ನ.2ರಿಂದ ಜಾಗತಿಕ ಹೂಡಿಕೆದಾರರ ಸಮಾವೇಶ, 5 ಲಕ್ಷ ಕೋಟಿ ಬಂಡವಾಳ ನಿರೀಕ್ಷೆ

ಬೆಂಗಳೂರು,ಅ.31- ಕೈಗಾರಿಕಾ ವಲಯದಲ್ಲಿ ಹೊಸ ಕ್ರಾಂತಿ ಸೃಷ್ಟಿಸುವ ಹಾಗೂ ಉದ್ಯೋಗದಲ್ಲಿ ಹೊಸ ಭವಿಷ್ಯ ಬರೆಯಬಹುದೆಂದು ನಿರೀಕ್ಷಿಸಲಾಗಿರುವ ಜಾಗತಿಕ ಹೂಡಿಕೆದಾರರ ಸಮಾವೇಶ ನವೆಂಬರ್ 2ರಿಂದ 4ರವರೆಗೆ ಬೆಂಗಳೂರು ಪ್ಯಾಲೇಸ್ನಲ್ಲಿ ನಡೆಯಲಿದೆ. ಬಿಲ್ಡ್ ಫಾರ್ ದಿ ವಲ್ರ್ಡ್ ಎಂಬ ಪರಿಕಲ್ಪನೆಯೊಂದಿಗೆ ಮೂರು ದಿನಗಳ ಕಾಲ ನಡೆಯಲಿರುವ ಇನ್ವೆಸ್ಟ್ ಕರ್ನಾಟಕ 2022 ಜಾಗತಿಕ ಸಮಾವೇಶಕ್ಕೆ ಫ್ರಾನ್ಸ್, ನೆದರ್ಲ್ಯಾಂಡ್, ಜರ್ಮನಿ, ಜಪಾನ್, ದಕ್ಷಿಣ ಕೊರಿಯಾ, ಆಸ್ಟ್ರೇಲಿಯಾ ಸೇರಿದಂತೆ ವಿವಿಧ ದೇಶಗಳನ್ನು ಪಾಲುದಾರ ರಾಷ್ಟ್ರಗಳನ್ನಾಗಿ ಮಾಡಿಕೊಳ್ಳಲಾಗಿದೆ. ಸಮಾವೇಶಕ್ಕೆ ಬೆಂಗಳೂರು ಪ್ಯಾಲೇಸ್ ಸಿದ್ದಗೊಂಡಿದ್ದು ವಿಶ್ವದ ಮುಂಚೂಣಿಯಲ್ಲಿರುವ […]