ಬಿಬಿಎಂಪಿ ವಾರ್ಡ್ ಮರುವಿಂಗಡಣೆಗೆ ಕೋಟಿ ಕೋಟಿ ಖರ್ಚು

ಬೆಂಗಳೂರು,ಡಿ.24- ಈ ಹಿಂದೆ ಇದ್ದ 198 ವಾರ್ಡ್‍ಗಳನ್ನು 243 ವಾರ್ಡ್‍ಗಳನ್ನಾಗಿ ಮರು ವಿಂಗಡಣೆ ಮಾಡಿರುವುದರಿಂದ ಬಿಬಿಎಂಪಿಗೆ ಆರ್ಥಿಕ ಹೊರೆ ಹೆಚ್ಚಾಗಿದೆ. ವಾರ್ಡ್ ವಿಂಗಡಣೆ ಮಾಡಲು ಬಿಬಿಎಂಪಿಗೆ ಸಿಬ್ಬಂದಿ ವೇತನ, ಕಚೇರಿ ಇತರೆ ಖರ್ಚು ವೆಚ್ಚಗಳು ಸೇರಿ ತಿಂಗಳಿಗೆ 10 ರಿಂದ 15 ಕೋಟಿ ರೂ.ಗಳ ಹೆಚ್ಚುವರಿ ಹೊರೆ ಬಿದ್ದಿದೆ. 198 ವಾರ್ಡ್‍ಗಳನ್ನು 243 ವಾರ್ಡ್‍ಗಳನ್ನಾಗಿ ಪರಿವರ್ತಿಸಿರುವುದರಿಂದ ಹೆಚ್ಚುವರಿಯಾಗಿ 45 ವಾರ್ಡ್‍ಗಳನ್ನು ರಚಿಸಬೇಕಾದರೆ ವಾರ್ಷಿಕ ನೂರಾರು ಕೋಟಿ ರೂ.ಗಳನ್ನು ಪಾಲಿಕೆಯಿಂದ ಭರಿಸಬೇಕಿದೆ. ವಾರ್ಡ್ ಪುನರ್‍ವಿಂಗಡಣೆಗೆ ಹೆಚ್ಚುವರಿ ಹುದ್ದೆ ಸೃಷ್ಟಿಸಿ […]

ಕಾಂಗ್ರೆಸ್ ಸೋಲಿಸಲು ಆಮ್‍ಆದ್ಮಿ ಪಕ್ಷಕ್ಕೆ ಬಿಜೆಪಿ ಫಂಡಿಂಗ್ ಮಾಡಿದೆ : ಸಿದ್ದರಾಮಯ್ಯ

ಮೈಸೂರು,ಡಿ.8-ಗುಜರಾತ್ ವಿಧಾನಸಭೆಯಲ್ಲಿ ಆಮ್‍ಆದ್ಮಿ ಪಕ್ಷ ಕಾಂಗ್ರೆಸ್‍ನ ಮತಗಳನ್ನು ಕಸಿದುಕೊಂಡಿದ್ದರಿಂದ ನಮ್ಮ ಪಕ್ಷಕ್ಕೆ ಹಿನ್ನಡೆಯಾಗಿದೆ. ಆದರೆ, ಅಲ್ಲಿನ ಫಲಿತಾಂಶ ಕರ್ನಾಟಕ ರಾಜಕೀಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ವಿಶ್ಲೇಷಿಸಿದ್ದಾರೆ. ನಗರದಲ್ಲಿಂದು ವರುಣಾ ಕ್ಷೇತ್ರದಲ್ಲಿ ಪ್ರವಾಸ ಕೈಗೊಳ್ಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುಜರಾತ್ ಫಲಿತಾಂಶ ಅಚ್ಚರಿಯೇನು ಅಲ್ಲ, ನಿರೀಕ್ಷಿತ. ಅಲ್ಲಿ ಕಾಂಗ್ರೆಸ್ ಗೆಲ್ಲುವುದಿಲ್ಲ ಎಂದು ಮೊದಲೇ ಗೊತ್ತಿತ್ತು ಎಂದರು. ಗುಜರಾತ್‍ನಲ್ಲಿ ಆಮ್‍ಆದ್ಮಿ ಪಕ್ಷ ಕಾಂಗ್ರೆಸ್‍ನ ಮತಗಳನ್ನು ತಿಂದು ಹಾಕಿದೆ. ಶೇ.10ಕ್ಕಿಂತಲೂ ಹೆಚ್ಚು ಮತ […]

ವೋಟರ್ ಐಡಿ ಹಗರಣ : ಹಣಕಾಸು ವಹಿವಾಟಿನ ಬಗ್ಗೆ ತನಿಖೆ ತೀವ್ರ

ಬೆಂಗಳೂರು, ನ.27-ಮತದಾರರ ಪಟ್ಟಿ ಅಕ್ರಮದಲ್ಲಿ ಈವರೆಗೂ 11 ಮಂದಿ ಬಂಧನವಾಗಿದ್ದು, ಪೊಲೀಸರು ಹಗರಣದಲ್ಲಿನ ಹಣಕಾಸು ವಹಿವಾಟಿನ ಬಗ್ಗೆ ಮಾಹಿತಿ ಕಲೆಹಾಕಲಾರಂಭಿಸಿದ್ದಾರೆ. ಚುನಾವಣಾ ಆಯೋಗದ ಉಸ್ತುವಾರಿಯಲ್ಲಿ ನಡೆಯುತ್ತಿರುವ ತನಿಖೆ ದಿನೇ ದಿನೇ ಗಂಭೀರತೆ ಪಡೆದುಕೊಳ್ಳುತ್ತಿದೆ. ಹಗರಣದಲ್ಲಿ ಪ್ರಮುಖವಾಗಿ ಕೇಳಿ ಬಂದ ಚಿಲುಮೆ ಸಂಸ್ಥೆಯ ಮುಖ್ಯಸ್ಥರು ಸೇರಿದಂತೆ ಹಲವರನ್ನು ಬಂಧಿಸಲಾಗಿದೆ. ನಿನ್ನೆ ಬಿಬಿಎಂಪಿ ನಾಲ್ಕು ಮಂದಿ ಚುನಾವಣಾಕಾರಿ(ಆರ್‍ಒ) ಮತ್ತು ಒಬ್ಬ ಮಧ್ಯವರ್ತಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ. ಚಿಲುಮೆ ಸಂಸ್ಥೆ ತನ್ನ ಸಿಬ್ಬಂದಿಗಳಿಂದ ಮತದಾರರ ಮಾಹಿತಿ ಸಂಗ್ರಹಿಸಲು ಅನುಕೂಲ ಮಾಡಿಕೊಡುವ ಸಲುವಾಗಿ […]