ಕೋರೆಗಾಂವ್-ಭೀಮಾ ಹಿಂಸಾಚಾರ ತನಿಖಾ ಆಯೋಗದ ಅಧಿಕಾರವಧಿ ವಿಸ್ತರಣೆ

ಪುಣೆ,ಜ.19- ಪುಣೆ ನಗರದ ಹೊರವಲಯದಲ್ಲಿ 2018ರ ಜನವರಿ 1ರಂದು ನಡೆದ ಹಿಂಸಾಚಾರದ ಕುರಿತು ತನಿಖೆ ನಡೆಸುತ್ತಿರುವ ಕೋರೆಗಾಂವ್-ಭೀಮಾ ತನಿಖಾ ಆಯೋಗದ ಅಧಿಕಾರವಯನ್ನು ಮಹಾರಾಷ್ಟ್ರ ಸರ್ಕಾರ ಮೂರು ತಿಂಗಳವರೆಗೂ ವಿಸ್ತರಣೆ ಮಾಡಿದೆ. ಮತ್ತಷ್ಟು ಸಾಕ್ಷಿಗಳನ್ನು ದಾಖಲಿಸಬೇಕಿರುವುದರಿಂದ ಮತ್ತಷ್ಟು ಕಾಲಾವಕಾಶ ಅಗತ್ಯವಿದೆ ಎಂದು ಸಮಿತಿ ಮನವಿ ಮಾಡಿತ್ತು. ಹಿಂಸಾಚಾರದ ವಿಚಾರಣೆಗಾಗಿ ರಚಿಸಲಾಗಿರುವ ಆಯೋಗದಲ್ಲಿ ಇಬ್ಬರು ಸದಸ್ಯರಿದ್ದಾರೆ. ಆಯೋಗಕ್ಕೆ 2022ರ ಡಿಸೆಂಬರ್ 31ರವರೆಗೆ ಕಾಲಾವಕಾಶವಿತ್ತು. ಅದನ್ನು ಈ ವರ್ಷದ ಮಾರ್ಚ್ 31ರವರೆಗೆ ವಿಸ್ತರಣೆ ಮಾಡಲಾಗಿದೆ ಎಂದು ಸರ್ಕಾರದ ಅಧಿಸೂಚನೆ ತಿಳಿಸಿದೆ. 1818 […]