3 ದಿನ ಸರಕು ಸಾಗಣೆ ವಾಹನಗಳ ಬೆಂಗಳೂರು ಪ್ರವೇಶ ನಿಷೇಧ

ಬೆಂಗಳೂರು,ಫೆ.4- ಪ್ರಧಾನಿ ನರೇಂದ್ರಮೋದಿ ಅವರು ಸೋಮವಾರ ರಾಜ್ಯಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಭದ್ರತಾ ದೃಷ್ಟಿಯಿಂದ ಸಂಚಾರ ವ್ಯವಸ್ಥೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ. ಮುಖ್ಯವಾಗಿ ಬೆಂಗಳೂರು – ತುಮಕೂರು ರಸ್ತೆಯಲ್ಲಿ ವಾಹನ ಸಂಚಾರ ವ್ಯವಸ್ಥೆಯಲ್ಲಿ ಕೆಲವೊಂದು ಬದಲಾವಣೆ ಮಾಡಲಾಗಿದೆ. ಫೆಬ್ರವರಿ 5, 6, 7ರಂದು ಬೆಂಗಳೂರು ನಗರದೊಳಗೆ ಎಲ್ಲಾ ರೀತಿಯ ಲಘು, ಮಧ್ಯಮ ಹಾಗೂ ಭಾರಿ ಸರಕು ಸಾಗಣೆ ವಾಹನಗಳಿಗೆ ಬೆಳಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆ ತನಕ ಸಂಚಾರ ನಿರ್ಬಂಧವಿದೆ. ತುಮಕೂರು ರಸ್ತೆಯಿಂದ ಬೆಂಗಳೂರು ನಗರದೊಳಗೆ ಸರಕು […]

ಪ್ಲಾಟ್‍ಫಾರ್ಮ್‍ಗೆ ಗೂಡ್ಸ್ ರೈಲು ಡಿಕ್ಕಿ : ಇಬ್ಬರು ಸಾವು

ಜಾಜ್‍ಪುರ (ಒಡಿಶಾ), ನ.21-ಗೂಡ್ಸ್ ರೈಲು ಹಳಿತಪ್ಪಿ ಕನಿಷ್ಠ ಇಬ್ಬರು ಸಾವನ್ನಪ್ಪಿ ,ಕೆಲವರು ಗಂಭೀರವಾಗಿ ಗಾಯಗೊಂಡಿದ್ದಾರೆ ಘಟನೆ ಇಂದು ಬೆಳಿಗ್ಗೆ ಜಾಜ್‍ಪುರ ಜಿಲ್ಲೆಯ ಕೊರೆ ರೈಲು ನಿಲ್ದಾಣದಲ್ಲಿ ನಡೆದಿದೆ. ಇಂದು ಬೆಳಗ್ಗೆ ಸುಮಾರು 6.45ರ ಸುಮಾರಿಗೆ ಕೆಲವರು ಪ್ಯಾಸೆಂಜರ್ ರೈಲಿಗಾಗಿ ಪ್ಲಾಟ್‍ಫಾರ್ಮ್‍ನಲ್ಲಿ ಕಾಯುತ್ತಿದ್ದಾಗ ಡೊಂಗೋ ಆಪೋಸಿಯಿಂದ ಛತ್ರಪುರಕ್ಕೆ ಚಲಿಸುತ್ತಿದ್ದ ಗೂಡ್ಸ್ ರೈಲಿನ ಎಂಟು ವ್ಯಾಗನ್‍ಗಳು ಹಳಿ ತಪ್ಪಿ ಪ್ಲಾಟ್‍ಫಾರ್ಮ್ ಮತ್ತು ವೇಟಿಂಗ್ ಹಾಲ್‍ಗೆ ಢಿಕ್ಕಿ ಹೊಡೆದು ಈ ಅವಘಡ ಸಂಭವಿಸಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಇಬ್ಬರು ಸ್ಥಳದಲ್ಲೇ […]

ಹಳಿ ತಪ್ಪಿದ ಗೂಡ್ಸ್ ರೈಲು

ನಾಗ್ಪುರ. ಅ,24- ಕಲ್ಲಿದ್ದಲು ಸಾಗಿಸುತ್ತಿದ್ದ ಗೂಡ್ಸ್ ರೈಲು ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯಲ್ಲಿ ಹಳಿತಪ್ಪಿದ್ದು ಇದರಿಂದ ಈ ಭಾಗದಲ್ಲಿ ರೈಲು ಸಂಚಾರ ವ್ಯತ್ಯಯವಾಗಿದೆ. ಸುಮಾರು ಇಪ್ಪತ್ತು ವ್ಯಾಗನ್‍ಗಳು ಹಳಿಯಿಂದ ಉರುಳಿದ್ದು, ಇದರಿಂದಾಗಿ ಅನೇಕ ಪ್ರಯಾಣಿಕ ರೈಲುಗಳನ್ನು ರದ್ದುಗೊಳಿಸಲಾಗಿದೆ, ಕೆಲವು ರೈಲಿನ ಮಾರ್ಗವನ್ನು ಬದಲಿಸಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ನಾಗ್ಪುರ ವಿಭಾಗದ ವಾರ್ಧಾ-ಬಡದೀರಾ ವಿಭಾಗದ ಮಲ್ಖೇಡ್ ಮತ್ತು ತಿಮಟ್ಲಾ ನಿಲ್ದಾಣಗಳ ನಡುವೆ ಕಳೆದ ರಾತ್ರಿ 11.20 ಕ್ಕೆ ಈ ಘಟನೆ ನಡೆದಿದ್ದು , ಯಾವುದೇ ಪ್ರಾಣಹಾನಿಯಾಗಿರುವ ಬಗ್ಗೆ ವರದಿಯಾಗಿಲ್ಲ […]

ಕಾಸಿಯಾದಲ್ಲಿ ಅ.21ರಿಂದ ಕೈಗಾರಿಕಾ ವಸ್ತು ಪ್ರದರ್ಶನ

ಕೇಂದ್ರದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವಾಲಯ, ಬೆಂಗಳೂರಿನ ಎಂಎಸ್‍ಎಂಇ ಹಾಗೂ ಅಭಿವೃದ್ಧಿ ಮತ್ತು ಸೌಲಭ್ಯ ಕಛೇರಿ ಸಹಯೋಗದಲ್ಲಿ ಇದೇ 21 ಮತ್ತು 22 ರಂದು ಕಾಸಿಯ ಉದ್ಯೋಗ ಭವನದಲ್ಲಿ ಮಾರಾಟಗಾರರ ಅಭಿವೃದ್ಧಿ ಕಾರ್ಯಕ್ರಮ ಮತ್ತು ಕೈಗಾರಿಕ ವಸ್ತು ಪ್ರದರ್ಶನ ಆಯೋಜಿಸುತ್ತಿದೆ

61 ಆರೋಪಿಗಳ ಬಂಧನ : 2 ಕೋಟಿ ಮಾಲು ವಶ

ಬೆಂಗಳೂರು,ಆ.17- ಉತ್ತರ ವಿಭಾಗದ ಪೊಲೀಸರು ಮಾದಕವಸ್ತು, ರಕ್ತ ಚಂದನ, ಸುಲಿಗೆ, ಸರಗಳ್ಳತನ, ಮೊಬೈಲ್ ಸುಲಿಗೆ, ಮನೆ ಕಳವು, ಸೇವಕರಿಂದ, ವಾಹನ ಕಳವು ಪ್ರಕರಣ ಗಳಲ್ಲಿ ಭಾಗಿಯಾಗಿದ್ದ 61 ಮಂದಿ ಆರೋಪಿ ಗಳನ್ನು ಬಂಧಿಸಿ 89 ಪ್ರಕರಣಗಳನ್ನು ಪತ್ತೆ ಹಚ್ಚಿ, ಸುಮಾರು 2.40 ಕೋಟಿ ರೂ. ಬೆಲೆ ಬಾಳುವ ಕಳವು ಮಾಲುಗಳನ್ನು ವಶಪಡಿಸಿಕೊಂಡಿದ್ದಾರೆ. 92 ಲಕ್ಷ ರೂ. ಮೌಲ್ಯದ ಮಾದಕವಸ್ತು ಚರ್ರಸ್ 1.9 ಕೆಜಿ, ಎಂಡಿಎಂಎ 662 ಗ್ರಾಂ, ಗಾಂಜಾ 27.960 ಕೆಜಿ ವಶಪಡಿಸಿಕೊಳ್ಳಲಾಗಿದೆ. 35 ಲಕ್ಷ ರೂ. […]