ಅಜ್ಜಿಗೆ ಗುಂಡಿಟ್ಟು ಕೊಂದ 6 ವರ್ಷದ ಬಾಲಕಿ

ವಾಷಿಂಗ್ಟನ್,ಫೆ.18- ಅಮೆರಿಕದಲ್ಲಿ ಗುಂಡಿನ ದಾಳಿ ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ ಆರು ವರ್ಷದ ಬಾಲಕಿಯೊಬ್ಬಳು ತನ್ನ ಅಜ್ಜಿಯನ್ನು ಗುಂಡಿಟ್ಟು ಕೊಂದಿರುವ ಘಟನೆ ಫ್ಲೋರಿಡಾದಲ್ಲಿ ನಡೆದಿದೆ. ಚಲಿಸುತ್ತಿದ್ದ ಕಾರಿನ ಹಿಂಬದಿ ಸೀಟಿನಲ್ಲಿ ಕುಳಿತಿದ್ದ ಬಾಲಕಿ ತನ್ನ 57 ವರ್ಷದ ಅಜ್ಜಿಯನ್ನು ಗುಂಡಿಟ್ಟು ಕೊಂದಿದ್ದಾಳೆ ಎಂದು ಫ್ಲೋರಿಡಾ ಪೊಲೀಸರು ತಿಳಿಸಿದ್ದಾರೆ. ಅಜ್ಜಿಯ ಗನ್ ಹೊರ ತೆಗೆದ ಬಾಲಕಿ ಕಾರು ಓಡಿಸುತ್ತಿದ್ದ ತನ್ನ ಅಜ್ಜಿಯ ಬೆನ್ನಿಗೆ ಶೂಟ್ ಮಾಡಿದ್ದಾಳೆ ಗುಂಡೇಟು ಬಿದ್ದರು ಸಾವರಿಸಿಕೊಂಡ ಅಜ್ಜಿ ತುರ್ತು ಸಹಾಯವಾಣಿ ಸಂಖ್ಯೆ 911 ಗೆ ಕರೆ ಮಾಡಿದ್ದಾರೆ. […]

ಕನ್ಯೆ ಹುಡುಕಾಟದಲ್ಲಿ ರಾಹುಲ್‍ ಗಾಂಧಿ, ಮನದನ್ನೆ ಹೇಗಿರಬೇಕಂತೆ ಗೊತ್ತಾ..?

ನವದೆಹಲಿ,ಡಿ.29- ತಾಯಿ ಸೋನಿಯಾ ಗಾಂಧಿ ಹಾಗೂ ಅಜ್ಜಿ ಇಂದಿರಾ ಗಾಂಧಿ ಅವರಂತಹ ಮಾತೃ ಹೃದಯ ಹೊಂದಿರುವಂತ ಮಹಿಳೆಯೊಂದಿಗೆ ವಿವಾಹವಾಗಲು ಇಚ್ಚಿಸುತ್ತೇನೆ ಎಂದು ರಾಹುಲ್‍ಗಾಂಧಿ ತಿಳಿಸಿದ್ದಾರೆ. ಭಾರತ್ ಜೋಡೊ ಯಾತ್ರೆ ಸಂದರ್ಭದಲ್ಲಿ ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನನ್ನ ಜೀವನದ ಪ್ರೀತಿ ಮತ್ತು ಎರಡನೆ ತಾಯಿ ಮಾಜಿ ಪ್ರಧಾನಿ ದಿವಂಗತ ಇಂದಿರಾಗಾಂಧಿ ಅವರ ಆದರ್ಶ ಮತ್ತು ನನ್ನ ತಾಯಿ ಸೋನಿಯ ಅವರಂತಹ ಮಿಶ್ರ ಗುಣ ಹೊಂದಿರುವ ಯುವತಿ ಸಿಕ್ಕರೆ ನಾನು ವಿವಾಹವಾಗಲು ಸಿದ್ದ ಎಂದು […]