ಆಸ್ತಿಗಾಗಿ ತಾತನನ್ನೇ ಕೊಂದಿದ್ದ ಮೊಮ್ಮಗನ ಸೆರೆ

ಬೆಂಗಳೂರು,ಆ.20- ಆಸ್ತಿಗಾಗಿ ತನ್ನ ಸ್ವಂತ ತಾತನನ್ನೇ ಕೊಲೆ ಮಾಡಿದ್ದ ಮೊಮ್ಮಗ ಸೇರಿದಂತೆ ಇಬ್ಬರನ್ನು ಯಲಹಂಕ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮೈಸೂರಿನ ಕುವೆಂಪುನಗರದ ಜಯಂತ್ ಅಲಿಯಾಸ್ ಬಳ್ಳೆ(20) ಮತ್ತು ಈತನ ಸ್ನೇಹಿತ ಹಾಸನ ಜಿಲ್ಲೆಯ ಗೊರೂರು ನಿವಾಸಿ ಯಾಸೀನ್(22) ಬಂಧಿತರು. ಯಲಹಂಕದ ಸುರಭಿಲೇಔಟ್, 2ನೇ ಮುಖ್ಯರಸ್ತೆಯಲ್ಲಿ ಪುಟ್ಟಯ್ಯ(70) ಎಂಬುವರು ವಾಸವಾಗಿದ್ದು, ಆ.17ರಂದು ಮುಂಜಾನೆ ಅವರ ಕೊಲೆಯಾಗಿತ್ತು. ಯಲಹಂಕ ಠಾಣೆ ಪೊಲೀಸರು ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಪುಟ್ಟಯ್ಯ ಅವರ ಮೈಮೇಲಿದ್ದ ಚಿನ್ನದ ಒಡವೆಗಳನ್ನು ದೋಚುವ ಉದ್ದೇಶದಿಂದ ಕೊಲೆ ಮಾಡಿರುತ್ತಾರೆಂದು ದೂರು […]