ಗಣ್ಯವ್ಯಕ್ತಿಗಳಿಗೆ ವಿನಾಯ್ತಿ ಪಾಸ್‍ಟ್ಯಾಗ್‍ ವಿತರಣೆ

ಬೆಂಗಳೂರು,ಫೆ.22-ಶಾಸಕರು, ಸಂಸದರು, ಗಣ್ಯವ್ಯಕ್ತಿಗಳುಹಾಗೂ ವಿಶೇಷ ವಾಹನಗಳು ಟೋಲ್‍ನಲ್ಲಿ ಸುಗಮವಾಗಿ ಸಂಚರಿಸಲು ಅನುಕೂಲವಾಗುವಂತೆ ಶುಲ್ಕ ವಿನಾಯ್ತಿ ಪಾಸ್‍ಟ್ಯಾಗ್‍ ಗಳನ್ನು ನೀಡಲಾಗಿದೆ ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ತಿಳಿಸಿದ್ದಾರೆ. ವಿಧಾನಪರಿಷತ್‍ನ ಪ್ರಶ್ನೋತ್ತರದಲ್ಲಿ ಶಾಸಕ ಸುನೀಲ್ ಗೌಡ ಪಾಟೀಲ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, 2021ರ ಫೆ.16ರಿಂದ ಎಲ್ಲ ವಾಹನಗಳು ಟೋಲ್‍ಗಳಲ್ಲಿ ಸಂಚರಿಸಬೇಕಾದಾಗ ಪಾಸಟ್ಯಾಗ್‍ಗಳನ್ನು ಕಡ್ಡಾಯಗೊಳಿಸಲಾಗಿದೆ. ನೈಸ್‍ರಸ್ತೆಯಲ್ಲಿ ಶುಲ್ಕ ವಿನಾಯ್ತಿ ಪಾಸ್‍ಟ್ಯಾಗ್‍ಗಳನ್ನು ನಿರಾಕರಿಸಿರುವ ಬಗ್ಗೆ ಯಾವುದೇ ದೂರುಗಳು ಕೇಳಿಬಂದಿಲ್ಲ ಎಂದು ಸ್ಪಷ್ಟಪಡಿಸಿದರು. ಅನಿತಾಕುಮಾರಸ್ವಾಮಿ ಆತ್ಮಾವಲೋಕನ ಮಾಡಿಕೊಳ್ಳಲಿ : ಅಶ್ವಥ್ ನಾರಾಯಣ ಸದಸ್ಯ […]