಿಕೊಂಡಿರುವ ಕಂದಾಯ ಇಲಾಖೆ ಮತ್ತು ಬಿಬಿಎಂಪಿ ಅಧಿಕಾರಿಗಳು ಸೋಮವಾರದಿಂದ ಒತ್ತುವರಿ ತೆರವು ಕಾರ್ಯಚರಣೆಯನ್ನು ಚುರುಕುಗೊಳಿಸಲು ತೀರ್ಮಾನಿಸಿದ್ದಾರೆ. ಮಳೆ ಬಂದಾಗ ಬಿಬಿಎಂಪಿ ವಿರುದ್ಧ ಬಾಯಿಗೆ ಬಂದಂತೆ ಹೇಳಿಕೆ ನೀಡುವ ಪ್ರತಿಷ್ಠಿತ ವ್ಯಕ್ತಿಗಳು […]
ಕೆರೆಗಳ ಒತ್ತುವರಿ ಕುರಿತು ಸಮಗ್ರ ತನಿಖೆ : ಸಿಎಂ
ಬೆಂಗಳೂರು, ಸೆ.19- ಬೆಂಗಳೂರಿನಲ್ಲಿ ಕೆರೆಗಳನ್ನು ಮುಚ್ಚಿರುವ ಹಾಗೂ ಒತ್ತುವರಿ ಮಾಡಿರುವ ಬಗ್ಗೆ ಸಮಗ್ರ ತನಿಖೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಧಾನಸಭೆಗೆ ತಿಳಿಸಿದರು. ನಿಯಮ 69ರಡಿ ರಾಜ್ಯದಲ್ಲಿ ಪ್ರವಾಹ, ಅತಿವೃಷ್ಟಿ ಸಮಸ್ಯೆಗಳ ಬಗ್ಗೆ ನಡೆದ ಚರ್ಚೆಗೆ ಕಂದಾಯ ಸಚಿವರು ಉತ್ತರ ನೀಡುವ ಸಂದರ್ಭದಲ್ಲಿ ಮದ್ಯ ಪ್ರವೇಶಿಸಿ ಸಿಎಂ ಮಾತನಾಡಿದರು. ಕಾಲ ಕಾಲಕ್ಕೆ ಅಭಿವೃದ್ಧಿಯಾದಂತೆ ಕೆರೆಗಳನ್ನು ಮುಚ್ಚಲಾಗಿದೆ. ಸುಧಾರಣೆ ಹೆಸರಿನಲ್ಲಿ ಹಿಂದೆ ಆಗಿರುವ ತಪ್ಪುಗಳನ್ನು ಮುಂದೆ ಆಗದಂತೆ ನೋಡಿಕೊಳ್ಳಬೇಕಿದೆ. ಅದಕ್ಕಾಗಿ ಯಾವ ಯಾವ ಕಾಲದಲ್ಲಿ ಯಾವ ಸಂದರ್ಭದಲ್ಲಿ […]