ಮಹಿಳಾ ನೇತೃತ್ವದ ಅಭಿವೃದ್ಧಿಯನ್ನು ಮುನ್ನಡೆಸುವತ್ತ ಜಿ-20 : ಅಮಿತಾಭ್ ಕಾಂತ್

ಬೆಂಗಳೂರು,ಮಾ.8- ಭಾರತವು ನಿರ್ಣಾಯಕ ಘಟ್ಟದಲ್ಲಿ ಮತ್ತು ಸೂಕ್ತ ಸಮಯದಲ್ಲಿ ʻಜಿ 20ʼ ಅಧ್ಯಕ್ಷತೆಯನ್ನು ವಹಿಸಿಕೊಂಡಿದೆ. ವಿಶ್ವದಾದ್ಯಂತದ ದೇಶಗಳು ಕಳೆದ ಮೂರು ವರ್ಷಗಳಲ್ಲಿ ಅನುಭವಿಸಿದ ಬಿಕ್ಕಟ್ಟುಗಳಿಂದ ʻಉತ್ತಮ ಪುನಶ್ಚೇತನʼಕ್ಕಾಗಿ ನೋಡುತ್ತಿವೆ. ಕೋವಿಡ್ -19 ಸಾಂಕ್ರಾಮಿಕ ರೋಗದಿಂದ ಹಿಡಿದು ಪ್ರಸ್ತುತ ಮುಂದುವರಿದಿರುವ ಹವಾಮಾನ ಬಿಕ್ಕಟ್ಟಿನವರೆಗೆ ಎಲ್ಲಾ ಬಿಕ್ಕಟ್ಟಿನ ಪರಿಣಾಮಗಳು ಯಾವಾಗಲೂ ಲಿಂಗಾಧಾರಿತವಾಗಿವೆ. ಅವುಗಳಿಗೆ ಮಹಿಳೆಯರು ಮತ್ತು ಹುಡುಗಿಯರು ಗರಿಷ್ಠ ಬೆಲೆ ತೆರುತ್ತಾರೆ, ಅವು ಅವರ ಸುರಕ್ಷತೆ, ಜೀವನೋಪಾಯ ಮತ್ತು ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ ಎಂಬುದು ಸರ್ವ ಸಮ್ಮತ ವಿಷಯವೇ […]

ಸವಾಲುಗಳನ್ನು ಮೆಟ್ಟಿ ನಿಂತರೆ ಸಮಗ್ರ ಅಭಿವೃದ್ಧಿ: ಪ್ರಧಾನಿ ಮೋದಿ

ನವದೆಹಲಿ,ಮಾ.2- ಜಾಗತಿಕ ಸವಾಲುಗಳು, ಬೌಗೋಳಿಕ ರಾಜಕೀಯ ಸಂಘರ್ಷ ಮೀರಿ ಪರಸ್ಪರ ಒಮ್ಮತದ ಮೂಲಕ ಜಿ-20 ಶೃಂಗ ರಾಷ್ಟ್ರಗಳು ಅಭಿವೃದ್ಧಿಯತ್ತ ಹೆಜ್ಜೆ ಹಾಕಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಜಿ-20 ಶೃಂಗದ ಭಾರತೀಯ ಅಧ್ಯಕ್ಷೀಯ ಅವ ಭಾಗವಾಗಿ ಆಯೋಜಿಸಲಾಗಿರುವ ವಿದೇಶಾಂಗ ಸಚಿವರ ಸಭೆಯಲ್ಲಿ ಮೋದಿ ತಮ್ಮ ವೀಡಿಯೊ ಸಂದೇಶದ ಭಾಷಣ ಮಾಡಿದರು. ತಮ್ಮ ಭಾಷಣದಲ್ಲಿ ಮಹಾತ್ಮ ಗಾಂಧಿ ಮತ್ತು ಬುದ್ಧರನ್ನು ಪ್ರಧಾನಿ ಉಲ್ಲೇಖಿಸಿದರು. ನಮ್ಮನ್ನು ವಿಭಜಿಸುವುದರ ಮೇಲೆ ಗಮನ ಕೇಂದ್ರೀಕರಿಸದೆ, ನಮ್ಮನ್ನು ಒಂದುಗೂಡಿಸುವ ಬಗ್ಗೆ ಭಾರತದ […]

ರಾಜಸ್ಥಾನದ ಉದಯಪುರದಲ್ಲಿ G-20 ಶೃಂಗದ ಪ್ರತಿನಿಧಿಗಳ ಸಭೆ

ಉದಯಪುರ,ಡಿ.4- ಜಿ-20 ಶೃಂಗದ ಸದಸ್ಯತ್ವ ಹೊಂದಿರುವ ದೇಶದ ಪ್ರತಿನಿಧಿಗಳ ಸಭೆ ರಾಜಸ್ಥಾನದ ಉದಯಪುರದಲ್ಲಿಂದು ನಡೆದಿದೆ. ಭಾರತ ಜಿ-20 ಶೃಂಗದ ಅಧ್ಯಕ್ಷತೆ ವಹಿಸಿಕೊಂಡ ಬಳಿಕ ನಡೆಯುತ್ತಿರುವ ಅಂತಾರಾಷ್ಟ್ರೀಯ ಮಟ್ಟದ ಸಭೆ ಇದಾಗಿದ್ದು, ಪ್ರಧಾನಿ ನರೇಂದ್ರಮೋದಿ ಶುಭ ಹಾರೈಸಿದ್ದಾರೆ. ಕೆರೆಗಳ ನಗರ ಉದಯಪುರ, ವಿದೇಶಿ ಅತಿಥಿಗಳನ್ನು ಸತ್ಕರಿಸಲು ಸಂಭ್ರಮಿಸುತ್ತದೆ. ಜಿ-20 ಶೃಂಗದ ರಾಷ್ಟ್ರಗಳ ಕಾರ್ಯಾಂಗದ ಪ್ರತಿನಿಧಿಗಳು ರಾಜಸ್ಥಾನದ ಸೌಂದರ್ಯವನ್ನು ಸವಿಯಲಿದ್ದಾರೆ ಎಂದು ಹೇಳಿದ್ದಾರೆ. ಇಂದಿನಿಂದ ನಾಲ್ಕು ದಿನಗಳ ಕಾಲ ನಡೆಯುವ ಸಮಾವೇಶ ಸಂಜೆ 5 ಗಂಟೆಗೆ ಆರಂಭವಾಗಲಿದೆ. ಸಭೆಯಲ್ಲಿ ಸದಸ್ಯ […]

ಭಾರತದ ಜಿ20 ಅಧ್ಯಕ್ಷ ಸ್ಥಾನಕ್ಕೆ ಅಮೆರಿಕ ಬೆಂಬಲ

ವಾಷಿಂಗ್ಟನ್, ಡಿ 1 – ಪ್ರಸ್ತುತ ಆಹಾರ ಮತ್ತು ಇಂಧನ ಭದ್ರತೆ ಸವಾಲುಗಳನ್ನು ಎದುರಿಸುವುದು ಸೇರಿದಂತೆ ಹಲವಾರು ವಿಷಯಗಳ ಕುರಿತು ಭಾರತದ ಜಿ-20 ಅಧ್ಯಕ್ಷ ಸ್ಥಾನವನ್ನು ಬೆಂಬಲಿಸಲು ಅಮೆರಿಕ ಎದುರು ನೋಡುತ್ತಿದೆ ಎಂದು ಶ್ವೇತಭವನ ತಿಳಿಸಿದೆ. ಇಂಡೋನೇಷ್ಯಾ ಬಾಲಿಯಲ್ಲಿ ನಡೆದ ಎರಡು ದಿನಗಳ ಜಿ-20 ಶೃಂಗಸಭೆಯ ಕೊನೆಯಲ್ಲಿ ಪ್ರಭಾವಿ ಅಧ್ಯಕ್ಷ ಸ್ಥಾನವನ್ನು ಭಾರತಕ್ಕೆ ಹಸ್ತಾಂತರಿಸಲಾಯಿತು. ಅದರಂತೆ ಭಾರತವು ಇಂದು ಔಪಚಾರಿಕವಾಗಿ ಜಿ-20 ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡಿದೆ. ಪ್ರಸ್ತುತ ಆಹಾರ ಮತ್ತು ಇಂಧನ ಭದ್ರತೆ ಸವಾಲುಗಳನ್ನು ಎದುರಿಸುವುದು ಸೇರಿದಂತೆ […]