ಇಂಗ್ಲೀಷ್ ಬಾರದ ಮಲೆನಾಡ ರೈತರ ಗೋಳು ಕೇಳೋರು ಯಾರು ..?

ಚಿಕ್ಕಮಗಳೂರು,ಆ.21-ಸ್ವಾಮಿ ನಮಗೆ ಇಂಗ್ಲೀಷ್ ಬಂದಿದ್ದರೆ ನಾವೇಕೆ ವ್ಯವಸಾಯ ಮಾಡಬೇಕಿತ್ತು. ಯಾವುದಾದರೂ ಆಫೀಸ್‍ನಲ್ಲಿ ಏಸಿ ರೂಮ್‍ನಲ್ಲಿ ಕುಳಿತುಕೊಂಡು ಕೆಲಸ ಮಾಡುತ್ತಿದ್ದೆವು ಎಂದು ಬೆಳೆ ಪರಿಹಾರಕ್ಕೆ ಅರ್ಜಿ ಸಲ್ಲಿಸುತ್ತಿರುವ ಕಾಫಿನಾಡಿನ ಅನ್ನದಾತರ ನೋವಿನ ಮಾತು. ಕಳೆದ ತಿಂಗಳು ಜಿಲ್ಲೆಯಾದ್ಯಂತ ಸುರಿದ ಭಾರೀ ಮಳೆಯಿಂದಾಗಿ ಕೈಗೆ ಬಂದ ಬೆಳೆ ನಾಶವಾಗಿದ್ದು, ಸರ್ಕಾರ ಬೆಳೆ ಪರಿಹಾರಕ್ಕೆ ಅರ್ಜಿ ಆಹ್ವಾನಿಸಿದೆ. ಆದರೆ ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಆಂಗ್ಲಭಾಷೆಯ ಅರ್ಜಿಗಳನ್ನುನೀಡಿದ್ದಾರೆ. ಪರಿಹಾರ ಸಿಕ್ಕರೆ ಸಾಕು ಎನ್ನುವ ರೈತರು ಅದೇ ಅರ್ಜಿ ಪಡೆದು ಭರ್ತಿ […]

BIG NEWS : ಸರ್ಕಾರಿ ಶಾಲೆಗಳಲ್ಲಿ ವಾರಕ್ಕೊಮ್ಮೆ ಸ್ಪೋಕನ್ ಇಂಗ್ಲೀಷ್ ಕ್ಲಾಸ್

ಬೆಂಗಳೂರು,ಜು.15- ಸರ್ಕಾರಿ ಶಾಲೆಗಳಲ್ಲಿ ಇನ್ನು ಮುಂದೆ ವಾರಕ್ಕೊಮ್ಮೆ ಅಥವಾ ಎರಡು ದಿನ ಸ್ಪೋಕನ್ ಇಂಗ್ಲೀಷ್ ತರಗತಿಗಳನ್ನು ಆಯೋಜಿಸಲು ಸರ್ಕಾರ ಮುಂದಾಗಿದ್ದು ಇದಕ್ಕಾಗಿ ಶಿಕ್ಷಣ ಇಲಾಖೆ ಸಿದ್ದತೆ ನಡೆಸಿದೆ. ಒಂದು ವೇಳೆ ಶಿಕ್ಷಕರ ಕೊರತೆ ಬಂದರೆ ಹೊರಗುತ್ತಿಗೆ ಅಥವಾ ಅತಿಥಿ ಶಿಕ್ಷಕರನ್ನ ನೇಮಕ ಮಾಡಿಕೊಂಡು ಸ್ಪೋಕನ್ ಇಂಗ್ಲೀಷ್ ಕಲಿಸಲು ಸರ್ಕಾರ ಮುಂದಾಗಿದ್ದು, 1ರಿಂದ6 ಅಥವಾ 1-8 ನೇ ತರಗತಿವರೆಗೆ ಸ್ಪೋಕನ್ ಇಂಗ್ಲೀಷ್ ತರಬೇತಿ ನೀಡುವ ಉದ್ದೇಶ ಹೊಂದಿದೆ. ವಾರದಲ್ಲಿ ಒಂದು ದಿನ ಶನಿವಾರ ಅಥವಾ ವಾರದಲ್ಲಿ ಎರಡು ದಿನ […]