ಉತ್ತರ ಕುಮಾರ ರಾಹುಲ್‍ ಎಲ್ಲಿದ್ದೀಯಪ್ಪಾ..? : ಬಿಜೆಪಿ ವ್ಯಂಗ್ಯ

ಬೆಂಗಳೂರು,ಜು.13- ಅಕ್ಟೋಬರ್ ತಿಂಗಳಲ್ಲಿ ಭಾರತ್ ಜೋಡೋ ಯಾತ್ರೆ ಉಳಿದ ಎಲ್ಲಾ ತಿಂಗಳು ಭಾರತದಿಂದ ವಿದೇಶಕ್ಕೆ ಓಡೋ ಯಾತ್ರೆ! ನಕಲಿ ಗಾಂಧಿ ವಂಶದ ಕುಡಿಯ ರಾಜಕಾರಣ. ರಾಹುಲ್‍ಎಲ್ಲಿದ್ದೀಯಪ್ಪಾ ಎಂದು ಬಿಜೆಪಿ ವ್ಯಂಗ್ಯವಾಡಿದೆ. ಈ ಕುರಿತು ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ರಾಹುಲ್ ಗಾಂಧಿ ವಿದೇಶ ಪ್ರವಾಸದಲ್ಲಿ ಬ್ಯುಸಿ ಇರುವುದರಿಂದ ಭಾರತ್ ಜೋಡೋ ಯಾತ್ರೆಯ ಸಿದ್ಧತಾ ಸಭೆಯನ್ನು ಯುರೋಪ್‍ಗೆ ವರ್ಗಾಯಿಸಲಾಗುತ್ತದೆಯೇ ಎಂದು ಪ್ರಶ್ನಿಸಿದೆ. ಕಾಂಗ್ರೆಸಿಗರಿಗೊಂದು ಕ್ವಿಜ್..! ಕಾಂಗ್ರೆಸ್ ಪಕ್ಷದ ಮಹತ್ವದ ಸಭೆಗೆ ಮುಹೂರ್ತ ನಿಗದಿಯಾದಾಗ ರಾಹುಲ್ ಗಾಂಧಿ ವಿದೇಶ ಪ್ರವಾಸ […]